ಎಸ್ಸೆಸ್ಸೆಲ್ಸಿ: ದೀಕ್ಷಿತಾ ಹೆಬ್ಬಾರ್, ಸುಹಾಸ್ ದತ್ ತಾಲೂಕಿಗೆ ಪ್ರಥಮ
ಪುತ್ತೂರು: ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೆಂಕಿಲದ ವಿವೇಕಾನಂದ ಪ್ರೌಢಶಾಲಾ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ಶೇ.98.24 ಅಂಕ ಪಡೆದಿರುವ ದೀಕ್ಷಿತಾ ಹೆಬ್ಬಾರ್ ಮತ್ತು ಕನ್ನಡ ಮಾಧ್ಯಮದಲ್ಲಿ ಪುತ್ತೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶೇ.96.30 ಅಂಕ ಪಡೆದಿರುವ ಸುಹಾಸ್ ದತ್ ಇವರಿಬ್ಬರೂ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಪುತ್ತೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸುಹಾಸ್ ದತ್ 602 (ಶೇ.96.30) ಅಂಕಗಳನ್ನು ಪಡೆದು ತಾಲೂಕಿನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ತೆಂಕಿಲ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಜಯಶ್ರೀ 593 (ಶೇ. 94.88) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ, ಸಂತ ಫಿಲೋಮಿನಾ ಪ್ರೌಢಶಾಲೆಯ ವಿದ್ಯಾರ್ಥಿನಿ ತೇಜಶ್ರೀ ಮತ್ತು ತೆಂಕಿಲ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀವಿದ್ಯಾ .ಎಂ ಇವರಿಬ್ಬರು ತಲಾ 591(94.56) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಆಂಗ್ಲ ಮಾಧ್ಯಮದಲ್ಲಿ ತೆಂಕಿಲದ ವಿವೇಕಾನಂದ ಪ್ರೌಢಶಾಲಾ ವಿದ್ಯಾರ್ಥಿನಿ ದೀಕ್ಷಿತಾ ಹೆಬ್ಬಾರ್ 614(ಶೇ.98.24) ಅಂಕಗಳನ್ನು ಪಡೆದು ತಾಲೂಕಿನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ದ್ವಿತೀಯ ಸ್ಥಾನವನ್ನು ಇದೇ ಶಾಲೆಯ ಸಿಂಧೂರ ಸರಸ್ವತಿ, ರಂಜಿತಾ .ಎಂ, ಅಖಿಲಾ .ಕೆ ಮತ್ತು ಸ್ವಾತಿ .ಪಿ ಹಂಚಿಕೊಂಡಿದ್ದಾರೆ. ಇವರೆಲ್ಲರೂ 613 (ಶೇ. 98.08) ಅಂಕಗಳನ್ನು ಪಡೆದುಕೊಂಡಿದ್ದಾರೆ. ಸಂತ ವಿಕ್ಟರ್ ಪ್ರೌಢಶಾಲೆಯ ವಿದ್ಯಾರ್ಥಿನಿ ಧನುಶ್ರೀ 610 (ಶೇ. 97.06)ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಬಂಟ್ವಾಳದಲ್ಲಿ ಶೇ. 76.18 ಫಲಿತಾಂಶ
ಬಂಟ್ವಾಳ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿ 76.18 ಫಲಿತಾಂಶ ದಾಖಲಾಗಿದ್ದು, ಪರೀಕ್ಷೆಗೆ ಹಾಜರಾದ 6544 ವಿದ್ಯಾರ್ಥಿಗಳ ಪೈಕಿ 4590 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತಾಲೂಕಿನ 13 ಖಾಸಗಿ ಪ್ರೌಢಶಾಲೆಗಳು ಶೇ. 100 ಫಲಿತಾಂಶ ಸಾಧಿಸಿದ್ದು, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನ್ವಿತಾ ಶಾಸ್ತ್ರಿ 614 ಅಂಕಗಳಿಸಿ ತಾಲೂಕಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾಳೆ.
ವಿದ್ಯಾಗಿರಿ ಎಸ್ವಿಎಸ್ ಆಂಗ್ಲ ಮಾಧ್ಯಮ ಶಾಲೆ, ಶಾರದಾ ಗಣಪತಿ ಪ್ರೌಢಶಾಲೆ ಕೈರಂಗಳ, ಜೆ.ಸಿ ಆಂಗ್ಲಮಾಧ್ಯಮ ಶಾಲೆ ವಿಟ್ಲ, ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಮಾಣಿ, ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ ವಿಜಯಡ್ಕ, ಎಸ್ಎಲ್ಎನ್ಪಿ ಆಂಗ್ಲಮಾಧ್ಯಮ ಶಾಲೆ ಪಾಣೆಮಂಗಳೂರು, ಬುರೂಜ್ ಆಂಗ್ಲಮಾಧ್ಯಮ ಶಾಲೆ ರಝಾನಗರ, ಗುಣಶ್ರೀ ಆಂಗ್ಲಮಾಧ್ಯಮ ಶಾಲೆ ಸಿದ್ದಕಟ್ಟೆ, ಬಿ.ಎ. ಆಂಗ್ಲ ಮಾಧ್ಯಮ ಪ್ರೌಢಶಾಲೆ ತುಂಬೆ ಹಾಗೂ ಅಳಿಕೆ ಶ್ರೀ ಸತ್ಯಸಾಯಿ ಪ್ರೌಢಶಾಲೆ, ಅಲ್ಮದೀನ ಪ್ರೌಢಶಾಲೆ ಕರಿಯಂಗಳ, ಇನ್ಫೆಂಟ್ ಜೇಸಿಸ್ ಮೊಡಂಕಾಪು, ಎಸ್ವಿಎಸ್ ದೇವಳ ಪ್ರೌಢಶಾಲೆ ಶೇ. 100 ಫಲಿತಾಂಶ ದಾಖಲಿಸಿದ ಶಾಲೆಗಳು.
