ಮನಸ್ಸು ಕ್ರಿಯಾಶೀಲವಾಗಿದ್ದರೆ ಯೋಗ ಭಾಗ್ಯ: ರಾಘವೇಶ್ವರ ಶ್ರೀ
ಪುತ್ತೂರು; ಮನಸ್ಸು ಕ್ರಿಯಾಶೀಲವಾಗಿದ್ದಾಗ ಯೋಗ ಭಾಗ್ಯಗಳು ಲಭಿಸುತ್ತದೆ. ಕ್ರಿಯಾಶೀಲತೆಯ ಸಕ್ರಿಯತೆಗೆ ಮನಸ್ಸಿನ ಏಕಾಗ್ರತೆ ಅವಶ್ಯಕ. ಪ್ರತಿಯೊಬ್ಬರಲ್ಲೂ ಅನಾವರಣಗೊಳ್ಳುವ ಮನಸ್ಸಿನ ಶಕ್ತಿಯ ಶೇ.90 ಭಾಗ ನಿಷ್ಪ್ರಯೋಜಕವಾಗುವುದೇ ಅಧಿಕ. ಇದನ್ನು ಪ್ರಯೋಜನದ ದಾರಿಯಲ್ಲಿ ಒಯ್ಯುವ ಸಾಮರ್ಥ್ಯ ಯೋಗಕ್ಕಿದೆ. ಹೀಗಾದಾಗ ನಮಗರಿವಿಲ್ಲದೆ ಜೀವನ ಪವಾಡಗಳು ಘಟಿಸುವುದಕ್ಕೆ ಸಾಧ್ಯ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅವರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಶುಕ್ರವಾರ ಪುತ್ತೂರು ಯೋಗ ಕೇಂದ್ರ ಸಂಘಟಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಆಧ್ಯಾತ್ಮ ಸೌರಭ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ವ್ಯಾಕರಣದಿಂದ ಮಾತು ಹೇಗೆ ಶುದ್ಧವಾಗುವುದೋ ಅದರಂತೆ ಯೋಗದಿಂದ ಮನಸ್ಸು ಶುದ್ಧವಾಗುತ್ತದೆ. ಮನಸ್ಸು ನಿಯಂತ್ರಣದಲ್ಲಿದ್ದಾಗ ಏಕವಾಹಿನಿಯಲ್ಲಿ ಪ್ರವಹಿಸಿದಾಗ ಬದುಕಿನಲ್ಲಿ ಚಮತ್ಕಾರಗಳು ಗೋಚರವಾಗುತ್ತದೆ. ಏಕಾಗ್ರತೆಯಿಂದ ಸೂಕ್ಷ್ಮ ಆತ್ಮಮಾರ್ಗದ ಕಡೆಗೆ ಪಯಣಿಸುವುದಕ್ಕೆ ಸಾಧ್ಯವಾಗುತ್ತದೆ. ಈ ಮೂಲಕ ಆತ್ಮಸೌರಭದ ಪರಿಮಳ ಪಸರಿಸಬೇಕು. ಏಕಾಗ್ರತೆ ಇಲ್ಲದೆ ಯಾವುದೇ ಕೆಲಸ ಮಾಡಲು ಅಸಾಧ್ಯ ಎಂದರು. ಶಿಬಿರವನ್ನು ಬೆಂಗಳೂರು ಸ್ವಾಮಿ ವಿವೇಕಾನಂದ ಯೋಗ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ. ಎಚ್.ಆರ್. ನಾಗೇಂದ್ರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಯೋಗ ಕೇಂದ್ರದ ಅಧ್ಯಕ್ಷ ಗಿರೀಶ್ ಮಳಿ, ಕಾರ್ಯದರ್ಶಿ ಪ್ರಸಾದ್ ಪಾಣಾಜೆ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

