ಬೆಳ್ತಂಗಡಿ: ಪಿಯುಸಿ ಫಲಿತಾಂಶ ಪ್ರಕಟ
ಬೆಳ್ತಂಗಡಿ: ತಾಲೂಕಿನ ಪದವಿಪೂರ್ವ ಕಾಲೇಜುಗಳ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ಹಳೇ ಕೋಟೆ ವಾಣಿ ಕಾಲೇಜು ಶೇ.97 ಉತ್ತಮ ಫಲಿತಾಂಶ ದಾಖಲಿಸಿದೆ. ಅದೇ ರೀತಿ ಪಟ್ಟಣದ ಸೈಂಟ್ ತೆರೆಸಾ ಕಾಲೇಜು ಶೇ.100 ಫಲಿತಾಂಶ ಪಡೆದಿದೆ. ವಾಣಿ ಕಾಲೇಜು- ಶೇ.97, ಕಲಾ ವಿಭಾಗದಲ್ಲಿ ಶೇ.100, ವಾಣಿಜ್ಯ ವಿಭಾಗದಲ್ಲಿ ಶೇ.99.30 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.90 ಫಲಿತಾಂಶ. ಸೈಂಟ್ ತೆರೆಸಾ ಬೆಳ್ತಂಗಡಿ ಕಾಲೇಜು ಶೇ.100 ಫಲಿತಾಂಶ ಪಡೆದಿದೆ. ಉಜಿರೆ ಎಸ್ಡಿಎಂ ಕಾಲೇಜು ಶೇ.96.36 ಫಲಿತಾಂಶ ಪಡೆದಿದೆ. ಕಲಾ ವಿಭಾಗದಲ್ಲಿ ಶೇ.92.94, ವಾಣಿಜ್ಯ ವಿಭಾಗದಲ್ಲಿ 99.35 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.95 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಉಜಿರೆ ಎಸ್ಡಿಎಂ ಸನಿವಾಸ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಮಾತ್ರವಿದ್ದು, ಶೇ.97.28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗುರುದೇವ ಕಾಲೇಜು ಫಲಿತಾಂಶ ಶೇ.88, ಕಲಾ-ಶೇ.100, ವಾಣಿಜ್ಯ 92 ಹಾಗೂ ವಿಜ್ಞಾನ ವಿಭಾಗ-ಶೇ.72 ಫಲಿತಾಂಶ ದಾಖಲಿಸಿದೆ. ಮುಂಡಾಜೆ ಕಾಲೇಜು ಒಟ್ಟು ಶೇ. 98.76, ಕಲಾ-ಶೇ.97.18, ವಾಣಿಜ್ಯ-ಶೇ.100, ಗೇರುಕಟ್ಟೆ ಕಾಲೇಜು ಒಟ್ಟು ಶೇ. 94, ಕಲಾ-ಶೇ.98, ವಿಜ್ಞಾನ- ಶೇ.78, ನಡ ಕಾಲೇಜಿನಲ್ಲಿ ಕಲಾ ವಿಭಾಗ ಮಾತ್ರವಿದ್ದು ಶೇ. 94.37 ಫಲಿತಾಂಶ ದೊರಕಿದೆ. ಅನುಗ್ರಹ ಉಜಿರೆ ಕಾಲೇಜು ಒಟ್ಟು ಶೇ.97, ಕಲಾ-ಶೇ.100, ವಾಣಿಜ್ಯ-95.91, ವೇಣೂರು ಕಾಲೇಜು ಒಟ್ಟು ಶೇ. 90.64, ಕಲಾ- ಶೇ.91, ವಾಣಿಜ್ಯ- ಶೇ.97.36, ವಿಜ್ಞಾನ- ಶೇ. 77.07, ಪುಂಜಾಲಕಟ್ಟೆ ಒಟ್ಟು ಶೇ.95.32, ಕಲಾ- ಶೇ.99, ವಾಣಿಜ್ಯ ಶೇ.100, ವಿಜ್ಞಾನ-ಶೇ.77.77, ಅಳದಂಗಡಿ ಒಟ್ಟು ಶೇ. 85, ಕಲಾ- ಶೇ.90, ವಾಣಿಜ್ಯ ಶೇ. 87, ವಿಜ್ಞಾನ- ಶೇ. 56, ಬೆಳ್ತಂಗಡಿ ಕಾಲೇಜು ಒಟ್ಟು ಶೇ. 83.88, ಕಲಾ-78.74, ವಾಣಿಜ್ಯ- ಶೇ.91.66, ಕೊಯ್ಯೂರು ಕಾಲೇಜಿಗೆ ಶೇ.90 ಫಲಿತಾಂಶ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

