ಮತಪಟ್ಟಿ ಸೇರ್ಪಡೆ: ಆನ್,ಲೈನ್ ನೀರಸ, ಕಚೇರಿಗೆ ಧಾವಂತ
ಮಂಗಳೂರು: ಭಾರತೀಯ ಚುನಾವಣಾ ಆಯೋಗ ನಿರ್ದೇಶನದಂತೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ಹಮ್ಮಿಕೊಂಡ ಮತದಾರ ಪಟ್ಟಿ ಸೇರ್ಪಡೆಯ 'ಸ್ವೀಪ್,' (ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಚುನಾವಣಾ ಪಾಲ್ಗೊಳ್ಳುವಿಕೆ) ವಿಶೇಷ ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದರೂ ಆನ್,ಲೈನ್ ಮೂಲಕ ನೋಂದಣಿಗೆ ಜನಸ್ಪಂದನ ನೀರಸ.
ಮತದಾರರ ಪಟ್ಟಿ ನೋಂದಣಿ ಕಾರ್ಯಕ್ರಮ ನಿರಂತರವಾದರೂ ಮಾ.23ರಿಂದ ಏ.7ರ ವರೆಗೆ ವಿಶೇಷ ಅಭಿಯಾನ ಯುವ ಮತದಾರರನ್ನು ಮತಗಟ್ಟೆಯತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ನಾಲ್ಕು ದಿನಗಳಲ್ಲಿ ಜಿಲ್ಲೆಯಲ್ಲಿ 18,344 ಮಂದಿ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಗುಜರಾಯಿಸಿದ್ದಾರೆ. ಇದರಲ್ಲಿ ಆನ್,ಲೈನ್ ಮೂಲಕ ನೋಂದಣಿ ಮಾಡಿದವರೂ ಇದ್ದಾರೆ.
ಆನ್,ಲೈನ್,ಗಿಲ್ಲ ಸ್ಪಂದನ: ಮತದಾರರ ಪಟ್ಟಿ ನೋಂದಣಿಗೆ ಸುಲಭವಾಗಲು ಆನ್,ಲೈನ್ ಮೂಲಕವೂ ಅವಕಾಶ ಕಲ್ಪಿಸಲಾಗಿತ್ತು. ಆದರೆ ಅದನ್ನು ಬಳಸಿದವರು ಕಡಿಮೆ. ಆದಷ್ಟು ಮಂದಿ ನೋಂದಣಿ/ಸಹಾಯ ಕೇಂದ್ರವನ್ನೇ ಆಶ್ರಯಿಸುತ್ತಿದ್ದಾರೆ. ಹಾಗಾಗಿ ಈ ಕೇಂದ್ರಗಳಲ್ಲಿ ನಿತ್ಯ ನೂಕುನುಗ್ಗಲು.
ಆನ್,ಲೈನ್ ಮೂಲಕ ಗುರುವಾರವರೆಗೆ ಒಟ್ಟು 118 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಬೆಳ್ತಂಗಡಿ 8, ಮಂಗಳೂರು 87, ಬಂಟ್ವಾಳ 10, ಪುತ್ತೂರು 13. ಸುಳ್ಯದಿಂದ ಅರ್ಜಿ ಸಲ್ಲಿಕೆಯಾಗಿಲ್ಲ. ಮಂಗಳೂರು ತಹಸೀಲ್ದಾರ್ ಕಚೇರಿಯಲ್ಲಿ ಮಂಗಳೂರು, ಮಂಗಳೂರು ದಕ್ಷಿಣ ಹಾಗೂ ಉತ್ತರ ಕ್ಷೇತ್ರಗಳ ಆನ್,ಲೈನ್ ಅರ್ಜಿ ಸಲ್ಲಿಕೆಯಾಗಿದೆ. ಆನ್,ಲೈನ್,ನಲ್ಲಿ ಅರ್ಜಿ ಸಲ್ಲಿಸಿದರೂ ಬಳಿಕ ಅಗತ್ಯ ದಾಖಲೆಗಳನ್ನು ಖುದ್ದು ನೀಡಬೇಕಿರುವುದರಿಂದ ಜನತೆ ಸಹಾಯ ಕೇಂದ್ರಕ್ಕೆ ತೆರಳಿ ನೋಂದಣಿಗೆ ಉತ್ಸುಕರಾಗಿದ್ದಾರೆ.
