ಇಬ್ಬರು ಮಕ್ಕಳ ಸಹಿತ ನಾಲ್ವರ ಕೊಲೆ ಆರೋಪ ಸಾಬೀತು
ಪುತ್ತೂರು: ಅತ್ತೆ, ನಾದಿನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರನ್ನು ಧಾರುಣವಾಗಿ ಕೊಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಪುತ್ತೂರು ತಾಲೂಕಿನ ಪಾಣಾಜೆ ಅರ್ಧಮೂಲೆ ನಿವಾಸಿ ರಮೇಶ ನಾಯ್ಕ ಎಂಬಾತನನ್ನು ಪುತ್ತೂರು 5ನೇ ಹೆಚ್ಚುವರಿ ಸಷೆನ್ಸ್ ನ್ಯಾಯಾಲಯವು ಮಂಗಳವಾರ ಅಪರಾಧಿ ಎಂದು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ. ಸೊಲ್ಲಾಪುರದಲ್ಲಿ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದು, ಈತನ ಪತ್ನಿ ಮಂಗಳೂರಿನಲ್ಲಿ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದರು. ತನ್ನ ನಾದಿನಿ ಪ್ರೀತಿಸಿ ಮದುವೆಯಾಗುವುದನ್ನು ವಿರೋಧಿಸಿದ್ದ ರಮೇಶ್ ನಾಯ್ಕ 2010ರ ಜೂನ್ 1ರಂದು ತುಮಕೂರಿನಲ್ಲಿ ಭವಿಷ್ಯನಿಧಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ನಾದಿನಿ ಸವಿತಾ ಮತ್ತು ಆಕೆಯೊಂದಿಗೆ ವಾಸವಾಗಿದ್ದ ಅತ್ತೆ ಸರಸ್ವತಿ ಎಂಬವರನ್ನು ಕೊಲೆ ನಡೆಸಿದ್ದ. ಅಷ್ಟಕ್ಕೂ ತೃಪ್ತನಾಗದ ಈತ ಮಂಗಳೂರಿಗೆ ಆಗಮಿಸಿ ತನ್ನ ಮಕ್ಕಳಾದ ಭುವನ್ರಾಜ್ (10) ಮತ್ತು ಕೃತಿಕಾ (4) ಅವರನ್ನು ಕಾರಿನಲ್ಲಿ ಪುತ್ತೂರಿಗೆ ಕರೆತಂದು ಪಾಣಾಜೆಯಲ್ಲಿ ಕೆರೆಯ ನೀರಿನಲ್ಲಿ ಮಕ್ಕಳನ್ನು ಮುಳುಗಿಸಿ ಕೊಲೆ ಮಾಡಿದ್ದ. ಆ ಬಳಿಕ ಪುತ್ತೂರಿನ ವಸತಿಗೃಹದಲ್ಲಿ ತಂಗಿದ್ದ ಈತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಇದೀಗ ನ್ಯಾಯಾಲಯವು ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ಪ್ರಕಟಿಸಲಿದೆ.
ಇ- ಸ್ಟ್ಯಾಂಪಿಂಗ್ ಸೌಲಭ್ಯ ಉದ್ಘಾಟನೆ
ಬಂಟ್ವಾಳ: ಬಂಟ್ವಾಳ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ನಲ್ಲಿ ಇತ್ತೀಚೆಗೆ ಪ್ರಾರಂಭಗೊಂಡಿರುವ ಇ- ಸ್ಟ್ಯಾಂಪಿಂಗ್ ಸೌಲಭ್ಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂಟ್ವಾಳ ತಹಸೀಲ್ದಾರ್ ಮಲ್ಲೇಸ್ವಾಮಿ ಭೇಟಿ ನೀಡಿದರು. ಗ್ರಾಹಕರಿಗೆ ಠೆಸ್ಸೆ ಪೇಪರ್ ನೀಡಿದರು. ಬಂಟ್ವಾಳ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ವ್ಯವಸ್ಥಾಪಕ ಅಬ್ದುಲ್ ಸತ್ತಾರ್ ಇದ್ದರು.
ನೇಣು ಬಿಗಿದು ಆತ್ಮಹತ್ಯೆ
ಉಪ್ಪಿನಂಗಡಿ: ಆಲಂಗಾರು ಗ್ರಾಮದ ಕಲ್ಲೇರಿ ಮನೆ ನಿವಾಸಿ ಮೋನಪ್ಪ ಪೂಜಾರಿ (74) ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಸೋಮವಾರ ಸಂಭವಿಸಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಜಿಗುಪ್ಸೆ ಹೊಂದಿ ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜೀವ ಬೆದರಿಕೆ; ದೂರು ದಾಖಲು
ಸುಬ್ರಹ್ಮಣ್ಯ: ಚಾರ್ಮತ ಕೋಡ್ತುಗುಳಿ ಭಾವಾನಿ ಎಂವರಿಗೆ ಸ್ಥಳೀಯ ಲೋಕಯ್ಯ ಗೌಡರ ಮಗ ಯಶೋಧರ ಸೋಮವಾರ ಬೆದರಿಕೆಯೊಡ್ಡಿದ ಬಗ್ಗೆ ಇತ್ತೀಚೆಗೆ ಅಹಜವಾಗಿ ಸಾವನ್ನಪ್ಪಿದ ಮಗುವಿನ ತಾಯಿ ಭವಾನಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೋಮವಾರ ಮಧ್ಯಾಹ್ನ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವಾಚ್ಯ ಶಬ್ಧಗಳಿಂದ ಬೈದು ಬೆದರಿಸಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಯಿ ಕಚ್ಚಿ ಗಂಭೀರ ಗಾಯ
ವಿಟ್ಲ: ಬೀದಿ ನಾಯಿ ಕಚ್ಚಿ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ಪೆರುವಾಯಿ ಗ್ರಾಮದಲ್ಲಿ ನಡೆದಿದೆ. ಪೆರುವಾಯಿಯ ಮುಕ್ಕುಡಾಪು ನಿವಾಸಿ ಐತ್ತ ಕೊರಗ (67) ಗಾಯಾಳು. ಅವರು ಸೋಮವಾರ ರಸ್ತೆಯಲ್ಲಿ ಸಾಗುತ್ತಿದ್ದಾಗ ಈ ಘಟನೆ ನಡೆದಿದ್ದು ತಕ್ಷಣ ಅವರನ್ನು 108 ಆರೋಗ್ಯ ರಕ್ಷಾ ಕವಚದಲ್ಲಿ ವಿಟ್ಲ ಸಮುದಾಯ ಆಸ್ಪತ್ರೆಗೆ ಕರೆತರಲಾಗಿತ್ತು. ಬಲಗಾಲಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಾಯಿಯ ಮಾಲೀಕ ವಿರುದ್ಧ ಐತ್ತ ಕೊರಗ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ಅಪಘಾತ: ಬೈಕ್ ಸವಾರ ಗಂಭೀರ
ಮೂಲ್ಕಿ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಪಕ್ಷಿಕೆರೆಯ ಪಂಜ ಕೊಯಿಕುಡೆ ಬಳಿ ಕಿನ್ನಿಗೋಳಿ ಕಡೆಗೆ ಅತೀ ವೇಗದಿಂದ ಬರುತ್ತಿದ್ದ ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಬೈಕ್ ಸವಾರ ಮೂಲ್ಕಿಯ ಕಿಲ್ಪಾಡಿ ನಿವಾಸಿ ಪದ್ಮಶೇಖರ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

