ರಾಮಾಯಣ ಆದರ್ಶ ಇಂದಿಗೂ ಪ್ರಸ್ತುತ: ಲೋಬೋ
ಮಂಗಳೂರು: ರಾಮಾಯಣದ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವನ್ನು ಅನುಸರಿಸುವಂತೆ ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ ಹೇಳಿದ್ದಾರೆ.
ದ.ಕ.ಜಿಲ್ಲಾಡಳಿತದಿಂದ ಶುಕ್ರವಾರ ನಗರದ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ನಡೆದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿ ಮಾತನಾಡಿದರು.
ರಾಮಾಯಣ ಘಟನೆ ಬಹಳ ಹಿಂದೆ ನಡೆದಿದ್ದರೂ ಅದರಲ್ಲಿನ ವಿಚಾರಗಳು ಜೀವನಕ್ಕೆ ಸೋಪಾನವಾಗಿವೆ. ರಾಮಾಯಣದ ಸತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವಾಲ್ಮೀಕಿ ಜಯಂತಿಗೆ ರಜೆ ಸಾರುವ ಮೂಲಕ ರಾಜ್ಯ ಸರ್ಕಾರ ಬುಡಕಟ್ಟು ಜನಾಂಗಕ್ಕೆ ವಿಶೇಷ ಗೌರವ ನೀಡಿದೆ. ಈ ಜನಾಂಗದ ಅಭಿವೃದ್ಧಿಗೆ ವಿಶೇಷ ಮಹತ್ವ ನೀಡಬೇಕಾಗಿದ್ದು, ಈಗಿರುವ ಯೋಜನೆಗಳು ಅವರನ್ನು ಸರಿಯಾಗಿ ತಲುಪುತ್ತಿಲ್ಲ. ಮುಂದಿನ ವರ್ಷ ವಾಲ್ಮೀಕಿ ಜನಾಂಗದ ಸಾಧಕರನ್ನು ಗುರ್ತಿಸುವಂತಾಗಬೇಕು ಎಂದರು.
ಮಂಗಳೂರು ವಿಶ್ವವಿದ್ಯಾಲಯ ಇತಿಹಾಸ ವಿಭಾಗ ಪ್ರಾಧ್ಯಾಪಕ ಡಾ.ಹನುಮ ನಾಯಕ ಮುಖ್ಯ ಭಾಷಣದಲ್ಲಿ, ಭಾರತದ ಸಾಂಸ್ಕೃತಿಕ ಮಹತ್ವ ಬ್ರಿಟೀಷರಿಗೆ ಗೊತ್ತಾಗಲು ಕಾರಣ ರಾಮಾಯಣ, ಮಹಾಭಾರತ. ಈ ಎರಡೂ ಮಹಾಕಾವ್ಯಗಳನ್ನು ರಚಿಸಿದ್ದು ಶೂದ್ರರು. ಅಧ್ಯಾತ್ಮದ ಅರಮನೆಯನ್ನು ಕಟ್ಟಿದ ವಾಲ್ಮೀಕಿ ರಾಮಾಯಣ ಇಂದಿಗೂ ಮಹತ್ವ ಪಡೆದಿದೆ ಎಂದರು.
ಇದೇ ಸಂದರ್ಭ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜಿಲ್ಲಾಧಿಕಾರಿ ಪ್ರಕಾಶ್ರವರು ವಾಲ್ಮೀಕಿ ಭಾವಚಿತ್ರ ಅನಾವರಣಗೊಳಿಸಿ ಪುಷ್ಪನಮನ ಸಲ್ಲಿಸಿದರು.
ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತುಳಸಿ ಮದ್ದಿನೇನಿ, ಉಪಕಾರ್ಯದರ್ಶಿ ಉಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಸಬೀರ್ ಅಹ್ಮದ್ ಮುಲ್ಲಾ, ದ.ಕ.ವಾಲ್ಮೀಕಿ ನಾಯಕ ಅಸೋಸಿಯೇಶನ್ ಅಧ್ಯಕ್ಷ ಹಾಲೇಶಪ್ಪ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

