ನಾಳೆ ಮಂಗಳೂರಿಗೆ ಸಚಿವ ಚಿದಂಬರಂ
ಮಂಗಳೂರು: ಕೇಂದ್ರ ಸಚಿವ ಪಿ.ಚಿದಂಬರಂ ಅ. 27 ರಂದು ಖಾಸಗಿ ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಆಗಮಿಸಲಿದ್ದಾರೆ.
29ರಂದು ಬಂದರು
ಸಚಿವರ ಪ್ರವಾಸ
ಮಂಗಳೂರು: ಬಂದರು, ಜವಳಿ ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರು ಅ. 29 ರಂದು ಮುರುಡೇಶ್ವರದಿಂದ ಮಂಗಳೂರಿನವರೆಗೆ ಬರುವ ವಿವಿಧ ಬಂದರುಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸುವರು.
ಇಂದು ಮೀನುಗಾರಿಕೆ ಸಚಿವ ಪ್ರವಾಸ
ಮಂಗಳೂರು: ಯುವಜನ ಸೇವಾ ಮತ್ತು ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ ಜೈನ್ 26 ರಂದು ಜಿಲ್ಲೆಗೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಬೆಳಗ್ಗೆ 9ಕ್ಕೆ ಹೊಟೇಲ್ ಒಶನ್ ಪರ್ಲ್ನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 10ಕ್ಕೆ ಬಂಟ್ವಾಳದಲ್ಲಿ ಕೋರ್ಟ್ ಕಟ್ಟಡ ಉದ್ಘಾಟಿಸುವರು. ಸಂಜೆ 4ಕ್ಕೆ ಸಸಿಹಿತ್ಲು ರುದ್ರಭೂಮಿ ಉದ್ಘಾಟನೆ ಮಾಡುವರು. ಅ. 27 ರಂದು ಬೆಳಿಗ್ಗೆ 9.30ಕ್ಕೆ ಮೂಡುಬಿದಿರೆ ಎಸ್.ಕೆ.ಎಫ್ನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆಳಗ್ಗೆ 10.30ಕ್ಕೆ ವೇಣೂರು ಜೈನ್ಮಿಲನ್ ಕರಾವಳಿ ಉತ್ಸವ ಉದ್ಘಾಟಿಸುವರು. 11.30 ಮೂಡುಬಿದಿರೆ ಪಂಚರತ್ನ ಮೈದಾನದಲ್ಲಿ ತ್ರಿಭುವನ ಆಟೋಮೋಟಿವ್ ಬೈಕ್ ರ್ಯಾಲಿಯನ್ನು ಉದ್ಘಾಟಿಸುವರು. ಸಂಜೆ 4ಕ್ಕೆ ಸುಳ್ಯದಲ್ಲಿ ಬಲಿಪ ಭಾಗವತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ನಾಳೆ 'ಸಾಹಿತ್ಯ
ಸಂಸ್ಕೃತಿ ಸಂವರ್ಧನ'
ಕಾಂತಾವರ: ಇಲ್ಲಿನ ಅಲ್ಲಮಪ್ರಭು ಪೀಠದ ವತಿಯಿಂದ ಅನುಭವದ ನಡೆ ಅನುಭಾವದ ನುಡಿ ತಿಂಗಳ ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮ 27ರಂದು ಅಪರಾಹ್ನ 3 ಗಂಟೆಗೆ ಕಾಂತಾವರ ರಥಬೀದಿಯಲ್ಲಿರುವ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡಭವನದ ಪಂಪ ಮಹಾಕವಿ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ 'ಗಾಂಧಿ- ವರ್ತಮಾನದ ಪ್ರತಿಸ್ಪಂದನ' ಕುರಿತು ಡಾ. ಜಯಪ್ರಕಾಶ ಮಾವಿನಕುಳಿ ವಿಷಯ ಮಂಡಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

