ಗುರುಪುರಶ್ರೀ ವಿರುದ್ಧ ಕೇಸ್
ಮಂಗಳೂರು: ಧರ್ಮದ ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಮೇಲೆ ಗುರುಪುರ ವಜ್ರದೇಹಿ ಮಠದ ಸ್ವಾಮೀಜಿ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಾರ್ಮಿಕ ಆಚರಣೆ, ಧಾರ್ಮಿಕ ಸಭೆಯಲ್ಲಿ ಧರ್ಮವನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ದೂರುದಾರರು ಕೋರ್ಟ್ಗೆ ದೂರು ನೀಡಿದ್ದರು. ಇದೀಗ ಕೋರ್ಟ್ ಪ್ರಕರಣ ದಾಖಲಿಸುವಂತೆ ಬಜಪೆ ಪೊಲೀಸರಿಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ವಾಮೀಜಿ ಶ್ರೀ ರಾಜಶೇಖರಾನಂದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕಾರುಗಳೆರಡು ಡಿಕ್ಕಿ: ಪ್ರಯಾಣಿಕರು ಪಾರು
ವಿಟ್ಲ: ವಿಟ್ಲದ ಉಕ್ಕುಡ ಸಮೀಪ ಎರಡು ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿ ಕಾರೊಂದು ಮಗುಚಿ ಬಿದ್ದ ಘಟನೆ ಬುಧವಾರ ರಾತ್ರಿ ನಡೆದಿದೆ. ಉಕ್ಕುಡ ಸಮೀಪದ ಅಪ್ಪೆರಿಪಾದೆ ಎಂಬಲ್ಲಿಯ ತಿರುವಿನಲ್ಲಿ ಕಾಸರಗೋಡು ಅಡ್ಕತ್ತಬೈಲಿನಿಂದ ಪುತ್ತೂರಿಗೆ ವೇಗವಾಗಿ ಬರುತ್ತಿದ್ದ ಕಾರು ವಿಟ್ಲ ಕಡೆಯಿಂದ ಕನ್ಯಾನ ಕಡೆ ಸಾಗುತ್ತಿದ್ದ ಉದ್ಯಮಿ ಶ್ರೀಧರ ಶೆಟ್ಟಿ ಗುಬ್ಯ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾಸರಗೋಡು ಅಡ್ಕತ್ತಬೈಲಿನಿಂದ ಬರುತ್ತಿದ್ದ ಕಾರು ರಸ್ತೆಯಲ್ಲಿ ಉರುಳಿ ಬಿದ್ದಿದ್ದು, ನಜ್ಜುಗುಜ್ಜಾಗಿದೆ. ಕಾರಿನೊಳಗೆ ಮಕ್ಕಳು ಸಹಿತ ಆರು ಮಂದಿ ಇದ್ದು, ಮಗುವೊಂದು ಗಾಯಗೊಂಡು, ಉಳಿದವರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
40 ಕಿಲೊ ಗೋಧಿ ಕದ್ದು ಜೈಲು ಸೇರಿದರು
ಮಂಗಳೂರು: ಬಂದರು ಸಿಸಿಎಲ್ ಗೋದಾಮಿನಿಂದ ಗೋಧಿ ಕದಿಯುತ್ತಿದ್ದ ಲಾರಿ ಚಾಲಕ ಮತ್ತು ಕ್ಲೀನರ್ನನ್ನು ಪೊಲೀಸರು ಬಂಧಿಸಿದ್ದಾರೆ. ನವಮಂಗಳೂರು ಬಂದರಿಂದ ಯೂರಿಯ ಲೋಡ್ ಮಾಡಿ ಬಂದರಲ್ಲಿ ಅನ್ ಲೋಡ್ ಮಾಡುತ್ತಿದ ್ದವೇಳೆ ಟಿಪ್ಪರ್ ಲಾರಿ ಚಾಲಕ ಸಂತೋಷ ಮತ್ತು ಕ್ಲೀನರ್ ಮಂಜುನಾಥ ಬಂದರು ಅಂಗಡಿಯಲ್ಲಿ 40 ಕಿಲೊ ಗೋಧಿ ಕದ್ದು ಲಾರಿ ಕ್ಯಾಬಿನ್ಗೆ ಹಾಕಿದ್ದರು. ಇದನ್ನು ಕಾವಲುಗಾರ ಗುಣಸೇಖರನ್ ನೋಡಿ ಪೊಲೀಸರಿಗೆ ಆರೋಪಿಗಳನ್ನು ಹಸ್ತಾಂತರಿಸಿದರು. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೊಳೆಗೆ ಹಾರಿದ
ಮಹಿಳೆಯ ರಕ್ಷಣೆ
ಮಂಗಳೂರು: ಕುಳೂರು ಸೇತುವೆ ಮೇಲಿಂದ ಹಾರಿ ಪ್ರಾಣತ್ಯಾಗಕ್ಕೆ ಯತ್ನಿಸಿದ ಮಹಿಳೆಯನ್ನು ಸ್ಥಳೀಯರು ಹೊಳೆಗೆ ಹಾರಿ ರಕ್ಷಿಸಿದ್ದಾರೆ. ಗುರುವಾರ ಬೆಳಗ್ಗಿನ ಜಾವ 5 ಅಡಿ ಎತ್ತರದ ಕ್ರೈಸ್ತ ಮಹಿಳೆ ಹೊಳೆಗೆ ಹಾರಿದಳು. ಇದನ್ನು ನೋಡಿ ಸ್ಥಳೀಯರು ಜಮಾಯಿಸಿದರು. ಕೆಲವರು ಹೊಳೆಗೆ ಹಾರಿ ಆಕೆಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದರು. ಆತ್ಮಹತ್ಯೆ ಯತ್ನಕ್ಕೆ ಕಾರಣಗಳು ತಿಳಿದುಬಂದಿಲ್ಲ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

