ರಂಗಭೂಮಿಗೆ ಚೌಟ ಕೊಡುಗೆ ಅನನ್ಯ: ಡಾ.ಬಿ.ಜಯಶ್ರೀ
ಕಾಂತಾವರ: ಋಷಿಸದೃಶರಾಗಿ ಬದುಕುತ್ತಿರುವ ಡಾ.ಡಿ.ಕೆ.ಚೌಟ ತನ್ನ ಸಂಪಾದನೆಯ ಬಹುಭಾಗವನ್ನು ಸಮಾಜಕ್ಕೆ ನೀಡುತ್ತಾ ಬಂದವರು. ಚಿತ್ರಕಲಾ ಪರಿಷತ್ತು ಹಾಗೂ ರಂಗಭೂಮಿಗೆ ಅವರ ಕೊಡುಗೆ ಅನನ್ಯವಾದುದು ಎಂದು ರಾಜ್ಯಸಭಾ ಸದಸ್ಯೆ ಹಾಗೂ ರಂಗಕರ್ಮಿ ಡಾ. ಬಿ. ಜಯಶ್ರೀ ಅಭಿಪ್ರಾಯಪಟ್ಟಿದ್ದಾರೆ. 75ರ ಬಯಲಿನಲ್ಲಿರುವ ತುಳು, ಕನ್ನಡ ಉಭಯ ಭಾಷಾ ಪಯಸ್ವಿನಿ, ಕಲಾಪೋಷಕ, ಅಲ್ಲಮಪ್ರಭು ಪೀಠದ ಸಂಸ್ಥಾಪಕರೂ ಆದ ಡಾ.ಡಿ.ಕೆ.ಚೌಟರನ್ನು ಕಾಂತಾವರದ ಅಲ್ಲಮಪ್ರಭು ಪೀಠಕ್ಕಾಗಿ ಅವರೇ ನಿರ್ಮಿಸಿಕೊಟ್ಟ ಚೌಟರ ಚೌಕಿಯಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದಿಸಿ ಅವರು ಮಾತನಾಡಿದರು. ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ವೈಚಾರಿಕ ಜಾಗೃತಿ ಹಾಗೂ ಸಾಹಿತ್ಯಾಸಕ್ತಿ ಮೂಡಿಸುವಂತಹ ಕಾರ್ಯ ತನ್ನ ಕ್ಷೇತ್ರದ ಗ್ರಾಮವೊಂದರಲ್ಲಿ ಆಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಸಂಸ್ಕೃತಿ ಕೇಂದ್ರ ಟ್ರಸ್ಟ್ನ ಸಂಸ್ಥಾಪಕ ಕಾರ್ಯದರ್ಶಿ ಶ್ರೀ ನಂಜುಂಡಸ್ವಾಮಿ ತೊಟ್ಟವಾಡಿ ಮಾತನಾಡಿ, ಬುದ್ಧ, ಬಸವ ಅಂಬೇಡ್ಕರ್ ಮತ್ತು ಗಾಂಧಿತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಯಾರಿಗೂ ನೋವಾಗದಂತೆ ಸಂತನಂತೆ ಬದುಕುತ್ತಿರುವ ಚೌಟರ ಜೀವನವೇ ನಮಗೆಲ್ಲ ಪ್ರೇರಣದಾಯಕ ಎಂದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಡಿ.ಕೆ ಚೌಟ, ತಾನು ಮನುಷ್ಯನಾಗಿ ತನ್ನ ಕರ್ತವ್ಯವನ್ನಷ್ಟೇ ಮಾಡಿದ್ದು ತಾನು ಜನರನ್ನು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ಜನ ತನ್ನನ್ನು ಪ್ರೀತಿಸಿದ್ದಾರೆ. ಎಂದರು. ನಂತರ ಚೌಟರ ಕುರಿತಾದ ಸಾಕ್ಷ್ಯಚಿತ್ರ ಹಾಗೂ ರಂಗಚೇತನ ಸಂಸ್ಕೃತಿ ಕೇಂದ್ರ ಟ್ರಸ್ಟಿನ ತಂಡದವರಿಂದ 'ಮಿತ್ತಬೈಲ್ ಯಮುನಕ್ಕೆ' ನಾಟಕ ಪ್ರದರ್ಶನಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

