ದಕ್ಷಿಣ ಕನ್ನಡ

ಹೊಟೇಲ್, ಉಪಹಾರ ಗೃಹಗಳಲ್ಲಿ ದರ ಏರಿಕೆ; ಡಿವೈಎಫ್‌ಐ ಪ್ರತಿಭಟನೆ

Published On :

ಪುತ್ತೂರು; ಹೊಟೇಲ್ ಮತ್ತು ಉಪಹಾರ ಗೃಹಗಳಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ವತಿಯಿಂದ ಗುರುವಾರ ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಹೊಟೇಲ್‌ಗಳಲ್ಲಿ ಉಪಹಾರಗಳ ದರವನ್ನು ಹೆಚ್ಚುವರಿ ಮಾಡಿರುವುದರಿಂದ ಆಹಾರಕ್ಕಾಗಿ ಹೊಟೇಲ್‌ಗಳನ್ನು ಅವಲಂಬಿಸಿರುವ ವಿವಿಧ ಕಾರ್ಮಿಕರು ಹಾಗೂ ಇನ್ನಿತರ ವರ್ಗಗಳಿಗೆ ತೊಂದರೆಯಾಗಿದೆ. ತಿಂಡಿ ತಿನಿಸುಗಳ ವಿಪರೀತ ಬೆಲೆಯೇರಿಕೆ ಜನತೆಯ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಈ ಹಿನ್ನೆಲೆಯಲ್ಲಿ ಏಕರೂಪದ ದರ ಪದ್ಧತಿಯನ್ನು ಹೊಟೇಲ್‌ಗಳಲ್ಲಿ ಅಳವಡಿಸುವಲ್ಲಿ ಕ್ರಮ ಕೈಗೊಳ್ಳುವ ಮೂಲಕ ಈ ರೀತಿಯ ಅಸಮಾನ ದರ ನಿಗದಿಗೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದರು.
ಕೇರಳ ರಾಜ್ಯದಲ್ಲಿ ಜಿಲ್ಲೆಯಿಂದ ಕಡಿಮೆ ದರದಲ್ಲಿ ಹೊಟೇಲ್ ತಿಂಡಿಗಳು ಲಭ್ಯವಾಗುತ್ತಿದ್ದು, ಅಲ್ಲಿನ ಸ್ಥಳೀಯಾಡಳಿತವು ಬೇಕಾಬಿಟ್ಟಿ ದರ ಏರಿಕೆಗೆ ಕಡಿವಾಣ ಹಾಕಿರುವುದರಿಂದ ಅಲ್ಲಿನ ಹೊಟೇಗಳಲ್ಲಿ ಬೆಲೆ ನಿಯಂತ್ರಣವಿದೆ ಎಂದ ಅವರು ತಮಿಳುನಾಡಿನಲ್ಲಿ ಸರ್ಕಾರವೇ ಹೊಟೇಲ್ ಮೇಲ್ವಿಚಾರಣೆ ಮಾಡುತ್ತಿದ್ದು ಜನರಿಗೆ ನಿರೀಕ್ಷಿತ ದರದಲ್ಲಿ ಆಹಾರ ವಿತರಣೆ ಮಾಡುತ್ತಿದೆ. ಇಂತಹ ವ್ಯವಸ್ಥೆಯನ್ನು ರಾಜ್ಯದಲ್ಲಿಯೂ ಜಾರಿಗೊಳಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಿಪಿಎಂ ತಾಲೂಕು ಕಾರ್ಯದರ್ಶಿ ಪಿ.ಕೆ. ಸತೀಶನ್, ಸದಸ್ಯ ಕೇಶವ ಉರ್ಲಾಂಡಿ, ಡಿವೈಎಫ್‌ಐ ತಾಲೂಕು ಅಧ್ಯಕ್ಷ ಕೃಷ್ಣ, ಕಾರ್ಯದರ್ಶಿ ರಿಯಾಝ್, ಉಪಾಧ್ಯಕ್ಷ ಅಶ್ರಫ್, ಸಿಐಟಿಯು ರಿಕ್ಷಾ ಯೂನಿಯನ್ ಅಧ್ಯಕ್ಷ ಮೇದಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.