ಲಾಡ್ ರಾಜಿನಾಮೆ ಪಕ್ಷದ ಹೋರಾಟಕ್ಕೆ, ಸಾರ್ವಜನಿಕರ ಒತ್ತಡಕ್ಕೆ ಸಂದ ಜಯ: ಸದಾನಂದ ಗೌಡ
ಸುಬ್ರಹ್ಮಣ್ಯ: ಸಚಿವ ಸಂತೋಷ್ ಲಾಡ್ ಯಾವಾಗಲೋ ರಾಜಿನಾಮೆ ಕೊಡಬೇಕಾಗಿತ್ತು. ಈಗ ಸದನದಲ್ಲಿ ನಮ್ಮನ್ನು ಅವರಿಗೆ ಎದುರಿಸಲು ಆಗುವುದಿಲ್ಲ, ಸದನದ ಕಲಾಪವನ್ನು ಕಂಡಿತಾವಾಗಿಯೂ ನಡೆಸಲು ಬಿಡುವುದಿಲ್ಲ. ಕಳಂಕಿತ ವ್ಯಕ್ತಿಯನ್ನು ಸಂಪುಟದಿಂದ ಕೈ ಬಿಡದಿದ್ದರೆ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಆಡಳಿತಕ್ಕೆ ರವಾನಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಅವರು ಸುಬ್ರಹ್ಮಣ್ಯಕ್ಕೆ ಇತ್ತೀಚೆಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಮೂರು ತಿಂಗಳಿಂದ ಲಾಡ್ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ಸಾರ್ವಜನಿಕ ಒತ್ತಡ ಮತ್ತು ಬಿಜೆಪಿಯ ಹೋರಾಟಕ್ಕೆ ಆಡಳಿತಪಕ್ಷ ಮಣಿದಿದೆ. ಲಾಡ್ ರಾಜಿನಾಮೆ ಪಕ್ಷದ ಹೋರಾಟ ಮತ್ತು ಸಾರ್ವಜನಿಕರ ಒತ್ತಡಕ್ಕೆ ಸಂದ ಜಯ ಎಂದು ಹೇಳಿದರು. ನಮ್ಮ ರಾಜ್ಯದಲ್ಲೇ ಉದ್ದಿಮೆಯನ್ನು ಸ್ಥಾಪಿಸುವುದರ ಮೂಲಕ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸಬೇಕು ಎಂಬ ನಿರ್ಧಾರ ತಳೆದಿದ್ದೆವು. ಈ ರೀತಿಯ ಆರೋಪಗಳು ಬಂದಾಗ ನಮ್ಮ ಮುಖ್ಯಮಂತ್ರಿಯೇ ರಾಜಿನಾಮೆ ನೀಡುವಂತೆ ಮಾಡುವ ದಿಟ್ಟ ನಿರ್ಧಾರವನ್ನು ನಮ್ಮ ಪಕ್ಷ ತೆಗೆದುಕೊಂಡಿದೆ ಎಂದು ತಿಳಿಸಿದರು.
ಪಾದಯಾತ್ರೆ ನಾಟಕ: ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಕಾಂಗ್ರೆಸ್ನವರು ಬಳ್ಳಾರಿ ತನಕ ಗಣಿಗಾರಿಕೆ ನಿಲ್ಲಿಸಲು ಪಾದಯಾತ್ರೆಯ ನಾಟಕವಾಡಿದರು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ 12 ಜನ ಸಿ ಕೆಟಗರಿಯ ಗಣಿ ಮಾಲೀಕರ ಜೊತೆ ಚೀನಾಕ್ಕೆ ಹೋಗಿದ್ದಾರೆ. ಸಾರ್ವಜನಿಕವಾಗಿ ಸಮಾಜ ಪರಿವರ್ತನ ಸಂಘಟನೆಯ ಹಿರೇಮಠ್ ಅಕ್ರಮ ಗಣಿಗಾರಿಕೆ ಬಗ್ಗೆ ದಾಖಲೆ ನೀಡಿದಾಗ ಇದು ಅಸಾಧ್ಯ ಎಂದು ಹೇಳಿರುವುದು ಆಡಳಿತದ ಪಕ್ಷದ ನೈಜ ಚಿತ್ರಣವನ್ನು ಬಿಚ್ಚಿಡುತ್ತದೆ ಎಂದು ಹೇಳಿದರು.
