ದಕ್ಷಿಣ ಕನ್ನಡ

ಕುರುಂಜಿ ಪ್ರತಿಮೆ ಪ್ರತಿಷ್ಠಾಪನೆ ಪೂರ್ವಭಾವಿ ಸಭೆ

Published On :

ಸುಳ್ಯ: ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಸ್ಥಾಪಕಾಧ್ಯಕ್ಷರಾಗಿದ್ದ ದಿ. ಕುರುಂಜಿ ವೆಂಕಟ್ರಮಣ ಗೌಡರ ನೆನಪಿಗಾಗಿ ಪಟ್ಟಣದಲ್ಲಿ ಪ್ರತಿಮೆ ಪ್ರತಿಷ್ಠಾಪಿಸುವ ಸಂಬಂಧ ಶಾಸಕ ಎಸ್. ಅಂಗಾರ ನೇತೃತ್ವದಲ್ಲಿ ಗುರುವಾರ ಕೆವಿಜಿ ಪುರಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಪ್ರತಿಮೆ ಎಲ್ಲಿ ಸ್ಥಾಪಿಸುವುದು, ಯಾವುದರಿಂದ ನಿರ್ಮಿಸುವುದು, ಸಂಪನ್ಮೂಲ ಕ್ರೋಢೀಕರಣ ಹೇಗೆ ಹಾಗೂ ಇದಕ್ಕೆ ಸಮಿತಿ ರಚನೆ ಮಾಡುವ ಬಗ್ಗೆ ಚರ್ಚೆ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಮಾತನಾಡಿ, ಪಠ್ಯದಲ್ಲಿ ಕುರುಂಜಿ ಸಾಧನೆಗಳ ಬಗ್ಗೆ ಸೇರ್ಪಡೆ ಮಾಡುವುದು ಹಾಗೂ ಸುಳ್ಯ ಪಟ್ಟಣ ಪಂಚಾಯಿತಿಗೆ ಕೆವಿಜಿ ಪಟ್ಟಣ ಪಂಚಾಯಿತಿ ಎಂದು ನಾಮಕರಣ ಮಾಡುವ ಬಗ್ಗೆ ಸರ್ಕಾರವನ್ನು ಆಗ್ರಹಿಸಲು ನಿರ್ಣಯ ಕೈಗೊಳ್ಳಬೇಕೆಂದರು. ಕೃಷ್ಣಪ್ರಸಾದ್ ಮಡ್ತಿಲ ಮಾತನಾಡಿ ಹೆದ್ದಾರಿ ಬದಿಯಲ್ಲಿಯೇ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂದರೆ, ಶಾಸ್ತ್ರಿ ವೃತ್ತದ ಬಳಿ ನಿರ್ಮಿಸಬೇಕು ಎಂದು ರಾಕೇಶ್ ಕುಂಟಿಕಾನ ಹೇಳಿದರು. ಪುತ್ತಳಿಯೊಂದಿಗೆ ಉದ್ಯಾನವನ್ನು ನಿರ್ಮಿಸಬೇಕೆಂದು ರೋಟರಿ ಕ್ಲಬ್ ಅಧ್ಯಕ್ಷ ಶ್ರೀನಿವಾಸ್ ಹೇಳಿದರು. ಹೀಗೆ ಒಬ್ಬೊಬ್ಬರು ಒಂದು ಸ್ಥಳದಲ್ಲಿ ಪ್ರತಿಮೆ ನಿರ್ಮಿಸಬೇಕು ಎಂದು ಸಲಹೆ ಸೂಚನೆಗಳನ್ನು ನೀಡಿದರು. ಶಾಸಕರ ಅಧ್ಯಕ್ಷತೆಯಲ್ಲಿ ಕುರುಂಜಿ ಹುಟ್ಟುಹಬ್ಬ ಆಚರಣಾ ಸಮಿತಿಯವರನ್ನು ಜತೆಗೆ ಸೇರಿಸಿ ಸಮಿತಿ ರಚಿಸಬೇಕು ಎಂದು ಎಂ.ಬಿ. ಸದಾಶಿವ ಹೇಳಿದರು.  ಕುರುಂಜಿ ಪ್ರತಿಮೆ ಕೆಳಗೆ ಅವರ ಆದರ್ಶಗಳನ್ನು ಕೆತ್ತಬೇಕು ಎಂದು ಅನುರಾಧಾ ಕುರುಂಜಿ ಹೇಳಿದರು. ಎನ್.ಎ. ಜ್ಞಾನೇಶ್, ಶಿವಾನಂದ ಕುಕ್ಕುಂಬಳ್ಳ ಮಾತನಾಡಿದರು.
ಸಮಿತಿ ರಚನೆ: ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಗೌರವಾಧ್ಯಕ್ಷತೆಯಲ್ಲಿ ಶಾಸಕ ಎಸ್. ಅಂಗಾರ ಅಧ್ಯಕ್ಷತೆ, ನಿತ್ಯಾನಂದ ಮುಂಡೋಡಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಪ್ರತಿ ಗ್ರಾಮದಿಂದ ಮುಖ್ಯಸ್ಥರನ್ನು ಸದಸ್ಯರನ್ನಾಗಿ ಸೇರಿಸಿ ಸಮಿತಿ ರಚಿಸಲು  ನಿರ್ಣಯಿಸಲಾಯಿತು. ಶಾಸಕ ಎಸ್.ಅಂಗಾರ ಮಾತನಾಡಿ, ಕುರುಂಜಿ ಅಭಿಮಾನಿಗಳ ಕೊಡುಗೆಯಿಂದ ಕಂಚಿನ ಪ್ರತಿಮೆ ನಿರ್ಮಿಸಲಾಗುವುದು. ಅದನ್ನು ಎಲ್ಲಿ ಪ್ರತಿಷ್ಠಾಪಿಸಬೇಕೆಂದು ಸಮಿತಿಅಂತಿಮಗೊಳಿಸುತ್ತಾರೆ ಎಂದರು. ನ. ಸೀತಾರಾಮ ಅವರನ್ನು ಸಮಿತಿ ಸಂಚಾಲಕರನ್ನಾಗಿ ನೇಮಿಸಿರುವುದಾಗಿ ಅವರು ಪ್ರಕಟಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ, ತಾಪಂ ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.