ದಕ್ಷಿಣ ಕನ್ನಡ

ಹೊಸ ಕ್ಯಾಂಪ್ಕೋ ಶಾಖೆ ಉದ್ಘಾಟನೆ

Published On :

ಬೆಳ್ತಂಗಡಿ:  ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಲಾಭದಲ್ಲಿ ಮುಂದುವರಿಯುತ್ತಿದೆ. ಹೀಗಾಗಿ ಅಡಕೆ ಬೆಳೆಗಾರರು ಹೆದರುವ ಅವಶ್ಯಕತೆ ಇಲ್ಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಭರವಸೆ ನೀಡಿದ್ದಾರೆ.
ಸೋಮವಾರ ವೇಣೂರಿನ ಗಾರ್ಡನ್ ವ್ಯೂ ಕಟ್ಟಡದಲ್ಲಿ ಕ್ಯಾಂಪ್ಕೋ ಶಾಖೆ ಉದ್ಘಾಟಿಸಿ, ಬೆಳೆಗಾರರ ಸಂರಕ್ಷಣೆ ಮಾಡುವಲ್ಲಿ ಕೇಂದ್ರ ಸರ್ಕಾರ ಅಡಕೆ ಆಮದಿನ ಮೇಲೆ ಹತೋಟಿ ತರಲು ಯತ್ನಿಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಅಡಕೆ ಬೆಳೆಯುವ ಸುಮಾರು 60 ಶಾಸಕರು ಆಯ್ಕೆಯಾಗಿದ್ದಾರೆ. ಹಿಂದಿನ ಸರ್ಕಾರವು ಬೆಳೆಗಾರರ ಹಿತಕ್ಕೆ ಬದ್ಧವಾಗಿತ್ತು. ಹೀಗಾಗಿ ಈ ಬಾರಿಯೂ ಬೆಂಬಲ ನಮಗೆ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದರು.
ಎಲ್ಲರ ಸಹಕಾರವಿದ್ದರೆ ಮಾತ್ರ ಇಲ್ಲಿನ ಶಾಖೆ ಉನ್ನತಿಗೇರಲು ಸಾಧ್ಯ. ಈ ಬಾರಿ ಡಿವಿಡೆಂಟ್ ಹೆಚ್ಚು ಕೊಡಲಾಗುವುದು ಎಂದರು.
ದಡ್ಡು ಬಾಲಕೃಷ್ಣ ಭಟ್ ಅವರು ಅಡಕೆ ಖರೀದಿಸುವ ಮೂಲಕ ಕೇಂದ್ರದ ವ್ಯವಹಾರಕ್ಕೆ ಚಾಲನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.