ದಕ್ಷಿಣ ಕನ್ನಡ

ದೇವರು ಜನರ ಬಿಂಬ: ರಾಘವೇಶ್ವರ ಶ್ರೀ

Published On :

ಪುತ್ತೂರು: ದೇವರ ಪ್ರತಿಷ್ಠಾಪಿಸುವ ಮೂಲಕ ನಮಗೆಲ್ಲ ನೆಲೆ ಸಿಕ್ಕಿದಂತಾಗಿದ್ದು, ಪ್ರತಿಷ್ಠೆಯನ್ನು ಮಂದಿರದ ಜತೆಗೆ ಮನದಲ್ಲಿಯೂ ಭದ್ರ ಮಾಡಬೇಕೆಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಕರೆ ನೀಡಿದರು. ಪುತ್ತೂರಿನ ಮಹಾಲಿಂಗೇಶ್ವರ ದೇವಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ 9ನೇ ದಿನವಾದ ಸೋಮವಾರ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ, ದೇವರೆಂಬುದು ಜನರ ಪ್ರತಿಬಿಂಬ. ದೇವರು ಪ್ರತಿಷ್ಠೆಯಾದರೆ ನಮಗೆಲ್ಲ ನೆಲೆ ಸಿಕ್ಕಿದಂತೆ ಎಂದ ಸ್ವಾಮೀಜಿ, ಅತ್ಯಂತ ಹಳೆಯದಾದ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೊಸತನ ಬಂದಿದ್ದು, ಪ್ರತಿಷ್ಠಾ ಸೇವೆಯೂ ನಡೆದಿದೆ. ಬ್ರಹ್ಮಕಲಶೋತ್ಸವ ಮುಗಿಯುವ ವೇಳೆಗೆ ಕರಸೇವಕರ ಸಂಖ್ಯೆ ಒಂದು ಲಕ್ಷ ದಾಟುತ್ತಿರುವುದು ಸಮಾಜಕ್ಕೆ ದೊಡ್ಡ ಸಂದೇಶ ಎಂದರು. ರಾತ್ರಿ ಹಗಲೆನ್ನೆದೆ ದೇವರ ಸೇವೆ ಮಾಡುವವನೇ ಶ್ರೇಷ್ಠ. ಈ ಪುಣ್ಯವನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಧಾರ್ಮಿಕ ಭಾಷಣ ಮಾಡಿದ ಪೊಲೀಸ್ ಅಧಿಕಾರಿ ಡಾ. ವೆಂಕಟೇಶ್ ಪ್ರಸನ್ನ, ಧರ್ಮಗಳಲ್ಲಿ ಶ್ರೇಷ್ಠವಾದುದು ರಾಷ್ಟ್ರಧರ್ಮ. ದೇವರಲ್ಲಿ ದೊಡ್ಡವ ಎಂಬ ಕಚ್ಚಾಟ ಬೇಡ. ಜನ್ಮ ಕೊಟ್ಟ ಭಗವಂತನ ಸೇವೆಗೆ ದುಪ್ಪಟ್ಟು ಫಲ ನಿರೀಕ್ಷಿತ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.