ದಕ್ಷಿಣ ಕನ್ನಡ

ಅನು ಪಾವಂಜೆ ಕವನ ಸಂಕಲನ ಬಿಡುಗಡೆ

Published On :

ಮಂಗಳೂರು: ಹೊಸ ಪೀಳಿಗೆಯ ಕಲ್ಪನೆಯ ಕವನಗಳು ಹೆಚ್ಚು ಪ್ರಕಾಶನಗೊಳ್ಳುವ ಅವಶ್ಯಕತೆಯಿದ್ದು, ಹಿರಿಯರು ಅವುಗಳನ್ನು ಉತ್ತೇಜಿಸಬೇಕಾಗಿದೆ ಎಂದು ಸಾಹಿತಿ ಬಿ.ಎಂ. ರೋಹಿಣಿ ಹೇಳಿದ್ದಾರೆ.
ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಅನು ಪಾವಂಜೆ ಅವರ 'ಚೌಕಟಿಲ್ಲದ ಸ್ವಗತ' ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಹಿಂದಿನ ಕವನಗಳ ಚೌಕಟ್ಟನ್ನು ದಾಟಿ ಹೊಸ ರೂಪವನ್ನು ನೀಡಿದ್ದಾರೆ. ಪ್ರಕೃತಿಯ ಸಣ್ಣ ವಸ್ತುಗಳು ಅಂದರೆ ಮರಳಿನ ಕಣ, ಬಸವನ ಹುಳುವಿನ ಬದುಕನ್ನು ಕಲ್ಪನೆಯಾಗಿ ಕಂಡಿದ್ದಾರೆ. ಹೃದಯಕ್ಕೆ ಕಿವಿ ಇಟ್ಟು, ಗುಬ್ಬಿಯ ಪಾದಗಳಿಗೆ ಗೆಜ್ಜೆ ಕಟ್ಟಿರುವ ಕುರಿತು ಸುಂದರ ಸಣ್ಣ ಝಲಕ್ ಕವನದಲ್ಲಿ ಒಳಗೊಂಡಿದೆ. ಪ್ರಾರ್ಥನೆ ಎಂಬ ಕವನ ಕಲ್ಪನೆಯ ಕವಿತ್ವದ ಶಕ್ತಿಯ ರೂಪಕ ತೋರ್ಪಡಿಸಿದೆ ಎಂದರು. ಗೋಷ್ಠಿಯಲ್ಲಿ ಕವಿಯತ್ರಿ ಅನು ಪಾವಂಜೆ, ಸಾಹಿತಿ ಎಂ.ಆರ್. ಪಾವಂಜೆ, ಚಿತ್ರಕಾರ ದಿನೇಶ್ ಹೊಳ್ಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.