ಶಿರಾಡಿ ಘಾಟ್ ರಸ್ತೆಯು ರಾಜ್ಯದ ರಾಜಧಾನಿಯಿಂದ ಬಂದರು ನಗರಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ರಸ್ತೆ. ಈ ರಸ್ತೆಗಾಗಿ ಕಳೆದ 6 ವರ್ಷಗಳಿಂದ ನಿರಂತರವಾಗಿ ಹಂತಗಳಲ್ಲಿ ಎಸ್ಟಿಮೇಟ್ಗಳನ್ನು ಕಳುಹಿಸಿದ್ದೇವೆ. ಮಾತು ಕತೆ ನಡೆಸಿದ್ದೇವೆ. ಆದರೆ, ಕೇಂದ್ರದ ಯುಪಿಎ ಸರ್ಕಾರ ಕಳೆದ 6 ವರ್ಷಗಳಿಂದ ಯಾವುದೇ ರೀತಿಯ ಅನುದಾನ ಬಿಡುಗಡೆಗೊಳಿಸಲಿಲ್ಲ ಎಂದರು.
ಕಸ್ತೂರಿ ರಂಗನ್ ವರದಿಗೆ ಸ್ವಾಗತ: ಕಸ್ತೂರಿ ರಂಗನ್ ವರದಿಯನ್ನು ನಾನು ಸ್ವಾಗತಿಸುತ್ತೇನೆ. ಯಾಕೆಂದರೆ ಪರಿಸರ ಉಳಿಯಬೇಕು. ನೇತ್ರಾವತಿ ನದಿ ತಿರುವು ಯೋಜನೆ ಮೂಲಕ ಬಾರಿ ಗೊಂದಲಗಳು ಸೃಷ್ಟಿಯಾಗಿವೆ. ಕುಡಿಯುವ ನೀರಿಗೋಸ್ಕರ 24 ಟಿಎಂಸಿ ನೀರಿಗಾಗಿ ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಗುರುತ್ವಾಕರ್ಷಣ ಮೂಲಕ ಯಾವುದೇ ಹಾನಿ ಇಲ್ಲದೆ ಮಾಡುವಂತದ್ದು, ಎತ್ತಿನ ಹೊಳೆ ಯೋಜನೆ. 24 ಟಿಎಂಸಿ ಮಳೆ ನೀರನ್ನು ಉಪಯೋಗಿಸಿ ಇತರೆಡೆಗೆ ಕುಡಿಯುವ ನೀರಿನ ಯೋಜನೆ.ಕೇವಲ ಮಳೆಗಾಲದ 100 ದಿನಗಳಲ್ಲಿ ಮಾತ್ರ ವಿಶೇಷವಾಗಿ ಬೀಳುವ ನೀರನ್ನು ಶೇಖರಣೆ ಮಾಡಿ ಇತರೆಡೆಗೆ ತೆಗೆದುಕೊಂಡು ಹೋಗುವುದು ಮಾತ್ರ ನಮ್ಮ ಉದ್ದೇಶ ಎಂದು ಹೇಳಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್ ಮಡ್ತಿಲ, ಸದಸ್ಯರಾದ ಚಂದ್ರಶೇಖರ ತಳೂರು, ಸುಬ್ರಹ್ಮಣ್ಯ ಭಟ್ ಮಾನಾಡು, ಕಿಶೋರ್ ಶಿರಾಡಿ, ಮೋನಪ್ಪ ಮಾನಾಡು, ಶಿಷ್ಟಾಚಾರ ಅಧಿಕಾರಿ ವೆಂಕಟ್ರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

