'ಮಕ್ಕಳ ಅಪೌಷ್ಟಿಕತೆಗೆ ನಾವೇ ಕಾರಣ'
ಮಂಗಳೂರು: 'ನಾವು ನೀಡುತ್ತಿರುವ ಆಧುನಿಕ ಆಹಾರದಿಂದ ಮಕ್ಕಳಲ್ಲಿ ಪೌಷ್ಟಿಕತೆ ಕೊರತೆ ಉಂಟಾಗಿದೆ' ಎಂದು ಇರಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತುಳಸಿ ಹೇಳಿದರು.
ಜನಶಿಕ್ಷಣ ಟ್ರಸ್ಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ ಮತ್ತು ಸಂತ ಅಲೋಶಿಯಸ್ ಸಮಾಜ ಕಾರ್ಯ ವಿದ್ಯಾರ್ಥಿಗಳ ವತಿಯಿಂದ ಇರಾ ಗ್ರಾಮ ಪಂಚಾಯ್ತಿನಲ್ಲಿ 'ಅಪೌಷ್ಠಿಕತೆ ಮಾಹಿತಿ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಡಾ. ಅಮಿತ್ ಕುಮಾರ್ ಮಾಹಿತಿ ನೀಡಿದರು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಕೃಷ್ಣರಾಜ ರೈ, ಮಾಜಿ ಅಧ್ಯಕ್ಷ ಸುಧಾಕರ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ತಿಲಕ್ ಕುಮಾರ್, ಗ್ರಾಮ ಪಂಚಾಯ್ತಿ ಸದಸ್ಯ ವಿಮಲ, ಜನಶಿಕ್ಷಣ ಟ್ರಸ್ಟ್ ಸಂಯೋಜಕಿ ರಾಜೇಶ್ವರಿ ಇದ್ದರು.
ಪ್ರಮೋದ್ ಕುಮಾರ್ ಆಯ್ಕೆ
ಬಂಟ್ವಾಳ: ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಬಂಟ್ವಾಳ ಘಟಕದ ಗೌರವಾಧ್ಯಕ್ಷರಾಗಿ ಪ್ರಮೋದ್ ಕುಮಾರ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ವಿಶ್ವನಾಥ, ಉಪಾಧ್ಯಕ್ಷರಾಗಿ ರಾಜೇಶ್ ಕಕ್ಯಪದವು, ಜಗದೀಶ್ ಶೆಟ್ಟಿ ಮೂಡುಪಡುಕೋಡಿ, ಗಿರೀಶ್ ಎಂ.ಎಸ್. ಮೇರಮಜಲು, ಪ್ರಧಾನ ಕಾರ್ಯದರ್ಶಿ ಹರೀಶ್ ಭಂಡಾರಿಬೆಟ್ಟು, ಜತೆ ಕಾರ್ಯದರ್ಶಿಗಳಾಗಿ ದಾಮೋದರ್ ಭಂಡಾರಿಬೆಟ್ಟು, ಶರತ್ ಕುಮಾರ್ ಕನ್ಯಾನ, ಶ್ರೀಕಾಂತ ಮುಡಿಪು, ಕೋಶಾಧಿಕಾರಿ ಉಮೇಶ್ ಮೊಗರ್ನಾಡು, ಸಮಿತಿ ಸದಸ್ಯರಾಗಿ ಸುಭಾಷ್ ಬಂಟ್ವಾಳ, ಪ್ರಕಾಶ್ ಸಜೀಪ ನಡು, ಹರೀಶ್ ಮೇರೆಮಜಲು, ಸುಂದರ ಪರಂಗಿಪೇಟೆ, ಮೋನಪ್ಪ ಪೂಜಾರಿ ಬಾಳ್ತಿಲ, ಮಹಮ್ಮದ್ ಆಶ್ರಫ್ ಸಜೀಪಮೂಡ, ಸೀತಾರಾಮ ಮೆಲ್ಕಾರ್, ಓಬಯ್ಯ ಕಜೆಕಾರ್, ನಾರಾಯಣ ಪೂಜಾರಿ ಸಜೀಪನಡು, ವಸಂತ ಮೇರೆಮಜಲು, ಡೊಂಬಯ್ಯ ದೇವಾಡಿಗ ಕಾವಳಕಟ್ಟೆ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

