ಬಿಜೆಪಿಗರ ಭ್ರಷ್ಟಾಚಾರಕ್ಕೆ ತಕ್ಕ ಶಿಕ್ಷೆ: ರಾಮ ಭಟ್
ಪುತ್ತೂರು: ಬಿಜೆಪಿಗರು ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿರುವ ಭ್ರಷ್ಟಾಚಾರ, ಅನಾಚಾರ, ಅಧಿಕಾರ ದುರುಪಯೋಗಕ್ಕೆ ಪ್ರಜ್ಞಾವಂತ ಮತದಾರರು ಈ ಬಾರಿಯ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ. ಬಿಜೆಪಿ ಮಾಡಿರುವ ತಪ್ಪಿಗೆ ಸರಿಯಾದ ಶಿಕ್ಷೆಯಾಗಿದೆ ಎಂದು ಪುತ್ತೂರಿನ ಮಾಜಿ ಶಾಸಕ ಕೆ. ರಾಮ ಭಟ್ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
'ನಮ್ಮ ನಡೆ ನುಡಿ ಶುದ್ಧವಾಗಿದೆ ಎಂದು ಹೇಳುತ್ತಾ ಬಿಜೆಪಿ ಅಧಿಕಾರ ಪಡೆಯಿತು. ಕರ್ನಾಟಕದ ಜನತೆ ಇದನ್ನು ನಂಬಿ ಅಧಿಕಾರ ನೀಡಿದರು. ಬಳಿಕ ಬಿಜೆಪಿಯು ಅಧಿಕಾರವನ್ನು ದುರಪಯೋಗ ಪಡಿಸಿಕೊಂಡು ಭ್ರಷ್ಟಾಚಾರ, ಅನಾಚಾರ ಎಲ್ಲವನ್ನೂ ಮಾಡಿದರು. ಇದೆಲ್ಲವನ್ನು ನೋಡಿದ ರಾಜ್ಯದ ಜನತೆ ಈ ಬಾರಿ ಸ್ಪಷ್ಟ ತಿರುಗೇಟು ನೀಡಿದ್ದಾರೆ ಎಂದರು.
ಸಂಘದ ಆದೇಶ ಪಕ್ಷಕ್ಕೆ ಹೇರಿಕೆ: ಹಿಂದೆ ಪುತ್ತೂರು ವಿಧಾನಸಭಾ ಕ್ಷೇತ್ರ ಆರ್ಎಸ್ಎಸ್ ಮತ್ತು ಬಿಜೆಪಿಯ ಪ್ರಯೋಗ ಶಾಲೆಯಾಗಿತ್ತು. ಸಂಘದ ತತ್ವದಲ್ಲಿ ವಿಶ್ವಾಸವಿರಿಸಿದ್ದ ತಾನು 1957ರಿಂದ ಪುತ್ತೂರಿನಲ್ಲಿ ಸ್ಪರ್ಧೆ ನಡೆಸುತ್ತಿದ್ದೆ. ಆದರೆ 2008ರಲ್ಲಿ ವಿಶ್ವಾಸಕ್ಕೆ ಘಾಸಿ ಆಯಿತು. ಸಂಘ ಮತ್ತು ಬಿಜೆಪಿ ಸಂಬಂಧ ಪ್ರಶ್ನಾರ್ಹ. ಸಂಘವು ಪಕ್ಷಕ್ಕೆ ಕೇವಲ ಸಲಹೆ ಮಾತ್ರ ನೀಡಬೇಕಾಗಿತ್ತು. ಆದರೆ ಇಲ್ಲಿ ಸಂಘದ ಆದೇಶವನ್ನು ಪಾಲಿಸಬೇಕೆಂಬ ಸೂಚನೆಯನ್ನು ಪಕ್ಷಕ್ಕೆ ಹೇರಲಾರಂಭಿಸಿತು. ಬಳಿಕ ಸಮಸ್ಯೆಗಳು ಆರಂಭಗೊಂಡಿತು ಎಂದ ಅವರು ಇದರಿಂದಾಗಿ ಪುತ್ತೂರಿನಲ್ಲಿ ರೋಗ ಬಾರದೆ ಬಲವಾಗಿ ಬೆಳೆದಿದ್ದ ಬಿಜೆಪಿ ಎಂಬ ಮರಕ್ಕೆ ನಿಧಾನಕ್ಕೆ ರೋಗ ಕಾಣಿಸಲಾರಂಭಿಸಿತು ಎಂದರು.
ಮೋದಿ ಪ್ರಧಾನಿಯಾಗಬೇಕು: ನಾನು ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪುವುದಿಲ್ಲ ಎಂದ ರಾಮ ಭಟ್, ತಾನು ಕೇಂದ್ರದಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲದ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಬಯಸುತ್ತೇನೆ. ಮೋದಿ ಮುಸ್ಲಿಂ, ಕ್ರಿಶ್ಚನ್ ಸೇರಿದಂತೆ ಎಲ್ಲ ಸಮುದಾಯದ ಅಭಿವೃದ್ಧಿ ಕೆಲಸವನ್ನು ಮಾಡಿದ್ದು ಅವರು ಪ್ರಧಾನಿಯಾಗಬೇಕು ಎಂದು ತಾನು ಬಯಸುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

