ದಕ್ಷಿಣ ಕನ್ನಡ

ಮಟ್ಕಾಜೂಜು ಹಣ ಸಂಗ್ರಹ: ಇಬ್ಬರ ಬಂಧನ

Published On :

ಮೂಲ್ಕಿ: ಇಲ್ಲಿನ ಬಸ್ ನಿಲ್ದಾಣದ ಹಿಂಬದಿಯಲ್ಲಿ ಸೋಮವಾರ ರಾತ್ರಿ ಮಟ್ಕಾ ಜೂಜಾಟಕ್ಕೆ ಹಣ ಸಂಗ್ರಹಿಸುತ್ತಿದ್ದ ಖಚಿತಿ ಮಾಹಿತಿ ಮೇರೆಗೆ ಮೂಲ್ಕಿ ಪೊಲೀಸರು ದಾಳಿ ನಡೆಸಿ ಮಟ್ಕಾ ಜೂಜಾಟಕ್ಕೆ ಹಣ ಸಂಗ್ರಹಿಸುತ್ತಿದ್ದ ಬಂಟ್ವಾಳ ಕೊಡಂಬೆಟ್ಟು ನಿವಾಸಿ ಮಧುಶಾ ಮತ್ತು ಸಾಂತೂರು ಪಿಲಾರು ನಿವಾಸಿ ರವಿ ಶೆಟ್ಟಿಯನ್ನು ದಸ್ತಗಿರಿ ಮಾಡಿದ್ದಾರೆ. ಅವರಿಂದ ರು. 1,400 ವಶಪಡಿಸಿಕೊಂಡಿದ್ದು, ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪತ್ನಿ ಸಹೋದರಿಗೆ ಹಲ್ಲೆ: ದೂರು


ವಿಟ್ಲ: ಪೊಲೀಸರಿಗೆ ದೂರು ನೀಡಿದ ವಿಚಾರದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಸಹೋದರಿಗೆ ಹಲ್ಲೆ ನಡೆಸಿದ ಘಟನೆ ಶನಿವಾರ ಬೆಳಗ್ಗಿನ ಜಾವ ವಿಟ್ಲದ ಕೇಪು ಗ್ರಾಮದ ನೀರ್ಕಜೆ ಸಮೀಪದ ಕುಕ್ಕೆಬೆಟ್ಟು ಎಂಬಲ್ಲಿ ನಡೆದಿದೆ.
ಕುಕ್ಕುಬೆಟ್ಟು ನಿವಾಸಿ ಮಹಮ್ಮದ್ ಎಂಬವರ ಪುತ್ರಿ ಫಾತಿಮತ್ ಜೋಹಾರ(30) ಹಲ್ಲೆಗೊಳಗಾಗಿದ್ದು, ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂಬೈನ ಸೀತಾಕ್ಯಾಂಪ್ ನಿವಾಸಿ ಹನೀಫ್ ಯಾನೆ ಜೋಗಿ ಹನೀಫ್ ಎಂಬವರಿಗೆ ಮಹಮ್ಮದ್ ಅವರ ಮೊದಲ ಪುತ್ರಿ ಸೆಲಿಮಾಳನ್ನು ವಿವಾಹ ಮಾಡಿ ಕೊಡಲಾಗಿತ್ತು. ವಿವಾಹವಾಗಿ ಕೆಲವು ವರ್ಷಗಳ ಬಳಿಕ ಆತ ವರದಕ್ಷಿಣೆಗಾಗಿ ಸೆಲಿಮಾಗೆ ನಿರಂತರ ಹಿಂಸೆ ನೀಡುತ್ತಿದ್ದ, ಅಲ್ಲದೆ ಅ.23ರಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಎಂದು ಸೆಲಿಮಾ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಳು. ಆತನ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ವಿಫಲರಾಗಿದ್ದರು ಎಂದು ಆರೋಪಿಸಲಾಗಿದೆ.
ಇದೇ ದ್ವೇಷದಿಂದ ಶನಿವಾರ ಬೆಳಗ್ಗಿನ ಜಾವ 3.30ರ ವೇಳೆ ಮನೆಯ ಹಿಂಬಾಗಿಲು ಮುರಿದು ಒಳಪ್ರವೇಶಿಸಿದ ಹನೀಫ್, ಸೆಲಿಮಾಳ ಪಕ್ಕದಲ್ಲಿ ಮಲಗಿದ್ದ ಆಕೆ ಸಹೋದರಿ ಫಾತಿಮಾತ್ ಜೋಹಾರ ಜಡೆ ಎಳೆದು, ಕತ್ತು ಹಿಸುಕಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಜೋಹಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.