ಈ ಬಾರಿಯ ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಯಾವುದೇ ಸರ್ಕಾರಿ ಪ್ರೌಢಶಾಲೆ ಶೇ. 100 ಫಲಿತಾಂಶ ದಾಖಲಿಸಿಲ್ಲ. ಸರ್ಕಾರಿ ಪ್ರೌಢಶಾಲೆ ಪೊಳಲಿ ಶೇ.97, ಸರ್ಕಾರಿ ಪ್ರೌಢಶಾಲೆ ಕೈಲ ಶೇ.95 ಹಾಗೂ ಸರ್ಕಾರಿ ಪ್ರೌಢಶಾಲೆ ಸಿದ್ದಕಟ್ಟೆ ಶೇ. 94 ಪಡೆದು ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿದ್ದರೆ ಸರ್ಕಾರಿ ಪ್ರೌಢಶಾಲೆ ನಂದಾವರ ಶೇ.29 ಫಲಿತಾಂಶ ಸಾಧಿಸಿ ಕೊನೆಯ ಸ್ಥಾನದಲ್ಲಿದೆ. ಪೊಳಲಿ ಪ್ರೌಢಶಾಲೆಯಿಂದ ಪರೀಕ್ಷೆಗೆ ಹಾಜರಾದ 33 ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಮಾತ್ರ ಅನುತ್ತೀರ್ಣನಾಗಿದ್ದಾನೆ.
ಸಾಧಕರು: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನಿತಾ ಶಾಸ್ತ್ರಿ 614 ಅಂಕ ಪಡೆದು ತಾಲೂಕಿಗೆ ಮೊದಲ ಸ್ಥಾನಿಯಾಗಿದ್ದಾಳೆ. ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಯ ದೀಕ್ಷಾ 611 ಅಂಕ ಪಡೆದು ದ್ವಿತೀಯ ಸ್ಥಾನವನ್ನು ತನ್ನದಾಗಿಸಿದ್ದಾಳೆ. ಉಳಿದಂತೆ ಅಳಿಕೆ ವಿದ್ಯಾಸಂಸ್ಥೆಯ ಶ್ರೀಕೃಷ್ಣ 608, ಮಂಜುನಾಥ 607, ಪೂಜಾ ಶ್ರೀ 605 ಅಂಕ ಗಳಿಸಿದ್ದಾರೆ.
ಮಾಣಿ ಕರ್ನಾಟಕ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿಯಲ್ಲಿ ಶೇ.95 ಫಲಿತಾಂಶ ಸಾಧಿಸಿದೆ. 101 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 96 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.
ಧರ್ಮಸ್ಥಳ-ಶೇ. 100 ಫಲಿತಾಂಶ:
ಮಂಗಳೂರು: 2012- 13ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ ಬಂದಿದೆ.
ಉನ್ನತ ಶ್ರೇಣಿಯಲ್ಲಿ 9 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 21 ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರಕ್ಷಿತಾ ಎಂ. 605ಅಂಕಗಳನ್ನು ಪಡೆದಿದ್ದು, ಶೇ.96.8 ಫಲಿತಾಂಶ ಬಂದಿದೆ. ಇವರು ಬೆಳ್ತಂಗಡಿ ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಮೊರಾರ್ಜಿ ಶಾಲೆಗೆ ಶೇ.100:
ಮೂಲ್ಕಿ: ಎಸ್ಎಸ್ಎಲ್ಸಿ ಪರೀಕ್ಷೇಯಲ್ಲಿ ಕಿನ್ನಿಗೋಳಿ ಸಮೀಪದ ಕಮ್ಮಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇ. 100 ಫಲಿತಾಂಶ ಪಡೆದಿದೆ. ಮೂಲ್ಕಿಯ ಕಾರ್ನಾಡಿನ ಸಿಎಸ್ಐ ಆಂಗ್ಲ ಮಾಧ್ಯಮ ಶಾಲೆ ಶೇ.92 ಪಡೆದಿದ್ದು ಪರೀಕ್ಷೆಗೆ ಹಾಜರಾದ 26 ಮಕ್ಕಳಲ್ಲಿ 8ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕನ್ನಡ ಮಾಧ್ಯಮ ಶಾಲೆ ಶೇ.85 ಫಲಿತಾಂಶ ಪಡೆದಿದೆ.
ಮೂಲ್ಕಿ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಎಸ್ಎಸ್ಎಲ್ಸಿಯಲ್ಲಿ ಶೇ.91 ಫಲಿತಾಂಶ ಪಡೆದಿದ್ದು 17 ವಿಶಿಷ್ಟ ಶ್ರೇಣಿ, 51 ಮಂದಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಶಾಲೆಯು ಎಸ್ಎಸ್ಎಲ್ಸಿಯಲ್ಲಿ ಶೇ.87.7 ಫಲಿತಾಂಶ ಪಡೆದಿದೆ. 17 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

