ದಕ್ಷಿಣ ಕನ್ನಡ

ಕ್ಯಾನ್ಸರ್ ಪೀಡಿತಗೆ ನೆರವು ನೀಡಿ

Published On :

ಸುಳ್ಯ: ಜಾಲ್ಸೂರು ಗ್ರಾಮದ ಕಲ್ಲಾಜೆ ದಿ. ಕೊರಗಪ್ಪ ಗೌಡರ ಪುತ್ರ 48 ವರ್ಷದ ಜಯರಾಮ ಗೌಡರು ಕಳೆದರೆಡು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದಾರೆ.
 ಪ್ರಾರಂಭ ಹಂತದಲ್ಲಿ ಕಾಯಿಲೆ ಯನ್ನು ನಿಖರವಾಗಿ ಗುರುತಿಸಲಾಗಲಿಲ್ಲ. ಆದರೆ ಕ್ಯಾನ್ಸರ್ ಎಂದು ತಿಳಿದ ತಕ್ಷಣ ಇವರ ಪತ್ನಿ ಬೇರೆ ಬೇರೆ ಕಡೆಗಳಿಂದ ಸಾಲ ಮಾಡಿ ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ನಾಲ್ಕು ತಿಂಗಳು ನಿರಂತರ ಚಿಕಿತ್ಸೆ ಕೊಡಿಸಿದ್ದರು. ಆದರೂ ಫಲಕಾರಿಯಾಗಲಿಲ್ಲ. ಸೊಣಂಗೇರಿಯ ಕುಕ್ಕಂದೂರು ಎಂಬಲ್ಲಿ ಸಣ್ಣ ಗುಡಿಸಲು ಕಟ್ಟಿಕೊಂಡು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಜಯರಾಮ ಗೌಡರದ್ದ ಬಡತನದ ಜೀವನ. ದೈನಂದಿನ ಖರ್ಚಿಗೆ ಪತ್ನಿ ಪುಷ್ಪಾವತಿ ಕೂಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದ್ದು, ಪತಿಗೆ ಚಿಕಿತ್ಸೆ ಕೊಡಿಸಲು ಆರ್ಥಿಕ ಸಂಕಷ್ಟದಲ್ಲಿದ್ದಾರೆ.  ಆದ್ದರಿಂದ ಕ್ಯಾನ್ಸರ್ ಚಿಕಿತ್ಸೆಯಿಂದ ಬಳಲುತ್ತಿರುವ ಜಯರಾಮ ಗೌಡರಿಗೆ ಧನಸಹಾಯ ಮಾಡಲಿಚ್ಚಿಸುವವರು ಅವರ ಬ್ಯಾಂಕ್ ಖಾತೆ ಜಾಲ್ಸೂರು ಸಿಂಡಿಕೇಟ್ ಬ್ಯಾಂಕ್‌ನ 01822200028030 ಗೆ ಹಣ ಜಮಾಯಿಸುವಂತೆ ಕೋರಿದ್ದಾರೆ.
ಉಪ್ಪಿನಂಗಡಿ ಎಸ್‌ಐ ವರ್ಗಾವಗಣೆ
ಉಪ್ಪಿನಂಗಡಿ: ಜಿಲ್ಲೆಯ ಹಲವಾರು ಅಪರಾಧ ಪ್ರಕರಣಗಳ ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಉಪ್ಪಿನಂಗಡಿ ಎಸ್‌ಐ ರವಿ ಬಿ.ಎಸ್. ಅವರನ್ನು ವರ್ಗಾಯಿಸಲಾಗಿದೆ. ಇಲಾಖೆಯ ಅತ್ಯಂತ ಮಹತ್ವದ ಕಾರ್ಯಾಚರಣೆಗಳಲ್ಲಿ ಮುಂಚೂಣಿಯ ಪಾತ್ರ ನಿರ್ವಹಿಸುತ್ತಿದ್ದ, ಜಟಿಲ ಹಾಗೂ ಕ್ಲಿಷ್ಟ ಪ್ರಕರಣಗಳಲ್ಲಿಯೂ ಆಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಾವೀಣ್ಯತೆ ಮೆರೆಯುತ್ತಿದ್ದ ರವಿ ಅವರನ್ನು ಸುಳ್ಯ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.
ಸುಳ್ಯದಲ್ಲಿ ಧಾರಾಕಾರ ಮಳೆ
ಮಂಗಳೂರು: ಜಿಲ್ಲೆಯಾದ್ಯಂತ ಭಾನುವಾರ ಸಂಜೆ ಮೋಡ ಕವಿದ ವಾತಾವರಣವಿದ್ದು, ಸುಳ್ಯದಲ್ಲಿ ಗುಡುಗು ಸಹಿತ ಸುಮಾರು ಅರ್ಧ ಗಂಟೆ ಕಾಲ ಧಾರಾಕಾರ ಮಳೆ ಸುರಿದಿದೆ. ಉಪ್ಪಿನಂಗಡಿ, ಬೆಳ್ತಂಗಡಿಯಲ್ಲಿ ಸಾಧಾರಣ ಮಳೆಯಾಗಿದೆ. ಪುತ್ತೂರಿನಲ್ಲಿ ಮೋಡ ಕವಿದು ಗುಡುಗು, ಮಿಂಚು ಕಾಣಿಸಿಕೊಂಡರೂ ಮಳೆ ಸುರಿದಿಲ್ಲ.
11ರಿಂದ ಓಣಂ ವಿಶೇಷ ರೈಲು
ಮಂಗಳೂರು: ಓಣಂ ಪ್ರಯುಕ್ತ ನಾಗರಕೊಯಿಲ್-ಮಂಗಳೂರು ಜಂಕ್ಷನ್ ಮಧ್ಯೆ ವಿಶೇಷ ರೈಲು ಸೆ.11 ಮತ್ತು 18ರಂದು ನಾಗರಕೊಯಿಲ್‌ನಿಂದ ರಾತ್ರಿ 8.30ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 11.20ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮಂಗಳೂರು ಜಂಕ್ಷನ್‌ನಿಂದ ಸೆ.12 ಮತ್ತು 19ರಂದು ಸಂಜೆ ಮಧ್ಯಾಹ್ನ 2.40ಕ್ಕೆ ಹೊರಡಲಿದ್ದು, ನಾಗರಕೊಯಿಲ್‌ಗೆ ಸಂಜೆ 4.15ಕ್ಕೆ ತಲುಪಲಿದೆ. ಸೆ.1ರಿಂದ ಮುಂಗಡ ಕಾಯ್ದಿರಿಸುವಿಕೆ ಪ್ರಾರಂಭವಾಗಲಿದೆ ಎಂದು ಫಾಲ್ಘಾಟ್ ರೇಲ್ವೆ ವಿಭಾಗದ ಪ್ರಕಟಣೆ ತಿಳಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.