ದಕ್ಷಿಣ ಭಾರತದ ಮೊಟ್ಟ ಮೊದಲ ಇಂಗ್ಲಿಷ್ ಶಾಲೆಗೆ 175 ವರ್ಷಾಚರಣೆ
ಕ.ಪ್ರ.ವಾರ್ತೆ ಮಂಗಳೂರು ಸೆ. 5
ರೆವರೆಂಡ್ ಕಿಟೆಲ್ ಮೊದಲ ಕನ್ನಡ-ಇಂಗ್ಲಿಷ್ ನಿಘಂಟು ಹೊರತರಲು ಕಠಿಣ ಪರಿಶ್ರಮ ಪಟ್ಟದ್ದು ಮಂಗಳೂರಿನ ಇದೇ ಬಿ.ಇ.ಎಂ. ಶಾಲೆಯಲ್ಲಿ. 70 ಸಾವಿರ ಶಬ್ದಗಳ ಡಿಕ್ಷನರಿ ಹೊರ ತಂದ ಹಾಗೆ ಶಾಲೆ ಮೂಲಕ ಅಪ್ರತಿಮ ಪ್ರತಿಭೆಗಳನ್ನು ಹೊರ ತಂದಿದ್ದರು. ದಕ್ಷಿಣ ಭಾರತದಲ್ಲಿಯೇ ಮೊದಲ ಇಂಗ್ಲಿಷ್ ಶಾಲೆ ಎಂಬ ಖ್ಯಾತಿಗೆ ಪಾತ್ರವಾದ ಬಿ.ಇ ಎಂ. ಶಾಲೆ ಇದೀಗ 175ನೇ ವರ್ಷಾಚರಣೆ ಸಂಭ್ರಮದಲ್ಲಿದೆ.
175 ವರ್ಷ ಆಚರಿಸುತ್ತಿರುವ ಬಾಸೆಲ್ ಇಂಗ್ಲಿಷ್ ಮಿಶನ್ ಶಾಲೆ ಇಡೀ ದಕ್ಷಿಣ ಭಾರತದಲ್ಲಿಯೇ ಮೊದಲು ಎಂದು ಆಡಳಿತ ಮಂಡಳಿ ಅಧ್ಯಕ್ಷ ವಾಲ್ಟರ್ ಮಾಬೆನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.7ರಂದು 175ನೇ ವರ್ಷಾಚರಣೆ ಆರಂಭವಾಗಿ ಮುಂದಿನ ವರ್ಷ ಜನವರಿಯಲ್ಲಿ ಸಮಾಪನಗೊಳ್ಳಲಿದೆ. ಉದ್ಘಾಟನೆ ಸಮಾರಂಭದಲ್ಲಿ ಶಾಸಕ ಜೆ. ಆರ್. ಲೋಬೋ, ಡಾ.ಎಂ. ಮೋಹನ ಆಳ್ವ, ಡಾ. ಹನಿಬಾಲ್ ಕಬ್ರಾಲ್, ಡಯಟ್ನ ಫಿಲೋಮಿನಾ ಲೋಬೊ ಭಾಗವಹಿಸುವರು.
ಶಾಲೆ ಹಿನ್ನೆಲೆ: 1838ರಲ್ಲಿ ಜರ್ಮನ್ ಕ್ರೈಸ್ತ ಮಿಷನರಿಗಳಿಂದ ಸ್ಥಾಪನೆಯಾದ ಶಾಲೆಯಲ್ಲಿ ಇಂಗ್ಲಿಷ್ ಒಂದು ವಿಷಯವಾಗಿ ಬೋಧಿಸಲಾಗುತ್ತಿತ್ತು. 1918ರಿಂದ ಪ್ರೌಢಶಾಲೆ ಆರಂಭಿಸಲಾಯಿತು. ಬಳಿಕ ಈ ಶಾಲೆಯಲ್ಲಿ ಸೌತ್ ಕೆನರಾ ಎಜುಕೇಷನಲ್ ಆ್ಯಂಡ್ ಕಲ್ಚರಲ್ ಸೊಸೈಟಿಗೆ ನೀಡಲಾಯಿತು. ಸಾವಿರಾರು ವಿದ್ಯಾರ್ಥಿಗಳು ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದ ಕಾಲವಿತ್ತು. ಈಗ ಶಾಲೆ ಮತ್ತು ಪಿಯುಸಿ ಸೇರಿ ವಿದ್ಯಾರ್ಥಿಗಳ ಸಂಖ್ಯೆ 480. ದಕ್ಷಿಣ ಭಾರತದಲ್ಲಿಯೇ ಮೊದಲ ಇಂಗ್ಲಿಷ್ ಶಿಕ್ಷಣ ಬೋಧಿಸುವ ಶಾಲೆಯಾದರೂ ರಾಜ್ಯ ಸರ್ಕಾರವು 2000-01ರ ಭಾಷಾ ನೀತಿಯಂತೆ ಅನುದಾನಿತ ಶಾಲೆಯಾಗಿರುವ ಹಿನ್ನೆಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಬೋಧನೆಯನ್ನು ನಿಲ್ಲಿಸಲಾಯಿತು ಎಂದರು.
ಜಾಗವೂ ಇಲ್ಲ, ಸಭಾಭವನವೂ ಇಲ್ಲ!: ರಸ್ತೆ ಅಗಲಗೊಳಿಸಲು ಶಾಲೆಗೆ ಸೇರಿದ 11 ಸೆಂಟ್ಸ್ ಜಾಗವನ್ನು ನೀಡಲಾಯಿತು. ಆಗ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ಟಿಡಿಆರ್ ನಿಯಮದಂತೆ ಬೇರೆಡೆ ಜಾಗ ಮತ್ತು 22 ಲಕ್ಷ ವೆಚ್ಚದಲ್ಲಿ ಸಭಾಂಗಣ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಕೋಟಿ ಬೆಲೆಬಾಳುವ ಶಾಲೆ ಜಾಗ ರಸ್ತೆಗೆ ಹೋಯಿತು. ಸಭಾಂಗಣಕ್ಕೆ ಹಣ ಮಂಜೂರಾಯಿತು. ಬಳಿಕ ಜಿಲ್ಲಾಧಿಕಾರಿ ವರ್ಗವಾದರು. ಇದೀಗ ಟಿಡಿಆರ್ನಂತೆ ಬೇರೆಡೆ ಜಾಗವೂ ನೀಡಿಲ್ಲ, ಸಭಾಂಗಣ ನಿರ್ಮಾಣಕ್ಕೆ ಮಂಜೂರಾದ ಹಣವೂ ಸಿಕ್ಕಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

