ದಕ್ಷಿಣ ಕನ್ನಡ

ಮಾಜಿ ಶಾಸಕರ ಪುತ್ರ 2 ಬಾರಿ ಬಿಜೆಪಿ ಸೇರ್ಪಡೆ!

Published On :

ಮಂಗಳೂರು: ಎಚ್‌ಎಂಎಸ್ ಕಾರ್ಮಿಕ ಸಂಘಟನೆ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಬುಧವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಎರಡನೇ ಬಾರಿ ಬಿಜೆಪಿ ಸೇರಿದರು. ಇತ್ತೀಚೆಗೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಸಮ್ಮುಖ ಧ್ವಜ ಹಿಡಿದು ಪಕ್ಷ ಸೇರಿದ್ದರು.
 ಅದಕ್ಕೆ ಸಾಕಷ್ಟು ಪ್ರಚಾರ ಸಿಗದ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಆದರೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯದೆ ಸುದ್ದಿಗೋಷ್ಠಿ ನಡೆಸಿದರೆ ಗೊಂದಲ ಉಂಟಾಗಬಹುದು ಎಂಬ ಕಾರಣಕ್ಕೆ ಸುದ್ದಿಗೋಷ್ಠಿಯನ್ನು ತಕ್ಷಣ ಪಕ್ಷ ಸೇರ್ಪಡೆ ಕಾರ್ಯಕ್ರಮವಾಗಿ ಬದಲಾಯಿಸಿಕೊಳ್ಳಲಾಯಿತು.   ಈ ಬಗ್ಗೆ ಬಿಜೆಪಿ ಮಾಧ್ಯಮ ವಕ್ತಾರ ರಾಜಗೋಪಾಲ ರೈ ಅವರ ಬಳಿ ಪ್ರಶ್ನಿಸಿದಾಗ ಅವರು ಹೇಳಿದ್ದು ಹೀಗೆ: ಆರಂಭದಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗದೆ ಸುದ್ದಿಗೋಷ್ಠಿ ಮಾಡಿದರೆ ಸಮಸ್ಯೆ ಆಗಬಹುದು, ಪ್ರಶ್ನೆಗಳಿಗೆ ಉತ್ತರ ನೀಡಲು ಕಷ್ಟ ಆಗಬಹುದು ಎಂಬ ಕಾರಣಕ್ಕೆ ಹಿರಿಯ ನಾಯಕರ ಸಲಹೆಯಂತೆ ಸುದ್ದಿಗೋಷ್ಠಿ ರದ್ದು ಮಾಡಿ, ಪಕ್ಷ ಸೇರ್ಪಡೆ ಕಾರ್ಯಕ್ರಮ ಮಾಡಿದೆವು' ಎಂದರು.
 ಆದರೆ ಕಾರ್ಯಕ್ರಮ ಬದಲಾಯಿಸಿದ ಬಗ್ಗೆ ಮಾಧ್ಯಮದವರಿಗೆ ಒಂಚೂರು ಮಾಹಿತಿ ನೀಡಿರಲಿಲ್ಲ. ಕಾರ್ಯಕ್ರಮದಲ್ಲಿಯೂ ಈ ವಿಚಾರ ಹೇಳಲೇ ಇಲ್ಲ.
ತಂದೆ ಹೇಳಿದ್ದರು: ಸುರತ್ಕಲ್ ಮಾಜಿ ಶಾಸಕ ಲೋಕಯ್ಯ ಶೆಟ್ಟರ ಪುತ್ರ ಸುರೇಶ್ಚಂದ್ರ ಶೆಟ್ಟಿ ತಾವು ಬಿಜೆಪಿ ವಿಳಂಬವಾಗಿ ಸೇರಿದ್ದು ಏಕೆ ಎಂದು ವಿವರಿಸಿದರು. ತಂದೆಯವರು 20 ವರ್ಷಗಳ ಹಿಂದೆಯೇ ಬಿಜೆಪಿ ಸೇರುವಂತೆ ಸೂಚಿಸಿದ್ದರು. ಬಿಜೆಪಿಯಲ್ಲಿದ್ದ ಅನೇಕ ಸ್ನೇಹಿತರೂ ಒತ್ತಾಯ ಮಾಡುತ್ತಿದ್ದರು. ಆದರೆ ಹಿಂದೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದೆ. ಆಗ ಸಹಕಾರ ಲಭಿಸದೆ ಸೋತು ಹೋದೆ. ಇದೀಗ ಬಿಜೆಪಿ ಸೇರಲು ಸರಿಯಾದ ಸಮಯ ಎಂದರು.
 ನಗರಾಧ್ಯಕ್ಷ ಶ್ರೀಕರ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಮಾಧ್ಯಮ ವಕ್ತಾರ ರಾಜಗೋಪಾಲ ರೈ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.