ದಕ್ಷಿಣ ಕನ್ನಡ

ಸಿಎಪಿಎಫ್ ಸಿಬ್ಬಂದಿ ಜಮ್ಮುಗೆ ತೆರಳಲು ವಿಶೇಷ ಬೋಗಿ

Published On :

ಮಂಗಳೂರು: ರೇಲ್ವೆ ಇಲಾಖೆ ವತಿಯಿಂದ ಕೇಂದ್ರಿಯ ಸಶಕ್ತ ಪೊಲೀಸ್ ಪಡೆ(ಸಿಎಪಿಎಫ್)ಯವರು ಜಮ್ಮು ಕಾಶ್ಮೀರಕ್ಕೆ ತೆರಳಲು ನವಯುಗ್ ಎಕ್ಸ್‌ಪ್ರೆಸ್ ರೈಲಿನಲ್ಲಿ ವಿಶೇಷ ಬೋಗಿಯನ್ನು ಕಲ್ಪಿಸಲಾಗಿದೆ ಎಂದು  ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ ದಕ್ಷಿಣ ವಲಯದ ಇನ್‌ಸ್ಪೆಕ್ಟರ್ ಜನರಲ್ ಡಾ.ಕೆ. ಜಯಂತ್ ಮುರಳಿ ಹೇಳಿದ್ದಾರೆ.
 ನಗರದ ಸೆಂಟ್ರಲ್ ರೇಲ್ವೆ ನಿಲ್ದಾಣದಕ್ಕೆ ಸೋಮವಾರ ಬಂದಿದ್ದ ನವಯುಗ ಎಕ್ಸ್‌ಪ್ರೆಸ್ ರೈಲಿನ ವಿಶೇಷ ಬೋಗಿ ಉದ್ಘಾಟಿಸಿ ಮಾತನಾಡಿದರು.
ಕುದುರೆಮುಖದಲ್ಲಿ 300, ವಿಮಾನ ನಿಲ್ದಾಣದಲ್ಲಿ 150 ಹಾಗೂ ಎಂಆರ್‌ಪಿಎಲ್, ಎನ್‌ಎಂಪಿಟಿ ಕಡೆಗಳಲ್ಲಿ ಸಿಐಎಸ್‌ಎಫ್ ಸಿಬ್ಬಂದಿಗಳಿದ್ದಾರೆ. ಅವರಿಗೆ ಜಮ್ಮುವಿಗೆ ಪ್ರಯಾಣಿಸಲು ಪ್ರತ್ಯೇಕ ಕೋಚ್ ವ್ಯವಸ್ಥೆ ಪ್ರಯೋಜನವಾಗಲಿದೆ. ತಮ್ಮ ಕುಟುಂಬದವರಿಗೂ ಇದರಲ್ಲಿ ಪ್ರಯಾಣಿಸಲು ಅವಕಾಶವಿದೆ ಎಂದರು.  ಸದ್ಯ ಚೆನ್ನೈಯಿಂದ ಜಮ್ಮು ಹಾಗೂ ಮಂಗಳೂರಿನಿಂದ ಜಮ್ಮುವಿಗೆ ಪ್ರಯಾಣಿಸಲು ರೈಲಿನಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ದಕ್ಷಿಣ ರೇಲ್ವೆಯ ಅಂಡಮಾನ್ ಎಕ್ಸ್‌ಪ್ರೆಸ್, ಡೆಹ್ರಾಡೂನ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರುತ್ತಿದೆ ಎಂದು ಹೇಳಿದರು.
 ಸಿಐಎಸ್‌ಎಫ್, ಬಿಎಸ್‌ಎಫ್, ಐಟಿಬಿಪಿ, ಎನ್‌ಎಸ್‌ಜಿ ಮುಂತಾದ ವಿಭಾಗ ಸಿಬ್ಬಂದಿಗಳ ಕೇಂದ್ರ ಸ್ಥಾನ ಜಮ್ಮು ಆಗಿರುವುದರಿಂದ ಅವರು ಆಗಾಗ ತೆರವುದು ಅನಿವಾರ್ಯ. ಪ್ರತ್ಯೇಕ ಬೋಗಿಗಾಗಿ ರೇಲ್ವೆ ಇಲಾಖೆ ಮಾಡಿದ ಒಪ್ಪಂದದಂತೆ ಪ್ರತಿವರ್ಷ ಇಲಾಖೆಗೆ ರು. 1.56 ಕೋಟಿ ನೀಡಬೇಕಾಗಿದೆ ಎಂದು ಜಯಂತ್ ಮುರಳಿ ಹೇಳಿದರು.
 ಸಿಐಎಸ್‌ಎಫ್ ಉಪ ಸಮಾದೇಷ್ಠ ಎಂ.ಎಲ್. ಮೀನಾ, ಇನ್‌ಸ್ಪೆಕ್ಟರ್ ವಿ.ಎಸ್. ಥಾಕೂರ್, ರೇಲ್ವೆಯ ಹಿರಿಯ ಡಿಎಂ ಶಂಕರಮೂರ್ತಿ, ಬಿಎಸ್‌ಎಫ್ ಹಿರಿಯ ಸಮಾದೇಷ್ಠ ಡಾ. ಅನಿಲ್ ಪಾಂಡೆ, ಮಂಗಳೂರು ಕೇಂದ್ರ ರೇಲ್ವೆ ಸ್ಟೇಶನ್‌ನ ವ್ಯವಸ್ಥಾಪಕ ಪಿ.ಕೆ. ಶಿವದಾಸನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.