ದಕ್ಷಿಣ ಕನ್ನಡ

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಬಲ: ಡಾ. ತಿಂಗಳಾಯ

Published On :

ಮಂಗಳೂರು: ರಾಜ್ಯದಲ್ಲಿರುವ 58 ಗ್ರಾಮೀಣ ಬ್ಯಾಂಕ್ಗಳ ಪೈಕಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಬಲ ಬ್ಯಾಂಕ್ ಆಗಿ ರೂಪುಗೊಂಡಿದೆ ಎಂದು ಬ್ಯಾಂಕಿಂಗ್ ತಜ್ಞ ಡಾ.ಎನ್.ಕೆ.ತಿಂಗಳಾಯ ಅಭಿಪ್ರಾಯಪಟ್ಟಿದ್ದಾರೆ.  ಶನಿವಾರ ನಗರದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನ ಸಾಲ ನೀಡಿಕೆ ಕಾರ್ಯಕ್ರಮ ಅಂಗವಾಗಿ 525 ಶಾಖೆಗಳಲ್ಲಿ ಗ್ರಾಮ ಸಭಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ರು. 194 ಕೋಟಿ ಲಾಭ ಗಳಿಸಿ ಏಕೈಕ ಗ್ರಾಮೀಣ ಬ್ಯಾಂಕ್ ಇದಾಗಿದ್ದು, ಸಾಲ ನೀಡಿಕೆ ಜನರ ಉತ್ಕರ್ಷಕ್ಕೆ ಹೊರತು ಅವರಿಗೆ ಹೊರೆಯಾಗಲು ಅಲ್ಲ ಎಂಬುದನ್ನು ಸಾಬೀತುಪಡಿಸಿದೆ. ಕಿರು ಉದ್ಯಮಕ್ಕೆ ರು. 800 ಕೋಟಿ ಸಾಲ ನೀಡಿ ಕ್ಲಪ್ತ ಸಮಯಕ್ಕೆ ಮರುಪಾವತಿಗೆ ನೋಡಿಕೊಂಡಿದೆ. ಸಾಲ ಶೂಲವಾಗದೆ ಗ್ರಾಹಕರ ಅಭಿವೃದ್ಧಿಯ ಉದ್ದೇಶವಿರಿಸಿಕೊಂಡಿದ್ದು ಶ್ಲಾಘನೀಯ ಎಂದರು.  ಬ್ಯಾಂಕಿನ ಅಧ್ಯಕ್ಷ ಸಾಂಬಶಿವ ರೆಡ್ಡಿ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭ ಅವಿಭಜಿತ ದ.ಕ.ಜಿಲ್ಲೆಯ 42 ಶಾಖೆಗಳ 1,142 ಗ್ರಾಹಕರಿಗೆ ರು. 16.88 ಕೋಟಿ ವಿವಿಧ ಬಗೆಯ ಸಾಲಪತ್ರ ವಿತರಿಸಲಾಯಿತು.  ಸಾಲ ಮರುಪಾವತಿ ತೊಂದರೆ ಹಾಗೂ ಸಾಲ ಯೋಜನೆ ಬಗ್ಗೆ ಮಾಹಿತಿ ನೀಡಲು ಗ್ರಾಮ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದು ಬ್ಯಾಂಕ್ 4 ಗ್ರಾಮಗಳಲ್ಲಿ ಗ್ರಾಮ ಸಭೆ ನಡೆಸಲಿದೆ ಎಂದು ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥ ಪಿ.ಎಲ್.ಕೂಡಗಿ ಪ್ರಾಸ್ತಾವಿಕದಲ್ಲಿ ತಿಳಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.