ಮೂಲಗೇಣಿದಾರರು ಆರ್ಥಿಕ ಸಹಕಾರ ನೀಡಿ
ಮಂಗಳೂರು: ಮೂಲಗೇಣಿ ಒಕ್ಕಲುತನದ ಸಂಪೂರ್ಣ ಹಕ್ಕು ನೀಡಲು ರಾಷ್ಟ್ರಪತಿ ಅಂಕಿತ ದೊರಕಿದ್ದರೂ, ಸ್ಥಾಪಿತ ಹಿತಾಸಕ್ತಿದಾರರು ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಇದರ ವಿರುದ್ಧ ಹೋರಾಟ ನಡೆಸಲು ಆರ್ಥಿಕ ಸಹಕಾರ ಬೇಕಾಗಿದೆ ಎಂದು ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ ಅಧ್ಯಕ್ಷ ಮ್ಯಾಕ್ಸಿಂ ಡಿಸಿಲ್ವ ಹೇಳಿದ್ದಾರೆ. ಡಾನ್ಬಾಸ್ಕೋ ಸಭಾಂಗಣದಲ್ಲಿ ಭಾನುವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದರು. ಧನಿಗಳ ಮತ್ತು ಕಾನೂನಿನ ನಡುವೆ ಯುದ್ಧ ನಡೆಯುತ್ತಿದ್ದು, ಹಕ್ಕು ಕಸಿದುಕೊಳ್ಳಲು ಎಲ್ಲರ ಸಹಕಾರ ಅಗತ್ಯವಾಗಿದೆ. ಈಗಾಗಲೇ ಕೇಂದ್ರ ಶಾಸನ ಸಭೆಯಲ್ಲಿ ಮೂಲಗೇಣಿದಾರರಿಗೆ ಸಂಪೂರ್ಣ ಹಕ್ಕು ಪ್ರದಾನಿಸಲು ರಾಷ್ಟ್ರಪತಿಯವರಿಂದ ಅಂಕಿತ ದೊರಕಿದೆ. ಆದರೆ ಸ್ಥಾಪಿತ ಹಿತಾಸಕ್ತಿಗಳು ಕಾಯ್ದೆಗೆ ಕೆಲವೊಂದು ಶರತ್ತುಗಳನ್ನು ವಿಧಿಸಿ ಭಂಗ ತರಲು ಪ್ರಯತ್ನಿಸುತ್ತಿದೆ ಎಂದರು. ಅವಿಭಜಿತ ಜಿಲ್ಲೆಯಾದ ದ.ಕ. ಮತ್ತು ಉಡುಪಿಯಲ್ಲಿ ಮೂಲಗೇಣಿ ಸಮಸ್ಯೆಯ ಭಾದಿತರು ಲಕ್ಷಾಂತರ ಮಂದಿ ಇದ್ದು, ಕಳೆದ ಆರು ವರ್ಷಗಳಲ್ಲಿ ವೇದಿಕೆಯಲ್ಲಿ ಸದಸ್ಯರಾದವರು ಕೇವಲ ಸಾವಿರ ಮಂದಿ. ರಿಟ್ ಅರ್ಜಿ ವಿರುದ್ಧ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದು, ಸುಮಾರು ರು. 6ಲಕ್ಷ ಖರ್ಚಾಗುವ ಸಾಧ್ಯತೆಯಿದೆ. ಕಾನೂನು ಹೋರಾಟದಲ್ಲಿ ನ್ಯಾಯ ಸಿಗುವ ಭರವಸೆಯಿದ್ದು, ಆರ್ಥಿಕತೆಯ ಸಹಕಾರ ಬೇಕಾಗಿದೆ ಎಂದು ಹೇಳಿದರು. ವೇದಿಕೆ ಕಾರ್ಯಾಧ್ಯಕ್ಷ ಕೆ. ಜಗದೀಶ ರಾವ್, ಸದಸ್ಯ ಕ್ಯಾ.ಎಚ್. ವಾಝ್, ವಕೀಲ ಎನ್.ಕೆ. ಯಶೋಧರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

