ದಕ್ಷಿಣ ಕನ್ನಡ

ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ

Published On :

ಮಂಗಳೂರು: ಉದ್ಯೋಗ ಮತ್ತು ತರಬೇತಿ ಇಲಾಖೆಯ ವತಿಯಿಂದ 2013-14ನೇ ಸಾಲಿನ ಸರ್ಕಾರಿ ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ವೃತ್ತಿಯ ಹೆಸರು: ಸಿಒಪಿಎ(ಕಂಪ್ಯೂಟರ್ ಆಪರೇಟರ್ ಅಂಡ್ ಪ್ರೋಗ್ರಾಂಗ್ ಅಸಿಸ್ಟೆಂಟ್), ಎಲೆಕ್ಟ್ರಾನಿಕ್ ಮೆಕ್ಯಾನಿಕ್ ತರಬೇತಿಗೆ ಅರ್ಜಿ ಆಹ್ವಾನಿಲಾಗಿದೆ. ಆಸಕ್ತ ಯುವಕ, ಯುವತಿಯರು ಹತ್ತಿರದ ಸರ್ಕಾರಿ ಐಟಿಐ ಸಂಸ್ಥೆಗಳಿಂದ ಪಡೆದು ಅರ್ಜಿ ಸಲ್ಲಿಸಬಹುದು. ಮೇ 31 ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ 0824-2451539 ಸಂಪರ್ಕಿಸಬಹುದು.

ಇಎಸ್‌ಐ ಸಮಸ್ಯೆಗೆ ಸ್ಪಂದಿಸಿ: ಜೆಡಿಯು
ಮಂಗಳೂರು: ಇಎಸ್‌ಐ ಆಸ್ಪತ್ರೆಯ ಅವ್ಯವಸ್ಥೆ ನಿವಾರಣೆಗೆ ಕಳೆದ ಏಳು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜಿಲ್ಲಾ ಕಾರ್ಮಿಕ ಸಂಘದ ಮುಖ್ಯಸ್ಥ ಸುದತ್ತ್ ಜೈನ್ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಸಂಯುಕ್ತ ಜನತಾ ದಳ ಕಳವಳ ವ್ಯಕ್ತಪಡಿಸಿದೆ. ಕೂಡಲೆ ಜಿಲ್ಲಾಧಿಕಾರಿ ಮತ್ತು ರಾಜ್ಯ ಸರ್ಕಾರ ಇಎಸ್‌ಐ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಮಧ್ಯ ಪ್ರವೇಶಿಸಬೇಕು. ಅಲ್ಲದೆ ಏಕವ್ಯಕ್ತಿ ಸಂಸ್ಥೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಪಿಎಫ್ ಮತ್ತು ಇಎಸ್‌ಐ ಸೌಲಭ್ಯ ಕಲ್ಪಿಸುವಂತೆ ಮನವಿ ಜಿಲ್ಲಾಧಿಕಾರಿಗೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಜೆಡಿಯು ಕಾರ್ಮಿಕ ಘಟಕದ ಅಧ್ಯಕ್ಷ ಪ್ರವೀಣ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಪುಸ್ತಕ ಖರೀದಿಗೆ ಅರ್ಜಿ ಆಹ್ವಾನ
ಮಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದವು 2010ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಾಗಿ ಮುದ್ರಣಗೊಂಡ ಕನ್ನಡ ಪುಸ್ತಕಗಳನ್ನು ಪ್ರಾಧಿಕಾರದ ಸಗಟು ಖರೀದಿ ಯೋಜನೆಯಡಿ ಖರೀದಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯನ್ನು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಿಂದ ಮೇ 20 ರಿಂದ ಜೂ. 5ರೊಳಗೆ ಪಡೆಯಬಹುದು. ಅರ್ಜಿಗಳನ್ನು ಆಡಳಿತಾಧಿಕಾರಿ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 560002 ಸಂಪರ್ಕಿಸಬಹುದು. ಜೂ. 15 ಕೊನೆ ದಿನ.

ಅರ್ಜಿ ಆಹ್ವಾನ
ಮಂಗಳೂರು: ದಿ. ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಹೆಸರಿನಲ್ಲಿ ನೀಡಲಾಗುವ 2013-14ನೇ ಸಾಲಿನ ಪ್ರಶಸ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಸ್ವಯಂ ವಿಳಾಸ, ಪರಿಚಯ, ಭಾವಚಿತ್ರ, ಸಾಧನೆಗಳ ಬಗೆಗಿನ ಕಿರು ಪರಿಚಯ ಹಾಗೂ ಛಾಯಾಚಿತ್ರಗಳ ದ್ವಿಪ್ರತಿ ಸಲ್ಲಿಸಬೇಕು. ಜೂ. 30 ಕೊನೆ ದಿನ. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಪಡೆಯಬಹುದು ಎಂದು ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಸಮುದಾಯ ಭವನ ಉದ್ಘಾಟನೆ
ಮೂಲ್ಕಿ: ತಾಳಿಪಾಡಿಯ ಬಿಲಾರಿಯಾ ಜುಮ್ಮಾ ಮಸೀದ ಮತ್ತು ಹಯತುಲ್ಲಾ ಇಸ್ಲಾಂ ಮದ್ರಸ ಸಮಿತಿಯ ವತಿಯಿಂದ ರು. 50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕೆ.ಜೆ.ಎಂ. ಸಮುದಾಯ ಭವನದ ಉದ್ಘಾಟನೆಯು ಭಾನುವಾರ ಬೆಳಗ್ಗೆ ಜರಗಲಿದೆ. ಸಚಿವರಾದ ಯು.ಟಿ. ಖಾದರ್, ಕೆ. ಅಭಯಚಂದ್ರ ಜೈನ್ ಸಮುದಾಯ ಭವನದ ಉದ್ಘಾಟನೆ ನೆರವೇರಿಸಲಿದ್ದು, ಸಂಸದ ನಳಿನ್ ಕುಮಾರ ಕಟೀಲ್, ಸುರತ್ಕಲ್ ಶಾಸಕ ಬಿ.ಎ. ಮೊಯಿದಿನ್ ಬಾವಾ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹುದ್ದೆಗೆ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕೇಂದ್ರಗಳು: ಬಾಳ, ಅಸೈಮದಕ, ಜೋಕಟ್ಟೆ-3, ಉಳೆಪಾಡಿ-2, ಚೆನ್ನೊಟ್ಟು, ಕೊಣಾಜೆ, ರತಡ್ಕ, ಲಚ್ಚಿಲ್ ಕುತ್ತಾರ್, ಕನೀರ್ ತೋಟ, ಉಳಾಯಿಬೆಟ್ಟು-1, ಅಳಪೆ ಶಿವನಗರ, ಕಾಟಿಪಳ್ಳ-7, ಬೆಂಗ್ರೆ ಕಸಬಾ, ಪಚ್ಚನಾಡಿ ಪದವಿನಂಗಡಿ, ಬೆಂಗ್ರೆ ಕೇಂದ್ರಗಳಿಗೆ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
18 ರಿಂದ 44 ವರ್ಷ ವಯೋವುತಿ ಮೀರಿರಬಾರದು. ಅರ್ಜಿ ಸಲ್ಲಿಸಲು ಜೂ. 10 ಕೊನೆ ದಿನ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.