ಬಸ್ ಪಲ್ಟಿ: ಪ್ರಯಾಣಿಕರಿಗೆ ಗಾಯ
ಮಂಗಳೂರು: ಕುಲಶೇಖರ ಕಲ್ಪಣೆ ಬಳಿ ಶನಿವಾರ ಖಾಸಗಿ ಬಸ್ ಪಲ್ಟಿಯಾಗಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಶಕ್ತಿನಗರದತ್ತ ಬಸ್ ವೇಗವಾಗಿ ತೆರಳುತ್ತಿದ್ದ ವೇಳೆ ಅಪಘಾತವಾಗಿದೆ.
ಗಾಯಗೊಂಡ ಪ್ರಯಾಣಿಕರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕದ್ರಿ ಮತ್ತು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಬಸ್ ಚಾಲಕ ವೇಗವಾಗಿ ಚಲಾಯಿಸುತ್ತಿದ್ದು, ಹೊಂಡ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಪಲ್ಟಿಯಾಯಿತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಪ್ರಣಾಳಿಕೆಯಲ್ಲಿ ಸಹಕಾರ ಅಂಶ ಸೇರ್ಪಡೆಗೆ ಮನವಿ
ಮಂಗಳೂರು: ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಸಹಕಾರ ರಂಗಗಳ ಸುಧಾರಣೆಯ ಅಂಶಗಳನ್ನು ಅಳವಡಿಸುವಂತೆ ರಾಜ್ಯ ಪ್ರಾಂತ್ಯದ ಸಹಕಾರ ಭಾರತಿ ಪ್ರಚಾರಕ ರಾಧಾಕೃಷ್ಣ ಕೋಟೆ ಆಗ್ರಹಿಸಿದ್ದಾರೆ.
ಸಹಕಾರ ರಂಗಗಳು ಕೃಷಿ, ಕೈಗಾರಿಕೆ, ಉದ್ದಿಮೆಗಳು ಸರ್ಕಾರಿ ವ್ಯವಸ್ಥೆಯಿಂದ ಖಾಸಗಿತನ ಹೊರಳುತ್ತಿದೆ. ಈ ಸಂದರ್ಭ ಸಹಕಾರ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುವ ನೀತಿ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ ನೇರ ತೆರಿಗೆ ಸಂಹಿತೆ-2010 ಜಾರಿಗೆ ತಂದಿದ್ದು, ಇದರಲ್ಲಿ ಗ್ರಾಹಕ ಮತ್ತು ಮಾರುಕಟ್ಟೆ ವ್ಯವಹಾರದ ತೆರಿಗೆಯಲ್ಲಿ ವಿಶೇಷ ತೆರಿಗೆ ವಿನಾಯಿತಿ ನೀಡಬೇಕು. ಸಹಕಾರ ಶಿಕ್ಷಣ, ಸಂಶೋಧನೆ, ಅಭಿವೃದ್ಧಿ ಹಾಗೂ ವೃತ್ತಿಪರತೆಗೆ ವಿಶೇಷ ಮಹತ್ವ ನೀಡುವ ಸಲುವಾಗಿ ರಾಜ್ಯದಲ್ಲಿ ಸಹಕಾರಿ ಶಿಕ್ಷಣ ಸಂಸ್ಥೆ ಸ್ವರೂಪದ ಸಹಕಾರಿ ಮಹಾವಿದ್ಯಾಲಯ ಸ್ಥಾಪನೆಯಾಗಬೇಕು. ರಾಜ್ಯದ ಸಹಕಾರಿ ನಿಬಂಧಕರ ನ್ಯಾಯಾಲಯದಲ್ಲಿ ಸುಮಾರು 60 ಸಾವಿರದಷ್ಟು ವ್ಯಾಜ್ಯಗಳಿದ್ದು, ಕನಿಷ್ಠ ಜಿಲ್ಲೆಗೊಂದರಂತೆ ಪ್ರತ್ಯೇಕ ನ್ಯಾಯಾಲಯ ವ್ಯವಸ್ಥೆಯಾಗಬೇಕು. ಸಹಕಾರದ ನಿರ್ದೇಶಕರನ್ನು ಪ್ರತಿನಿಧಿಸಿ ವಿಧಾನಸಭಾ ಪರಿಷತ್ತಿನಲ್ಲಿ ಸ್ಥಾನ ದೊರಕಬೇಕು. ಪ್ರಾಥಮಿಕ ಸಂಘಗಳಿಗೆ ಹೊರೆಯಾಗದಂತೆ ಸಾಲಮನ್ನಾ, ಬಡ್ಡಿಮನ್ನಾಕ್ಕೆ ಸ್ಪಷ್ಟ ನೀತಿ ಬೇಕು. ಪ್ರೊ.ವೈದ್ಯನಾಥನ್ ವರದಿ ಸಂಪೂರ್ಣ ಜಾರಿಗೆ ತರಬೇಕು. ರಾಜ್ಯದ 1959 ಕಾಯ್ದೆಯ ಸಹಕಾರಿ ಸಂಘಗಳ ಮೇಲ್ವಿಚಾರಣೆಗೆ ಚುನಾಯಿತ ಪ್ರತಿನಿಧಿಗಳ ಕಾನೂನುಬದ್ಧ ಮಂಡಳಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮಾದರಿಯಲ್ಲಿ ರಚನೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

