ದಕ್ಷಿಣ ಕನ್ನಡ

23ರವರೆಗೆ ಕಾಶೀ ಮಠಾಧೀಶರ ಮೊಕ್ಕಾಂ

Published On :

ಮಂಗಳೂರು: ಕಾಶಿಮಠಾಧೀಶ ಶ್ರೀಸುಧೀಂದ್ರ ತೀರ್ಥ ಸ್ವಾಮೀಜಿ ನಗರದ ರಥಬೀದಿಯಲ್ಲಿರುವ ಶ್ರೀವೆಂಕಟ್ರಮಣ ದೇವಸ್ಥಾನದಲ್ಲಿ ಅ.17ರಿಂದ 23ರ ವರೆಗೆ ಮೊಕ್ಕಾಂ ಹೂಡಲಿದ್ದಾರೆ. ಆ ಪ್ರಯುಕ್ತ ದೇವಸ್ಥಾನದ ಆಡಳಿತ ಮಂಡಳಿ ರಕ್ಷೋತ್ರಯ ಹೋಮ, ನವಗ್ರಹ ಹೋಮ ಸಹಿತ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ.
20ರಂದು ಸಂಜೆ 6ರಿಂದ ಗಾಯಕ ಶಾಂತೇರಿ ಕಾಮತ್‌ರಿಂದ ಭಕ್ತಿಗೀತೆ, 21ರಂದು ಸಂಜೆ 6ರಿಂದ ಪುತ್ತೂರು ಪಾಂಡುರಂಗ ನಾಯಕ್‌ರಿಂದ ಭಕ್ತಿಗೀತೆ, 22ರಂದು ಬೆಂಗಳೂರಿನ ಯುವಕಲಾವಿದ ಕೌಶಿಕ್ ಐತಾಳ್‌ರಿಂದ ಸಂತವಾಣಿ ನಡೆಯಲಿದೆ.
ಬಳಿಕ ಸಭಾಕಾರ್ಯಕ್ರಮದಲ್ಲಿ ಸುಧೀಂದ್ರತೀರ್ಥ ಶ್ರೀಗಳು ಆಶೀರ್ವಚನ ನೀಡುವರು. ಪ್ರತಿನಿತ್ಯ ಗುರುಸೇವೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಪದ್ಮನಾಭ ಪೈ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.