ದಕ್ಷಿಣ ಕನ್ನಡ

ಕ್ಯಾನ್ಸರ್ ಬಂದಾಗ ಬಿಪಿಎಲ್; ಚಿಕಿತ್ಸೆಗೆ ಹೋದ ಬಳಿಕ ಎಪಿಎಲ್!

Published On :

ಮಂಗಳೂರು: ಬಡತನ ರೇಖೆಗಿಂತ ಕೆಳಗೆ ಇದ್ದವರು ಗಂಭೀರ ಕಾಯಿಲೆ ಬಂದರೆ ಅವರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಅದರಂತೆ ಕುಂದಾಪುರ ಬನ್ನಾಡಿಯ ಜಯರಾಮ ಪೂಜಾರಿ ಪತ್ನಿ ವಾರಿಜ ಕ್ಯಾನ್ಸರ್ ಪೀಡಿತರಾದಾಗ ಮಂಗಳೂರು ನಗರದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ನೀಡಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಒಂದು ವಾರದ ಬಳಿಕ ಆಸ್ಪತ್ರೆಯವರು ಕ್ರಾಸ್ ಚೆಕ್ ಮಾಡಿದಾಗ ಅವರಿಗೆ ಎಪಿಎಲ್ ಕಾರ್ಡ್ ನೀಡಲಾಗಿತ್ತು !
 ಆಸ್ಪತ್ರೆಯವರಿಗೆ ಈ ಬಡವರಿಂದ ಹಣ ವಸೂಲು ಅಸಾಧ್ಯ ಎಂದು ಗೊತ್ತಾಗಿ ಚಿಕಿತ್ಸೆ ಅರ್ಧದಲ್ಲಿರುವಂತೆ ರೋಗಿಗೆ ಜಾಗ ಖಾಲಿ ಮಾಡುವಂತೆ ಸೂಚಿಸಿದರು.  
 ಆಗ ಅವರಿಗೆ ಸಹಾಯಕ್ಕೆ ಬಂದವರು ಬಿಜೆಪಿ ಮುಖಂಡ ಶ್ರೀಕರ ಪ್ರಭು. ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಸಂಪರ್ಕಿಸಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಖಾದರ್, ಪಡಿತರ ಚೀಟಿಯಲ್ಲಿನ ಸಮಸ್ಯೆ ತಕ್ಷಣ ಬಗೆಹರಿಸುವಂತೆ ತಹಸೀಲ್ದಾರ್‌ಗೆ ಟಿಪ್ಪಣಿ ಬರೆದು ಕಳುಹಿಸಿದರು. ಸ್ವಲ್ಪ ದಿನಗಳ ಬಳಿಕ ಮತ್ತೆ ಬಿಪಿಎಲ್ ಕಾರ್ಡ್ ನೀಡಿದರು ಎಂದು ಶ್ರೀಕರ ಪ್ರಭು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
 ಆರೋಗ್ಯ ಸಚಿವರ ಸ್ಪಂದಿನಕ್ಕೆ ವಂದನೆಗಳು. ಆದರೆ ಎಲ್ಲ ಬಡವರಿಗೂ ಶಿಫಾರಸು ಹುಡುಕಿಕೊಂಡು ಬರಲು ಸಾಧ್ಯವಿಲ್ಲ. ಸರ್ಕಾರ ಯಾವುದೇ ಮುನ್ಸೂಚನೆ ಇಲ್ಲದೆ ಕಾರ್ಡ್ ಬದಲಾಯಿಸುತ್ತದೆ. ಬದಲಾಯಿಸಿದ ಬಳಿಕವೂ ಮಾಹಿತಿ ನೀಡುವುದಿಲ್ಲ. ಆದ್ದರಿಂದ ಬಡವರಿಗೆ ಇಂಥ ಸಂಕಷ್ಟ ಸಂದರ್ಭದಲ್ಲಿ ತೀವ್ರ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಸರ್ಕಾರ ತೀವ್ರ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಯರಾಮ ಪೂಜಾರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.