ಬಡವರಿಗೆ ಆರೋಗ್ಯ ಉಚಿತ ತಪಾಸಣೆ, ಶಸ್ತ್ರಚಿಕಿತ್ಸೆ ಶಿಬಿರ
ಮಂಗಳೂರು: ಒಮೆಗ ಆಸ್ಪತ್ರೆ ತಜ್ಞ ವೈದ್ಯರಿಂದ ಆರೋಗ್ಯ ಉಚಿತ ತಪಾಸಣೆ ಶಿಬಿರ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಅ.21ರಂದು ನಡೆಯಲಿದೆ.
ವಿಶೇಷವಾಗಿ ಬಿಪಿಎಲ್ ಕಾರ್ಡ್‌ದಾರರಿಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಅತ್ಯುತ್ತಮ ಚಿಕಿತ್ಸೆ ಲಭಿಸಲಿದೆ ಎಂದು ಆರೋಗ್ಯಶ್ರೀ ಯೋಜನೆ ಸಮನ್ವಯ ಅಧಿಕಾರಿ ಜಗನ್ನಾಥ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೃದಯರೋಗ, ಹೃದಯ ಶಸ್ತ್ರ ಚಿತಿತ್ಸೆ, ಎದೆನೋವು, ಉಸಿರಾಟ ತೊಂದರೆ, ಸುಸ್ತು, ನರರೋಗ, ಹೊಟ್ಟೆನೋವು, ಉರಿ ಮೂತ್ರ, ರಕ್ತ ಸ್ರಾವ ತಪಾಸಣೆ ನಡೆಯಲಿದೆ. ಶಿಬಿರದಲ್ಲಿ ಉಚಿತವಾಗಿ ಇಸಿಜಿ, ರಕ್ತದೊತ್ತಡ, ಹೃದಯ ಸ್ಕ್ಯಾನಿಂಗ್, ಹೃದಯ ತಜ್ಞರಿಂದ ಪರೀಕ್ಷೆ ಹಾಗೂ ಸಲಹೆ, ಆಹಾರ ಪದ್ಧತಿ ಸಲಹೆ ನೀಡಲಾಗುವುದು. ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಶಸ್ತ್ರ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.
'ಬಿಪಿಎಲ್, ಅಕ್ಷಯ, ಅಕ್ಷಯ ಅನಿಲರಹಿತ, ಅಂತ್ಯೋದಯ ಕಾರ್ಡ್ ಮತ್ತು ಚುನಾವಣ ಗುರುತು ಚೀಟಿತಪ್ಪದೆ ತರಬೇಕು. ಬೆಳಗ್ಗೆ 9 ಗಂಟೆಗೆ ಶಿಬಿರ ಉದ್ಘಾಟಿಸಲಾಗುವುದು. ಇದಕ್ಕೆ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೃದ್ರೋಗ ತಜ್ಞ ವೈದ್ಯ ಡಾ.ಮುಕುಂದ್ ಮಾರ್ಗದರ್ಶನದಲ್ಲಿ ಶಇಬಿರ ನಡೆಯಲಿದೆ' ಎಂದು ಒಮೆಗ ಆಸ್ಪತ್ರೆ ಆಡಳಿತಾಧಿಕಾರಿ ಎಸ್.ಎಲ್.ಭಾರಾಧ್ವಾಜ್ ಹೇಳಿದರು. ಹೆಸರು ನೋಂದಣಿಗೆ ಎಸ್.ಎಲ್.ಭಾರಾಧ್ವಾಜ್ (9880924411), ಪಿ.ಎನ್.ಶ್ರೀನಾಥ್ (9008124597), ಟಿ.ನಾಗರಾಜ್ (9035539262) ಸಂಪರ್ಕಿಸಬಹುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

