ದಕ್ಷಿಣ ಕನ್ನಡ

ಬಿ.ಕೆ. ತೀರ್ಥರಾಮ ಆತ್ಮಹತ್ಯೆ: ಸಮರ್ಪಕ ತನಿಖೆಗೆ ಪತ್ನಿ ಆಗ್ರಹ

Published On :

ಸುಳ್ಯ: ಕಳೆದ ಫೆಬ್ರವರಿಯಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಅರಂತೋಡು ಸಹಕಾರಿ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ತೀರ್ಥರಾಮ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿ ಸಮರ್ಪಕ ತನಿಖೆಗೆ ಆಗ್ರಹಿಸಿದ್ದರೂ ಇದುವರೆಗೆ ತನಿಖೆಯಾಗಿಲ್ಲ ಎಂದು ತೀರ್ಥರಾಮರ ಪತ್ನಿ, ಉಪನ್ಯಾಸಕಿ ಭಾರತಿ ಅಳಲು ತೋಡಿಕೊಂಡಿದ್ದಾರೆ.
 ಗುರುವಾರ ಸುಳ್ಯದಲ್ಲಿ ಶ್ರೀಸೇನೆಯ ಪದಾಧಿಕಾರಿಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೀರ್ಥರಾಮರ ಆತ್ಮಹತ್ಯೆಗೆ ಅವರ ವೈಯಕ್ತಿಕ ಸಮಸ್ಯೆಗಳಾಗಲಿ, ನಮ್ಮ ಕುಟುಂಬದ ಸಮಸ್ಯೆಗಳಾಗಲಿ ಕಾರಣವಲ್ಲ ಎಂದು ತಿಳಿಸಿದರು.
 ಶ್ರೀ ಸೇನೆಯ ಸ್ಥಾಪಕಾಧ್ಯಕ್ಷ ಸಿ.ಎನ್. ಶ್ರೀನಿವಾಸ ರಾವ್ ಮಾತನಾಡಿ, ಈ ಕುರಿತಂತೆ ನಾವು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೆವು. ಇದೀಗ ಆಯೋಗವು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಿಗೆ ಆರು ವಾರದೊಳಗೆ ವಿವರವಾದ ವರದಿಯನ್ನು ನೀಡುವಂತೆ ಸೂಚಿಸಿದ್ದಾರೆ. ನಾವು ದೂರು ನೀಡಿದ ಬಳಿಕವಷ್ಟೇ ತನಿಖೆ ಚುರುಕುಗೊಂಡಿದೆ ಎಂದು ಹೇಳಿದರು. ಭಾರತಿಯವರ ಮಗಳು ಲಹರಿ, ಅಣ್ಣ ಸುರೇಶ್, ದಿ. ತೀರ್ಥರಾಮರ ತಂದೆ ಬಿ. ಕೃಷ್ಣಪ್ಪ, ತಾಯಿ ಭಾಗೀರಥಿ, ಅರಂತೋಡು ಸೊಸೈಟಿಯ ಮಾಜಿ ನಿರ್ದೇಶಕ ಎ.ಸಿ. ಲಕ್ಷ್ಮಣ ಗೌಡ, ಶ್ರೀಸೇನೆಯ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.