ಹದಗೆಟ್ಟ ರಸ್ತೆ ದುರಸ್ತಿ: ಪೆರುವಾಯಿ ರಿಕ್ಷಾ ಚಾಲಕರ ಶ್ರಮದಾನ
ವಿಟ್ಲ: ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ಮರುನಿರ್ಮಾಣವಾಗಿ ನಂತರ ಕೆಲವೇ ದಿನಗಳಲ್ಲಿ ಹದಗೆಟ್ಟ ರಸ್ತೆಯನ್ನು ಶುಕ್ರವಾರ ಪೆರುವಾಯಿ ರಿಕ್ಷಾ ಚಾಲಕರೇ ಶ್ರಮದಾನದ ಮೂಲಕ ದುರಸ್ತಿ ಮಾಡಿದರು. ಕುದ್ದುಪದವು, ಪೆರುವಾಯಿ, ಬಾಳಶೆಟ್ಟಿ ಮೂಲೆ ಸಂಚರಿಸುವ 8.74 ಕಿ.ಮೀ. ರಸ್ತೆ ಸುಮಾರು ರು. 399.55 ಲಕ್ಷ ವೆಚ್ಚದಲ್ಲಿ 2009 ಜನವರಿಯಿಂದ ಅಕ್ಟೋಬರ್ ನಡುವಿನಲ್ಲಿ ಮರು ನಿರ್ಮಾಣವಾಗಿದ್ದು, ನಾಲ್ಕು ವರ್ಷ ಮುಗಿಯುವ ಮೊದಲೇ ಡಾಂಬರ್ ಎದ್ದು ಹೋಗುವ ಮೂಲಕ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಮಳೆಗಾಲದಲ್ಲಿ ಸ್ಥಳೀಯರು ರಸ್ತೆಯ ದುರವಸ್ಥೆಯನ್ನು ರಸ್ತೆಯ ಹಳ್ಳಗಳ ಮಧ್ಯೆ ಬಾಳೆ ಸಸಿಗಳನ್ನು ನೆಡುವ ಮೂಲಕ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದರಾದರೂ ಯಾವುದು ಫಲಕಾರಿಯಾಗಿಲ್ಲ. ಅಧಿಕಾರಿಗಳು ಗುತ್ತಿಗೆದಾರರ ಜೊತೆಗೆ ಶಾಮೀಲಾಗಿ ಕಳಪೆ ಗುಣಮಟ್ಟದ ರಸ್ತೆ ನಿರ್ಮಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಲೇ ಬಂದರಾದರೂ ಮರು ಡಾಂಬರೀಕರಣಕ್ಕೆ ಮುಂದಾಗಿಲ್ಲ. ಇದರಿಂದ ಬೇಸೆತ್ತ ಪೆರುವಾಯಿ ರಿಕ್ಷಾ ಚಾಲಕರು ಕೆಲಸಕ್ಕೆ ರಜೆ ಮಾಡಿ ರಿಕ್ಷಾದಲ್ಲೇ ಹಳ್ಳವಿರುವಲ್ಲಿಗೆ ಹಾರೆ ಬುಟ್ಟಿ ಸಹಿತ ತೆರಳಿ ಮಣ್ಣು ಹಾಕುವ ಮೂಲಕ ಮತ್ತೆ ಎನಾದರೂ ಅಧಿಕಾರಿಗಳು ಎಚ್ಚೆತ್ತು ಮರು ಡಾಮರೀಕರಣ ಮಾಡಿಸುತ್ತಾರೋ ಎಂಬ ಪ್ರಯತ್ನಕ್ಕೆ ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

