ಡೆಂಘಿ/ಮಲೇರಿಯಾ ವಿರುದ್ಧ ಮುನ್ನೆಚ್ಚರಿಕೆ ವಹಿಸಿ
ಮಂಗಳೂರು: ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಮಲೇರಿಯಾ, ಡೆಂಘಿಯಂಥ ಸಾಂಕ್ರಾಮಿಕ ರೋಗ ತಲೆದೋರುವುದನ್ನು ತಪ್ಪಿಸಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ನೀರು ನಿಲ್ಲದಂತೆ ತ್ಯಾಜ್ಯ ವಸ್ತುಗಳ ಸಮರ್ಪಕ ವಿಲೇವಾರಿ ಮಾಡುವಂತೆ ಆರೋಗ್ಯ ಸಹಾಯಕಿಯರ ಮೂಲಕ ಜನರಿಗೆ ತಿಳುವಳಿಕೆ ನೀಡಲಾಗಿದೆ. ಕಟ್ಟಡ ನಿರ್ಮಾಣ ಕಾರ್ಮಿಕರಲ್ಲೇ ಹೆಚ್ಚಾಗಿ ಮಲೇರಿಯಾ ಕಂಡುಬರುತ್ತಿದ್ದು, ಆ ಪ್ರದೇಶಗಳಿಗೆ ಆರೋಗ್ಯ ಕಾರ್ಯಕರ್ತೆಯರು ಪ್ರತಿ ವಾರ ಭೇಟಿ ನೀಡಿ ಮಲೇರಿಯಾ ಸಮೀಕ್ಷೆ, ರಕ್ತ ಪರೀಕ್ಷೆ, ಪರಿಸರ ನೈರ್ಮಲ್ಯ ಪರಿಶೀಲನೆ ನಡೆಸಲಾಗುತ್ತದೆ. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಮಲೇರಿಯಾ ಪತ್ತೆಗೆ ರಕ್ತಪರೀಕ್ಷೆಗೆ ಆದ್ಯತೆ ನೀಡಲಾಗಿದೆ. ಶಂಕಿತ ಡೆಂಘಿ ಜ್ವರ ಪ್ರಕರಣ ಕಂಡುಬಂದರೆ ಎನ್ಎಸ್ಐ ಕಿಟ್ ಬಳಸಿ ತಕ್ಷಣ ರಕ್ತಪರೀಕ್ಷೆಗೆ ಆರೋಗ್ಯ ಕೇಂದ್ರಗಳಿಗೆ ಕಿಟ್ ಸರಬರಾಜು ಮಾಡಲಾಗಿದೆ. ಅಲ್ಲದೆ ಮಲೇರಿಯಾ ಔಷಧಗಳನ್ನು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ದಾಸ್ತಾನು ಇರಿಸಲಾಗಿದೆ. ಮಲೇರಿಯಾ ಅಥವಾ ಡೆಂಘಿ ಕಂಡುಬಂದರೆ ಸಮೀಪ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಓ.ಶ್ರೀರಂಗಪ್ಪ ವಿನಂತಿಸಿದ್ದಾರೆ.
2012ರಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ 888 ಮಲೇರಿಯಾ ಪ್ರಕರಣ ದಾಖಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 5327 ಪ್ರಕರಣ ಪತ್ತೆಯಾಗಿದ್ದು, ಈ ವರ್ಷ ಇಲ್ಲಿವರೆಗೆ ಗ್ರಾಮಾಂತರದಲ್ಲಿ 268 ಹಾಗೂ ನಗರ ಪ್ರದೇಶದಲ್ಲಿ 1266 ಪ್ರಕರಣ ಪತ್ತೆಯಾಗಿದೆ. ಇದೇ ರೀತಿ ಕಳೆದ ವರ್ಷ 407 ಮಂದಿಯ ಡೆಂಘಿ ರಕ್ತ ಮಾದರಿ ಸಂಗ್ರಹಿಸಿದ್ದು, 300 ಮಂದಿಗೆ ಡೆಂಘಿ ತಗಲಿತ್ತು, ಒಬ್ಬರು ಮೃತಪಟ್ಟಿದ್ದರು. ಈ ವರ್ಷ ಇಲ್ಲಿವರೆಗೆ 74 ಮಾದರಿ ರಕ್ತ ಸಂಗ್ರಹಿಸಲಾಗಿದ್ದು, 60 ಮಂದಿಗೆ ಡೆಂಘಿ ಖಚಿತಪಟ್ಟಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

