ದಕ್ಷಿಣ ಕನ್ನಡ

ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ವಾರ್ಷಿಕ ಮಹಾಸಭೆ

Published On :

ಕಾಸರಗೋಡು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ (ರಿ), ಕಾಸರಗೋಡು ಇದರ ವಾರ್ಷಿಕ ಮಹಾಸಭೆಯು ಬೀರಂತಬೈಲಿನ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ ಭಜನಾ ಮಂದಿರದಲ್ಲಿ ಸಂಘದ ಅಧ್ಯಕ್ಷ ಕೆ. ನಿರಂಜನ ಕೊರಕ್ಕೋಡು ಅವರ ಅಧ್ಯಕ್ಷತೆಯಲ್ಲಿ ಜರುಗಿತು. ವೇದಿಕೆಯಲ್ಲಿ ವಿವಿಧ ಉಪಸಂಘದ ಅಧ್ಯಕ್ಷರಾದ ಕೆ. ಗಣಪತಿ ಕೋಟೆಕಣಿ, ಕೆ. ದೇವದಾಸ ಮುದಿಯಕ್ಕಾಲು, ಹೆಚ್.ಬಿ. ಪ್ರಭಾಶಂಕರ್ ರಾವ್ ಹೊಸದುರ್ಗ, ಕೆ. ಭಾಸ್ಕರ ವಾಣ್ಯಂಪಾರೆ, ಸಂಘದ ಕೋಶಾಧಿಕಾರಿ ಸಿ.ಹೆಚ್. ಕೋದಂಡರಾಜ್ ಬೇಕಲ್, ಕಾರ್ಯದರ್ಶಿ ಬಿ.ಪಿ. ವೆಂಕಟ್ರಮಣ ಬೀರಂತಬೈಲು, ಕೆ. ಬಾಲರಾಜ ಹೊನ್ನಮೂಲೆ ಉಪಸ್ಥಿತರಿದ್ದರು.
ಸಂಘ ಸ್ಥಾಪಕ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿಯವರ ಪುಣ್ಯ ಸ್ಮರಣೆಯೊಂದಿಗೆ, 1919ರಲ್ಲಿ ಸ್ಥಾಪನೆಗೊಂಡ ಬೀರಂತಬೈಲಿನ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ ಭಜನಾ ಮಂದಿರದ ಪರಿಸರದಲ್ಲಿ ಸುಮಾರು ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಶಾರದಾ ಭಜನಾ ಮಂದಿರದ ಕಾಮಗಾರಿಯ ಕುರಿತು ಅವಲೋಕನವನ್ನು ನಡೆಸಲಾಯಿತು. ಹೊಸ ಉಪಸಂಘಕ್ಕೆ ಅನುಮೋದನೆ ಮತ್ತು ನೂತನ ಉಪಸಂಘಗಳ ರೂಪೀಕರಣದ ಕುರಿತು ಅಂಗೀಕಾರ ನೀಡಲಾಯಿತು. ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ, ಕಾಸರಗೋಡು ಇದರ ಉಪಸಂಘ ಕಾಸರಗೋಡು, ಉಪಸಂಘ ಬೇಕಲ, ಉಪಸಂಘ ಅಣಂಗೂರು, ಉಪಸಂಘ ಚಂದ್ರಗಿರಿ ಕಳನಾಡು, ಉಪಸಂಘ ಕುಂಬಳೆ, ಉಪಸಂಘ ಹೊಸದುರ್ಗ ಕಾಞಂಗಾಡ್, ಉಪಸಂಘ ಚಂದ್ರಗಿರಿ ಕಳನಾಡು, ಉಪಸಂಘ ಕುಂಬಳೆ, ಉಪಸಂಘ ಹೊಸದುರ್ಗ ಕಾಞಂಗಾಡ್, ಉಪಸಂಘ ಹಾಲೆಹೊಂಡ-ವಾಣ್ಯಂಪಾರೆ, ಉಪಸಂಘ ಕೀಕಾನ ಇದರ ಪದಾಧಿಕಾರಿಗಳು ಭಾಗವಹಿಸಿದ್ದರು.  ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ಸೇವಾ ಸಂಘ(ರಿ) ಕಾಸರಗೋಡು ಇದರ 2013-15ನೆಯ ಸಾಲಿನ ನೂತನ ಗೌ. ಅಧ್ಯಕ್ಷರಾಗಿ ಬಿ. ಕೃಷ್ಣಮೂರ್ತಿ ಬೀರಂತಬೈಲು, ಅಧ್ಯಕ್ಷರಾಗಿ ಕೆ. ನಿರಂಜನಕೊರಕ್ಕೋಡು, ಉಪಾಧ್ಯಕ್ಷರಾಗಿ ಕೆ. ಸತೀಶಕೂಡ್ಲು, ಎಸ್. ಲೋಕೇಶ್ ಕುಮಾರ್ ಅಣಂಗೂರು, ಶ್ರೀಮತಿ ಪ್ರೇಮಲತಾ ಗೋಕುಲದಾಸ ಕುಂಬಳೆ, ಕಾರ್ಯದರ್ಶಿ ಬಿ.ಪಿ. ವೆಂಕಟ್ರಮಣ ಬೀರಂತಬೈಲು, ಜತೆ ಕಾರ್ಯದರ್ಶಿಯಾಗಿ ಕೆ. ಸತೀಶ್ ಕುಮಾರ್ ದೋಣಿಬಾಗಿಲು, ಹೆಚ್. ಶ್ಯಾಮ ಹೊಸದುರ್ಗ, ಶ್ರೀಮತಿ ಲತಾ ಸುಬ್ರಾಯ ವಾಣ್ಯಂಪಾರೆ, ಕೋಶಾಧಿಕಾರಿ ಸಿ.ಹೆಚ್. ಕೋದಂಡರಾಮ್ ಬೇಕಲ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ. ಬಾಲಚಂದ್ರರಾವ್ ಕುಂಬಳೆ, ಎ. ಲಿಂಗಪ್ಪಯ್ಯ ಜಾಲುಮನೆ ಕುಂಬಳೆ, ಕೆ. ಬಾಲಕೃಷ್ಣ ಕುಂಬಳೆ, ಕೆ. ಬಾಲಚಂದ್ರ ಆರಿಕ್ಕಾಡಿ, ಕೆ. ಕಮಲಾಕ್ಷ ಅಣಂಗೂರು, ಕೆ.ಎಸ್. ಹರೀಶ್ ಕುಮಾರ್ ಅಣಂಗೂರು, ಕೆ.ಜೆ. ಜೋಗೇಂದ್ರನಾಥ ರಾವ್ ವಿದ್ಯಾನಗರ, ಕೆ. ಹರೀಶ್ ಕುಮಾರ್ ಅಣಂಗೂರು ಮೊದಲಾದವರನ್ನೊಳಗೊಂಡ 51 ಮಂದಿ ಸದಸ್ಯರ ಆಡಳಿತ ಸಮಿತಿಯನ್ನು ರೂಪೀಕರಿಸಲಾಯಿತು. ಜತೆ ಕಾರ್ಯದರ್ಶಿ ಕೆ. ಸತೀಶ್‌ಕುಮಾರ್ ದೋಣಿಬಾಗಿಲು ಸ್ವಾಗತಿಸಿದರು. ಬಿ. ರಾಮಮೂರ್ತಿ ಬೀರಂತಬೈಲು ಧನ್ಯವಾದವನ್ನಿತ್ತರು. ಕೆ. ಸತೀಶ್ ಕೂಡ್ಲು, ಎಸ್. ಲೋಕೇಶಕುಮಾರ್ ಅಣಂಗೂರು ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.