ದಕ್ಷಿಣ ಕನ್ನಡ

17ರಂದು ನವೀಕೃತ ಮಸೀದಿ ಉದ್ಘಾಟನೆ

Published On :

ಮಂಗಳೂರು: ಕಾಟಿಪಳ್ಳ 2ನೇ ಬ್ಲಾಕ್‌ನಲ್ಲಿ ಪಣಂಬೂರು ಮುಸ್ಲಿಂ ಜಮಾತ್‌ನಿಂದ ಸುಮಾರು ರು. 1.60 ಕೋಟಿ ವೆಚ್ಚದಲ್ಲಿ ನವೀಕೃತ ಮುಹಿಯುದ್ದೀನ್ ಜುಮಾ ಮಸ್ಜಿದ್ ಉದ್ಘಾಟನೆ ಹಾಗೂ ಧಾರ್ಮಿಕ ಕಾರ್ಯಕ್ರಮ ಮೇ 17ರಿಂದ 24ರ ವರೆಗೆ ನಡೆಯಲಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಮಾತ್ ಸಮಿತಿ ಅಧ್ಯಕ್ಷ ಸಲೀಂ ರಫಿ, 17ರಂದು ಮಧ್ಯಾಹ್ನ 12.30ಕ್ಕೆ ಕಾಟಿಪಳ್ಳ ಖಾಝಿ ಅಬ್ದುಲ್ ರಹಮಾನ್ ಕುಂಞಕೋಯ ತಂಞಳ್ ಉದ್ಘಾಟಿಸಲಿದ್ದು, 1.30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಶಿರಿಯ ಆಲಿಕುಂಞ ಉಸ್ತಾದ್ ಉದ್ಘಾಟಿಸುವರು. ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡುವರು ಎಂದು ತಿಳಿಸಿದರು.
ಕೇಂದ್ರ ಸಚಿವ ಡಾ.ರಹ್ಮಾನ್ ಖಾನ್, ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ರಿಯಾಜ್‌ಖಾನ್ ಅತಿಥಿಗಳಾಗಿ ಆಗಮಿಸುವರು. 18ರಿಂದ 23ರ ವರೆಗೆ ರಾತ್ರಿ 7.30ರಿಂದ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. 21ರಂದು ಜಲಾಲಿಯಾ ರಾತೀಬ್, 23ರಂದು ಬೃಹತ್ ಸ್ವಲಾತ್ ಮಜ್ಲಿಸ್, 24ರಂದು ರಾತ್ರಿ 7.30ಕ್ಕೆ ಸಮಾರೋಪ ಮತ್ತು ಶಾಸಕ ಬಿ.ಎ.ಮೊಯ್ದಿನ್ ಬಾವಾಗೆ ಸನ್ಮಾನ ಸಮಾರಂಭ ನಡೆಯಲಿದೆ. ಶಾಸಕ ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಾಹುಲ್ ಹಮೀದ್ ಅಭಿನಂದನಾ ಭಾಷಣ ಮಾಡುವರು ಎಂದರು.
ಉಪಾದ್ಯಕ್ಷರಾದ ಹುಸೇನ್ ಬಾವಾ, ಉಮರಬ್ಬ, ಖಜಾಂಚಿ ಅಬೂಬಕ್ಕರ್, ಜತೆ ಕಾರ್ಯದರ್ಶಿ ಅಬೂಬಕ್ಕರ್ ಪಿ. ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.