ಕರ್ಣಾಟಕ ಬ್ಯಾಂಕ್ 348 ಕೋಟಿ ನಿವ್ವಳ ಲಾಭ
ಮಂಗಳೂರು: ಖಾಸಗಿ ರಂಗದ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ 2013-14ನೇ ಸಾಲಿನಲ್ಲಿ 348.08 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಕಳೆದ ಸಾಲಿನಲ್ಲಿ 246.07 ಕೋಟಿ ನಿವ್ವಳ ಲಾಭ ದಾಖಲಿಸಿದ್ದು, ಈ ವರ್ಷ ಶೇ.42.46 ಏರಿಕೆಯಾಗಿದೆ. ಬ್ಯಾಂಕ್ ವ್ಯವಹಾರ 61,263.90 ಕೋಟಿ ದಾಟಿದೆ. ವ್ಯವಹಾರದಲ್ಲಿಯೂ ಶೇ.17.07 ಪ್ರಗತಿ ದಾಖಲಿಸಿದೆ. ಬ್ಯಾಂಕ್ ಠೇವಣಿ 31,608.32 ಕೋಟಿಯಿಂದ 36,056.22 ಕೋಟಿಗೆ ಏರಿದೆ. ಸಾಲ ನೀಡಿಕೆ ಪ್ರಮಾಣ 20,720.70 ಕೋಟಿ. ಈ ವಿಭಾಗದಲ್ಲಿಯೇ ಶೇ.21.65 ಏರಿಕೆ ಕಂಡಿದೆ.
ಒಟ್ಟು ಆದಾಯ 4,161.93 ಕೋಟಿ. ಇಲ್ಲೂ ಶೇ.20.73 ಪ್ರಗತಿಯಾಗಿದೆ. ಬ್ಯಾಂಕ್ ಶೇ.40 ಡಿವಿಡೆಂಡ್ ಘೋಷಿಸಿದೆ. ಎನ್ಪಿಎ ಶೇ.2.11ರಿಂದ ಶೇ.1.51 ಇಳಿದಿದ್ದು ಉತ್ತಮ ಸಾಧನೆಯಾಗಿದೆ.
'ಎನ್ಪಿಎಯಲ್ಲಿ ಉತ್ತಮ ರಿಕವರಿಯಾಗಿದೆ. ಸಾಲದಲ್ಲಿ ಪರಿಣಾಮಕಾರಿ ಪ್ರಗತಿಯಿಂದಾಗಿ ಈ ಬಾರಿ ಸಾರ್ವಕಾಲಿಕ ನಿವ್ವಳ ಲಾಭ 348.08 ಲಭಿಸಿದೆ' ಎಂದು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ತಿಳಿಸಿದ್ದಾರೆ. ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ ಲಾಭ ಗಳಿಕೆ ಪ್ರಮಾಣ ಹೆಚ್ಚುತ್ತಲೇ ಇತ್ತು. ಬ್ಯಾಲೆನ್ಸ್ ಶೀಟ್ ಶಕ್ತಿಯುತಗೊಳಿಸಲು ಬ್ಯಾಂಕ್ ಸಮರ್ಪಕ ಸುಧಾರಣೆ ಜಾರಿಗೊಳಿಸಿ ಸಾಧಿಸಿದೆ ಎನ್ನುತ್ತಾರೆ ಭಟ್.
ಬ್ಯಾಂಕ್ 20 ರಾಜ್ಯ ಮತ್ತು 2 ಕೇಂದ್ರಾಡಳಿತ ಪ್ರದೇಶದಲ್ಲಿ ಶಾಖೆ ತೆರೆದಿದೆ. ಕಳೆದ ಸಾಲಿನಲ್ಲಿ 47 ಹೊಸ ಶಾಖೆ ಮತ್ತು 152 ಎಟಿಎಂ ತೆರೆಯಲಾಗಿದೆ. ಈ ವರ್ಷ ಮಾ.31ಕ್ಕೆ ಒಟ್ಟು 550 ಶಾಖೆ ಮತ್ತು 504 ಎಟಿಎಂಗಳಿವೆ. ಇದಲ್ಲದೆ ಹಳ್ಳಿಗಳಲ್ಲಿ 19 ಹಣಕಾಸು ಸೇರ್ಪಡೆ ಶಾಖೆ (ಎಫ್ಐಬಿ)ಗಳನ್ನು ತೆರೆದಿದೆ. 26 ಅತಿ ಸಣ್ಣ ಶಾಖೆ (ಯುಎಸ್ಬಿ)ಗಳನ್ನು ತೆರೆಯಲಾಗಿದೆ. ಗ್ರಾಹಕ ಸ್ನೇಹಿ ವಿಭಾಗದಲ್ಲಿ ಎರಡನೇ ಬೆಸ್ಟ್ ಬ್ಯಾಂಕರ್ ಪ್ರಶಸ್ತಿಗೆ ಪಾತ್ರವಾಗಿದೆ. ಇತರ ನಾಲ್ಕು ವಿಭಾಗಗಳಲ್ಲಿ ಎರಡನೇ ರನ್ನರ್ಅಪ್ ಪ್ರಶಸ್ತಿ ಲಭಿಸಿದೆ. ಬ್ಯಾಂಕ್ ಇನ್ನು 50ಕ್ಕೂ ಹೆಚ್ಚು ಶಾಖೆಗಳನ್ನು ಮತ್ತು 100ಕ್ಕೂ ಹೆಚ್ಚು ಎಟಿಎಂಗಳನ್ನು 2014 ಮಾರ್ಚ್ ಅಂತ್ಯದೊಳಗೆ ತೆರೆಯಲು ಉದ್ದೇಶಿಸಿದೆ. ಈ ಸಾಲಿನಲ್ಲಿ ಬ್ಯಾಂಕ್ ವ್ಯವಹಾರ ಗುರಿ 78,000 ಕೋಟಿ, ಠೇವಣಿ 45,500 ಕೋಟಿ, ಸಾಲ 32,500 ಕೋಟಿ ಗುರಿ ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

