ಕಾಲುಬಾಯಿ ರೋಗ: ಗೋ ಸೇವಾ ಆಯೋಗ ಮೌನ!
ಮಂಗಳೂರು: ರಾಜ್ಯದೆಲ್ಲೆಡೆ ಕಾಲುಬಾಯಿ ರೋಗದಿಂದ ಗೋವುಗಳನ್ನು ಸಾವನಪ್ಪುತ್ತಿದ್ದರೆ ಗೋ ಸೇವಾ ಆಯೋಗಕ್ಕೆ ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ !
ಗೋಸಾಗಾಟ ನಡೆಯುವ ಬಗ್ಗೆ ಕಠಿಣ ಕ್ರಮಕ್ಕೆ ಶಿಫಾರಸು ಮಾಡಬೇಕು, ಗೋವು ಕಳ್ಳರನ್ನು ಶಿಕ್ಷಿಸಬೇಕು ಎಂದು ಸುದ್ದಿಗೋಷ್ಠಿ ನಡೆಸಿ ಖಂಡಿಸಿದ ಗೋಸೇವಾ ಆಯೋಗ ಕಾಲು ಬಾಯಿ ರೋಗದ ಬಗ್ಗೆ ಮೌನವಾಗಿದೆ. ಸಾವಿರಾರು ಗೋವುಗಳು ರೋಗದಿಂದ ದಾರುಣವಾಗಿ ಸಾಯುತ್ತಿವೆ. ಗೋಮಾತೆ, ಸರ್ವ ಪೂಜಿತೆ ಎಂದು ಹೇಳುವ ಗೋಸೇವಾ ಆಯೋಗ ರೋಗ ತಡೆಗಟ್ಟುವಲ್ಲಿ ಅಥವಾ ಕನಿಷ್ಠ ಜಾಗೃತಿ ಮೂಡಿಸುವಲ್ಲಿ ಕಾರ್ಯೋನ್ಮುಖವಾಗಿಲ್ಲ. ಈ ಬಗ್ಗೆ ಗೋಸೇವಾ ಆಯೋಗ ಅಧ್ಯಕ್ಷ ಎಂ.ಬಿ.ಪುರಾಣಿಕ್ ಅವರನ್ನು ಕನ್ನಡಪ್ರಭ ಮಾತನಾಡಿಸಿದಾಗ ಹೇಳಿದಿಷ್ಟು: ಪಶು ಇಲಾಖೆಯಿಂದ ಕಾಲುಬಾಯಿ ರೋಗ ಪೀಡಿತ ಜಾನುವಾರುಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೋಗ ಹತೋಟಿಯಲ್ಲಿದೆ. ಉಳಿದ ಜಿಲ್ಲೆಗಳಲ್ಲಿ ಆಯೋಗದವರು ಮಾಹಿತಿ ಪಡೆಯುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ. ಬಳಿಕ ನಾವು ಕಾರ್ಯೋನ್ಮುಖರಾಗುತ್ತೇವೆ.
ಮಂಜುನಾಥ ಉಡುಪಗೆ ಪಿಎಚ್ಡಿ
ಬಂಟ್ವಾಳ: ಇಲ್ಲಿನ ಎಸ್ವಿಎಸ್ ಕಾಲೇಜು ಹಿಂದಿ ವಿಭಾಗ ಮುಖ್ಯಸ್ಥ ಮಂಜುನಾಥ ಉಡುಪ ಕೆ. ಅವರಿಗೆ ದಕ್ಷಿಣ ಭಾರತ್ ಹಿಂದಿ ಪ್ರಚಾರ ಸಭಾ ಮದ್ರಾಸ್ನಿಂದ ಪಿಎಚ್ಡಿ ಪದವಿ ಲಭಿಸಿದೆ. ಉಡುಪ ಅವರು ಮೂಲ್ಕಿ ವಿಜಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಭಾಸ್ಕರ ಮಯ್ಯ ಮಾರ್ಗದರ್ಶನದಲ್ಲಿ 'ಅಲೋಚಕ್ ಡಾ. ರಾಮ್ವಿಲಾಸ್ ಶರ್ಮಾ ಏಕ್ ಅಧ್ಯಯನ್' ಎಂಬ ವಿಷಯದಲ್ಲಿ ಪ್ರೌಢ ಪ್ರಬಂಧ ಸಿದ್ಧಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