ಆಗಿಲ್ಲ, ಈಗ ನೂಕುನುಗ್ಗಲು: ಮೊನ್ನೆ ನವೆಂಬರ್,ನಲ್ಲಿ ಒಂದು ತಿಂಗಳು ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆಗೆ ಚುನಾವಣಾ ಆಯೋಗ ಅವಕಾಶ ನೀಡಿತ್ತು. ಆಗ ಪ್ರಚಾರ ನೀಡಿದ್ದರೂ ಜನತೆ ಈ ವಿಶೇಷ ಅಭಿಯಾನಕ್ಕೆ ಹೆಚ್ಚಿನ ರೀತಿಯಲ್ಲಿ ಸ್ಪಂದಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ನವೆಂಬರ್,ನಿಂದ ಡಿಸೆಂಬರ್,ಗೆ ಅವಧಿ ವಿಸ್ತರಿಸಿ ಜನವರಿಯಲ್ಲಷ್ಟೇ ಮತದಾರರ ಕರಡು ಪಟ್ಟಿಯನ್ನು ಆಯೋಗ ಪ್ರಕಟಿಸಿತ್ತು. ಅಷ್ಟಾಗಿಯೂ ಆಗ ನಿರೀಕ್ಷಿತ ಸ್ಪಂದನ ಸಿಕ್ಕಿರಲಿಲ್ಲ. ಆಗ ಆಸಕ್ತಿ ತೋರಿಸದ ಜನತೆ ಈಗ ಏಕಾಏಕಿ ಆಂದೋಲನ ಪರಿಣಾಮ ಸಹಾಯ ಕೇಂದ್ರಕ್ಕೆ ಧಾವಿಸುತ್ತಿದ್ದಾರೆ.
ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ ಕಂದಾಯ ಕಚೇರಿಗಳಲ್ಲಿ, ಗ್ರಾಮ ಮಟ್ಟದಲ್ಲಿ ಸಹಾಯ ಕೇಂದ್ರ ತೆರೆಯಲಾಗಿದ್ದು, ಮಂಗಳೂರು ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ ಮತ್ತು ಕದ್ರಿಯಲ್ಲಿ ವಿಶೇಷ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ.
ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ, ರಜಾದಿನವೂ ಇದು ಕಾರ್ಯನಿರ್ವಹಿಸುತ್ತಿದೆ. ಮತದಾರರ ಪಟ್ಟಿ ನೋಂದಣಿ, ಆನ್,ಲೈನ್ ದಾಖಲಾತಿಗೆ ಇಲ್ಲಿಯೂ ಅವಕಾಶ.
ಕಳೆದ ಮೂರ್ನಾಲ್ಕು ದಿನಗಳಿಂದ ಇಲ್ಲಿಯೂ ಕಿಕ್ಕಿರಿದ ಜನಸಂದಣಿ. ಮತದಾರರ ಪಟ್ಟಿ ಹೆಸರು ಸೇರ್ಪಡೆಗೆ ಯುವ ದಂಡು ಸರತಿಯ ಸಾಲಿನಲ್ಲಿ ಕಾಯುತ್ತಿದ್ದರೆ, ಹೆಸರು ತಿದ್ದುಪಡಿ, ಪರಿಶೀಲನೆ, ವರ್ಗಾವಣೆಗೆ ಆಗಮಿಸುವವರೂ ಇದ್ದಾರೆ. ಈ ಕೇಂದ್ರಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ದಿನ ಕರ್ತವ್ಯ ನಿರ್ವಹಣೆ.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ 9484, ಹೆಸರು ತೆಗೆದುಹಾಕಲು 4200, ತಿದ್ದುಪಡಿಗೆ 4434 ಹಾಗೂ ವರ್ಗಾವಣೆ ಕೋರಿ 108 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆನ್,ಲೈನ್ ಸೇರಿದಂತೆ ಒಟ್ಟು 18,344 ಅರ್ಜಿ ಸಲ್ಲಿಕೆಯಾಗಿದ್ದು, 7240 ಅರ್ಜಿಯನ್ನು ವಿಲೇವಾರಿ ಮಾಡಿದ್ದು, 10866 ಅರ್ಜಿ ವಿಲೇವಾರಿಗೆ ಬಾಕಿ ಇದೆ.
ಪೋಸ್ಟರ್ ಕಮಾಲ್: ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ ಜನತೆಯನ್ನು ಜಾಗೃತಿಗೊಳಿಸುವ ಬ್ಯಾನರ್, ಪೋಸ್ಟರ್,ಗಳನ್ನು ಜಿಲ್ಲಾಡಳಿತ ಅಲ್ಲಲ್ಲಿ ಅಳವಡಿಸಿದೆ. ಧ್ವನಿವರ್ಧಕ ಮುಖೇನ ಜನತೆಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯುತ್ತಿದೆ. ಈ ಬಾರಿ ಗರಿಷ್ಠ ಪ್ರಮಾಣದಲ್ಲಿ ಮತದಾರರ ನೋಂದಣಿ ಜತೆಗೆ ಅಧಿಕ ಮತದಾನ ಆಗಬೇಕು ಎಂಬ ಉದ್ದೇಶ ಜಿಲ್ಲಾಡಳಿದ್ದು.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

