ಕೊಚ್ಚಿ ಹೋಗುತ್ತಿದ್ದ ಸೋದರಿಯರ ರಕ್ಷಣೆ
ಮಂಗಳೂರು: ಪಣಂಬೂರು ಕಡಲಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಸಹೋದರಿಯರನ್ನು ಜೀವರಕ್ಷಕ ದಳದವರು ರಕ್ಷಿಸಿದ್ದಾರೆ.
ಪಡುಕೊಣಾಜೆ ಸಂಜೀವ ನಾಯ್ಕ ಅವರ ಮಕ್ಕಳಾದ ಸುಗಂಧ ಬಸವರಾಜ್(22), ಪ್ರತಿಮಾ ನಾಯಕ್(18), ರೇವತಿ ಸುನಿಲ್(25) ಸೋಮವಾರ ಕಡಲಲ್ಲಿ ಸ್ನಾನಕ್ಕೆ ಇಳಿದಿದ್ದರು. ಬಲವಾದ ಅಲೆಗೆ ಕೊಚ್ಚಿ ಹೋಗುತ್ತಿದ್ದ ವೇಳೆ ಸ್ಥಳದಲ್ಲಿದ್ದ ಜೀವರಕ್ಷಕ ದಳವರು ರಕ್ಷಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಗುಂಪು ಘರ್ಷಣೆ: 8 ಜನರಿಗೆ ಗಾಯ
ರಾಂುಬಾಗ: ತಾಲೂಕಿನ ಮೇಖಳಿ ಗ್ರಾಮದ 23 ಎಕರೆ ಗಾಂುರಾಣ ಜಮೀನಿನ ಸಲುವಾಗಿ ನಡೆದ ಗುಂಪು ಘರ್ಷಣೆಯಲ್ಲಿ ಎಂಟು ಜನರು ತೀವ್ರ ಗಾಂುಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ. ಗಾಯಗೊಂಡವರೆಲ್ಲರೂ ರಾಂುಬಾಗದ ಸರ್ಕಾರಿ ಆಸ್ಪತ್ರೆಂುಲ್ಲಿ ಚಿಕಿತ್ಸೆ ಪಡೆಂುತ್ತಿದ್ದಾರೆ.
1991ರಲ್ಲಿ ಒಂದು ಜನಾಂಗದ 40 ಜನರಿಗೆ ಮನೆ ಕಟ್ಟಿಕೊಳ್ಳಲು 30್ಢ40 ಜಾಗವನ್ನು ತಹಸೀಲ್ದಾರ್ ಮಂಜೂರು ಮಾಡಿದ್ದರು. ಈಗ ಆ ಜನಾಂಗದವರು ಮನೆ ಕಟ್ಟಿಕೊಳ್ಳಲು ಹೋದಾಗ, ಇದು ದೇವಸ್ಥಾನದ ಜಾಗವಿದ್ದು, ಇಲ್ಲಿ ಂಾರೂ ಮನೆ ಕಟ್ಟಬಾರದು ಎಂದು ಮತ್ತೊಂದು ಜನಾಂಗದವರು ತಕರಾರು ಮಾಡಿದ್ದಾರೆ. ಈ ವಿಷಯವಾಗಿ ಎರಡೂ ಸಮಾಜದವರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿ ಅದು ವಿಕೋಪಕ್ಕೆ ಹೋಗಿ 8 ಜನ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಟೆಂಪೊಟ್ರ್ಯಾಕ್ಸ್ಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಸುಮಾರು ಎರಡು ಲಕ್ಷ ರುಪಾಯಿ ಹಾನಿಯಾಗಿದೆ. ಕಲ್ಲು ತೂರಿ ಆಟೋಗಳ ಗಾಜು ಹಾಗೂ ಮನೆಗಳ ಮೇಲಿನ ಹೆಂಚು ಒಡೆಯಲಾಗಿದೆ. ಎಸ್ಪಿ ಚಂದ್ರಗುಪ್ತ, ಡಿವೈಎಸ್ಪಿ ಎಸ್.ಆರ್. ಪಾಟೀಲ ಮೇಖಳಿ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದರು.
ನಿಮಿಷಾಂಭ ದೇಗುಲದಲ್ಲಿ ಧಾನ್ಯ ಕಳವು ಯತ್ನ
ಶ್ರೀರಂಗಪಟ್ಟಣ: ಇಲ್ಲಿನ ಪ್ರಸಿದ್ಧ ಗಂಜಾಂ ನಿಮಿಷಾಂಭ ದೇವಾಲಯದಲ್ಲಿ ಅಡುಗೆ ಭಟ್ಟರೇ ಧಾನ್ಯ ಗುಳುಂ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ದೇವಾಲಯದಲ್ಲಿ ಪ್ರಸಾದದ ಅಡುಗೆ ಮಾಡುತ್ತಿದ್ದ ಅಡುಗೆ ಭಟ್ಟರಾದ ನಾರಾಯಣ ಎಂಬವರು ಧಾನ್ಯ ಕದ್ದು ಸಾಗಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ.
ಕಳೆದ ಶುಕ್ರವಾರ ರಾತ್ರಿ ಮೆಣಸಿನ ಕಾಯಿ ಮತ್ತು ಕೋಸಂಬರಿ ಬೀಜ ಸೇರಿದಂತೆ ಇತರ ಪದಾರ್ಥಗಳನ್ನು ಬಾಣಲೆಯಲ್ಲಿ ಹುರಿದು ಅದನ್ನು ಪೌಡರ್ ಮಾಡಿಸಲು ಮಿಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿ ಅಡುಗೆ ಭಟ್ಟ ನಾರಾಯಣ ಆಟೋವನ್ನು ಬಾಡಿಗೆಗೆ ಪಡೆದಿದ್ದಾರೆ.
ನಾರಾಯಣ ಅವರ ಚಲನ ವಲನದಿಂದ ಅನುಮಾನಗೊಂಡ ಆಟೋ ಚಾಲಕ ತಕ್ಷಣ ತನ್ನ ಸ್ನೇಹಿತರನ್ನು ಕರೆಸಿ ಪರಿಶೀಲಿಸಿದಾಗ ಧಾನ್ಯದ ಮೂಟೆಗಳ ಕಳ್ಳಸಾಗಾಣಿಕೆ ಪ್ರಕರಣವು ಬಯಲಾಗಿದೆ.
ಈ ಬಗ್ಗೆ ಪ್ರಶ್ನಿಸಿದಾಗ ಉಗ್ರಾಣ ನೋಡಿಕೊಳ್ಳುವ ರಾಜು ಮತ್ತು ಸಮಿತಿ ಅಧ್ಯಕ್ಷರ ಮನೆಗೆ ಈ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿದ್ದುದ್ದಾಗಿ ಹೇಳಿದ್ದಾರೆ.
ಇದನ್ನು ಖಂಡಿಸಿ ದೇವಾಲಯದ ಸಮಿತಿ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ದೇವಾಲಯದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

