ದಕ್ಷಿಣ ಕನ್ನಡ

ಡಿ. ಶಿವಪ್ಪ ಗೋಲ್ಡ್ ಕಪ್ ಫುಟ್ಬಾಲ್: ಬ್ಲೂ ಬಾಯ್ಸ್, ಪನ್ಯ ತಂಡ ಶುಭಾರಂಭ

Published On :

ಸುಂಟಿಕೊಪ್ಪ: ಸುಂಟಿಕೊಪ್ಪ ಬ್ಲೂ ಬಾಯ್ಸ್ ಯೂಥ್ ಕ್ಲಬ್ ತನ್ನ 33ನೇ ವಾರ್ಷಿಕೋತ್ಸವದ ಅಂಗವಾಗಿ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮತ್ತು ಜಿಲ್ಲಾ ಯುವ ಜನ ಸೇವೆ ಮತ್ತು ಕ್ರೀಡಾ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ, ಡಿ. ವಿನೋದ್ ಶಿವಪ್ಪ ಪ್ರಾಯೋಜಕತ್ವದ ಡಿ. ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಇಂದಿನ ಹಣಾಹಣಿಯಲ್ಲಿ ಪನ್ಯ ಎಫ್.ಸಿ. ತಂಡ ಮತ್ತು ಆತಿಥೇಯ ಬ್ಲೂ ಬಾಯ್ಸ್ ಕ್ಲತ್ ಕ್ಲಬ್ ತಂಡಗಳು ಶುಭಾರಂಭಗೊಂಡಿವೆ.
ಮೊದಲ ಪಂದ್ಯ ಹಣಾಹಣಿಯಲ್ಲಿ ಆತಿಥೇಯ ಬ್ಲೂ ಬಾಯ್ಸ್ ಯೂಥ್ ಕ್ಲಬ್ ತಂಡ ಹಾಲುಗುಂದದ ಭಗವತಿ ತಂಡದ ವಿರುದ್ಧ 4-2 ಗೋಲುಗಳಿಂದ ವಿಜಯಮಾಲೆ ಧರಿಸಿತು.  ವಿಜೇತ ತಂಡದ ಪರವಾಗಿ ಶೇಖರ್ ಪ್ರಥಮಾರ್ಧದ 6 ದ್ವೀತಿಯಾರ್ಧದ 6, 16 ನಿಮಿಷಗಳಲ್ಲಿ 3 ಗೋಲು ಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಜಿತೇಶ್ 7ನೇ ನಿಮಿಷದಲ್ಲಿ 4ನೇ ಗೋಲು ಬಾರಿಸಿದರು. ಪರಾಜಿತ ತಂಡದ ಪರವಾಗಿ ಮುನೀರ್ 11 ಹಾಗೂ ರಂಜಿತ್ 15ನೇ ನಿಮೀಷದಲ್ಲಿ ಟ್ರೈಬ್ರೇಕರ್ ಮೂಲಕ  ತಲಾ 1 ಗೋಲು ದಾಖಲಿಸುವ ಮೂಲಕ 2- 4 ಗೋಲುಗಳಿಂದ ಆತಿಥೇಯ ಬ್ಲೂ ಬಾಯ್ಸ್ ತಂಡ ಜಯಗಳಿಸಿತ್ತು.
ದ್ವಿತೀಯ ಮೈಸೂರಿನ ಸ್ಟ್ರೈಕರ್ ತಂಡ ಮತ್ತು ಪನ್ಯ ಎಫ್.ಸಿ. ತಂಡಗಳ ನಡುವೆ ನಿಗದಿಯಾಗಿತ್ತು.
ಆದರೆ ಮೈಸೂರು ತಂಡದ ಅನುಪಸ್ಥಿತಿಯಲ್ಲಿ ಪನ್ಯ ತಂಡ ವಾಕ್ ಓವರ್ ಪಡೆಯಿತು.
ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಎ. ಲೋಕೇಶ್ ಕುಮಾರ್‌ರವರು ಧ್ವಜಾರೋಹಣ ನೇರವೇರಿಸಿ ನಂತರ ಫುಟ್ಬಾಲ್ ಒದೆಯುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಸಂಘದ ಅಧ್ಯಕ್ಷ ಆಲಿಕುಟ್ಟಿ, ಪದಾಧಿಕಾರಿಗಳಾದ ಟಿ.ವಿ. ಪ್ರಸನ್ನ, ಟಿ.ಆರ್. ಉದಯಕುಮಾರ್, ಬಿ.ಕೆ. ಶಶಿಕುಮಾರ್ ರೈ, ಹಮೀದ್, ಯು.ಎಂ. ಅನಿಲ್ ಕುಮಾರ್, ಪಂಚಾಯಿತಿ ಸದಸ್ಯ ಪಿ.ಆರ್. ಸುಕುಮಾರ್ ಹಾಗೂ ಇನ್ನಿತರರು ಇದ್ದರು.
ಇಂದಿನ ಪಂದ್ಯಗಳು: ಮಧ್ಯಾಹ್ನ 2 ಗಂಟೆಗೆ ಹೀರೋ ಎಫ್.ಸಿ. ತಲಪ್ಪಾಡಿ ಮಂಗಳೂರು ವಿರುದ್ಧ ಶೀತಲ್ ಎಫ್.ಸಿ. ಮೈಸೂರು
ಮಧ್ಯಾಹ್ನ 3 ಗಂಟೆಗೆ ಬೋಳಾರ್ ಬ್ರದರ್ಸ್ ಕ್ಲಬ್ ಬೆಂಗಳೂರು ವಿರುದ್ಧ ಸ್ವರ್ಣ ಎಫ್.ಸಿ. ಮಂಡ್ಯ
ಮಧ್ಯಾಹ್ನ 4 ಗಂಟೆಗೆ ಅಶೋಕ ಎಫ್.ಸಿ. ಮೈಸೂರು  ವಿರುದ್ಧ ಸಿಟಿಜನ್ ಸ್ಪೋರ್ಟ್ಸ್ ಕ್ಲಬ್ ಉಪ್ಪಳ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.