ಕಾರವಾರ ಸೇರಿ ಮಂಗಳೂರು ರೇಲ್ವೆ ವಿಭಾಗ ಬೇಡಿಕೆ
ಮಂಗಳೂರು: ಮಂಗಳೂರನ್ನು ಕಾರವಾರ ಸಮೇತ ಪ್ರತ್ಯೇಕ ರೇಲ್ವೆ ವಿಭಾಗ ಮಾಡಿ ನೈಋತ್ಯ ವಲಯದೊಂದಿಗೆ ಸೇರಿಸಬೇಕು ಎಂದು ಮೈಸೂರು ವಿಭಾಗ ರೇಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಸುದರ್ಶನ ಪುತ್ತೂರು ರೇಲ್ವೆ ಸಚಿವಾಲಯವನ್ನು ಆಗ್ರಹಿಸಿದ್ದಾರೆ. 13 ಬೋಗಿಗಳ ರೈಲು ಕಾರವಾರಕ್ಕೆ ಚಲಿಸುತ್ತಿದ್ದರೂ ಸರಿಯಾದ ಸಮಯಕ್ಕೆ ಓಡುತ್ತಿಲ್ಲ ಎಂದು ಆರೋಪಿಸಿದರೆ ರೈಲಿನ ದಿಕ್ಕನ್ನೇ ಬದಲಿಸುವ ಪ್ರಯತ್ನ ಆಗುತ್ತಿದೆ. ಈ ವಿಚಾರವನ್ನು ರೇಲ್ವೆ ಬಳಕೆದಾರರ ಸಭೆಯಲ್ಲಿ ಪ್ರಸ್ತಾಪಿಸಿದರೂ ವೇಳಾಪಟ್ಟಿ ಪರಿಷ್ಕರಣೆ ಆಗಿಲ್ಲ. ಹಗಲು ರೈಲನ್ನು ನಿತ್ಯ ಓಡಿಸಲು ಮಂಗಳೂರು ಮತ್ತು ಉಡುಪಿ ಸಂಸದರ ಶಿಫಾರಸ್ಸಿನೊಂದಿಗೆ ಹುಬ್ಬಳ್ಳಿಯ ನೈಋತ್ಯ ರೇಲ್ವೆ ವ್ಯವಸ್ಥಾಪಕರಿಗೆ ಮತ್ತು ರೇಲ್ವೆ ಸಚಿವರಿಗೆ ಒತ್ತಡ ಹೇರಲಾಗಿದೆ. ಕಾರವಾರ ರೈಲಿಗೆ 22 ಬೋಗಿ ಜೋಡಿಸುವ ಪ್ರಸ್ತಾಪವನ್ನೂ ರೇಲ್ವೆ ಇಲಾಖೆ ಪರಿಗಣಿಸಿಲ್ಲ. ಈಗಿರುವ ರೇಲ್ವೆ ಸಂಚಾರ ಸಮಯದಲ್ಲಿ ವಿಳಂಬ ತಪ್ಪಿಸಲು ಇಲಾಖೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

