ರಜೆ ನೀಡದಿರುವುದೇ ಮಹಿಳಾ ಎಎಸ್ಐ ದೂರಿಗೆ ಕಾರಣ
ಮಂಗಳೂರು: ನಗರ ದಕ್ಷಿಣ ಎಸಿಪಿ ಟಿ.ಆರ್. ಜಗನ್ನಾಥ್ ವಿರುದ್ಧ ಕಿರುಕುಳ ಆರೋಪ ಹೊರಿಸಲು ರಜೆ ಮಂಜೂರು ಮಾಡದಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ.
ಪಾಂಡೇಶ್ವರ ಠಾಣೆಯ ಮಹಿಳಾ ಎಎಸ್ಐವೊಬ್ಬರು ಐದು ದಿನಗಳ ಕಾಲ ರಜೆ ಬೇಕು ಎಂದು ಅರ್ಜಿ ಬರೆದು ಎಸಿಪಿಗೆ ನೀಡಿದ್ದರು. ಆದರೆ, ಎಸಿಪಿಯವರು 'ನೋಡೋಣ ಮೂರು ದಿನ ಬಿಟ್ಟು ಬನ್ನಿ' ಹೇಳಿದ್ದೇ ಮಹಿಳಾ ಎಎಸ್ಐ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಕೂಡಾ ನಡೆದಿತ್ತು. ಎಸಿಪಿ ಈ ಸಂದರ್ಭ ಅವಾಚ್ಯ ಶಬ್ದದಲ್ಲಿ ನಿಂದಿಸಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪೊಲೀಸ್ ಕಮಿಷನರ್ ಮನೀಶ್ ಕರ್ಬಿಕರ್ ಮಾತನಾಡಿಸಿದಾಗ, 'ಇಷ್ಟೆಲ್ಲಾ ಆಗಿರೋದು ರಜೆಗೋಸ್ಕರ ಮತ್ತು ದಿನ ನಿತ್ಯ ಕೆಲಸ ಕಾರ್ಯ ನೀಡುವ ಬಗ್ಗೆ. ಮಹಿಳಾ ಎಎಸ್ಐ ನನ್ನ ಬಳಿ ಬಂದು ಮುಖತಃ ಮಾತನಾಡಿದಾಗ ಎಲ್ಲೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದನ್ನು ಹೇಳಿಯೇ ಇಲ್ಲ. ದೂರಿನಲ್ಲಿಯೂ ರಜೆ ನೀಡದೆ ಕಿರುಕುಳ ನೀಡುತ್ತಾರೆ. ಆವೇಳೆಯಲ್ಲಿ ಡ್ಯೂಟಿ ಮಾಡಿಸುತ್ತಾರೆ ಎಂದು ಹೇಳಿದ್ದಾರೆ. ಕೆಟ್ಟ ಶಬ್ದ ಬಳಿಸಿ ನಿಂದಿಸಿದ್ದಾರೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಒಂದು ಸಾಲು ಬಿಟ್ಟರೆ ಉಳಿದಂತೆ ಹೇಗೆ ನೀಡಿದರು ವಿವರ ಇಲ್ಲ. ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ವಿಚಾರ ಮಾಧ್ಯಮದವರು ನನಗೆ ಕರೆ ಮಾಡಿದಾಗಲೇ ಗೊತ್ತಾಗಿರೋದು' ಎಂದರು.
'ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ನಗರ ಕಾನೂನು ಸುವ್ಯವಸ್ಥೆ ಡಿಸಿಪಿಗೆ ಸೂಚಿಸಿದ್ದೇನೆ' ಎಂದು ಕಮಿಷನರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

