ದಕ್ಷಿಣ ಕನ್ನಡ

ಇನ್ನೊಂದು ಅಕ್ರಮ ಗಣಿಗಾರಿಕೆ ಬಯಲು

Published On :

ಮಂಗಳೂರು: ಮೂಡುಬಿದಿರೆ ಪಾಲಡ್ಕ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಡಂದಲೆ ಮುರ್ತುಲಗುಡ್ಡೆಯಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ, ಪುರಾತನ ಕೆರೆಯನ್ನು ಮುಚ್ಚಿ ಹಾಕಿ ಎಕರೆಗಟ್ಟಲೆ ಜಾಗದಲ್ಲಿ ಜಲ್ಲಿ ಕ್ರಶರ್ ನಡೆಸಿಕೊಂಡಿದ್ದ 'ಪೋಬ್ಸ್ ರಾಕ್‌ಮೈನ್ಸ್‌' ಕಂಪನಿಯ ಅಕ್ರಮವನ್ನು ಕೃಷಿ ಅಧಿಕಾರಿಗಳು ಬಯಲಿಗೆಳೆದಿದ್ದಾರೆ.
ಕಳೆದ 20 ವರ್ಷಗಳಿಂದ ಮುರ್ತುಲಗುಡ್ಡೆ ಪ್ರದೇಶದಲ್ಲಿ 1.25 ಎಕರೆ ಜಾಗದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಇದರಿಂದ ಉತ್ಪತ್ತಿಯಾದ ಟನ್‌ಗಟ್ಟಲೆ ಜಲ್ಲಿಹುಡಿಗಳ ಶೇಖರಣೆ ಕೃಷಿ ನೀರಿಗೆ ಸೇರುತ್ತಿತ್ತು, ಅಲ್ಲದೆ ಸರ್ಕಾರಿ ಭೂಮಿಯ ಮರಗಳು ಸತ್ತುಹೋಗುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ತಹಸೀಲ್ದಾರ್, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಕೃಷಿ ಇಲಾಖೆಗೆ ದೂರು ನೀಡಿದ್ದರು.
ಈ ಪ್ರಕಾರ ಬುಧವಾರ ಸ್ಥಳ ಪರಿಶೀಲನೆ ನಡೆಸಿದ ಸಹಾಯಕ ಕೃಷಿ ಅಧಿಕಾರಿಯವರು ಜಲ್ಲಿ ಹುಡಿ ಶೇಖರಣೆ, ಹಿಟಾಚಿಯಿಂದ ಗುಂಡಿ ತೋಡಿದ ಪರಿಣಾಮ ಕೆರೆಯಂತಾದ ಸ್ಥಳವನ್ನು ಪತ್ತೆಹಚ್ಚಿದರು. ಕ್ರಶರ್‌ನವರು ಜಲ್ಲಿ ಹುಡಿಯನ್ನು ಕೆರೆಯ ಮೇಲೆ ಹಾಕಿದ್ದರ ಪರಿಣಾಮ ಕೆರೆ ನಾಶವಾಗಲು ಕಾರಣ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಗ್ರಾಮಸ್ಥರಿಗೆ ಹೇಳಿದರು.
ಕೇಮಾರು ಸಾಧನಾಶ್ರಮದ ಈಶವಿಠಲದಾಸ ಸ್ವಾಮೀಜಿ ಮಾತನಾಡಿ, ಪೋಬ್ಸ್ ರಾಕ್‌ಮೈನ್ಸ್ ಕಂಪನಿಯು ಪುರಾತನ ಕೆರೆಯನ್ನು ನಾಶ ಮಾಡಿದರ ಪರಿಣಾಮ ನೀರಿನ ಒರತೆ ಸ್ಥಗಿತಗೊಂಡಿದೆ. ಈ ಮೂಲಕ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದ್ದಲ್ಲದೆ ಅವ್ಯವಹಾರವನ್ನು ಮಾಡಿದೆ. ಆದ್ದರಿಂದ ಕಂಪೆನಿ ವಿರುದ್ಧ ತನಿಖೆ ನಡೆಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದರು.
ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ತೆಗೆಯುತ್ತಿದ್ದ ಜಲ್ಲಿ ಕಾಮಗಾರಿಯನ್ನು ಕಂಪನಿಯು ಸೋಮವಾರ ಸ್ಥಗಿತಗೊಳಿಸಿತ್ತು. ಆದರೆ ಮಂಗಳವಾರ ಟಿಪ್ಪರ್‌ಗಳಲ್ಲಿ ಮರಳು, ಜಲ್ಲಿಯನ್ನು ಸಾಗಿಸುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಲಾರಿಯನ್ನು ತಡೆದು ಎಚ್ಚರಿಕೆ ನೀಡಿರುತ್ತಾರೆ.
ಗ್ರಾಮಸ್ಥರಾದ ಸಂತೋಷ್ ಶೆಟ್ಟಿ, ಚಂದ್ರಶೇಖರ್, ಲೀಲಾಧರ, ಸ್ಕಂದಪ್ರಸಾದ್, ಪೌಲ್ ಡಿಸೋಜ, ಹರೀಶ್ ಅಮೀನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.