ದಕ್ಷಿಣ ಕನ್ನಡ

'ಪ್ರೀತಿ ಇರಲಿ' ಕವನ ಸಂಕಲನ ಬಿಡುಗಡೆ

Published On :

ಬೆಳ್ತಂಗಡಿ: ಕವಿಯಾದವ ಛಂದಸ್ಸು ಮತ್ತು ಲಯವನ್ನು ಅಭ್ಯಸಿಸಬೇಕು. ಕವನದಲ್ಲಿ ನೇರವಾಗಿ ಹೇಳದೆ ವಕ್ರೋಕ್ತಿ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರೀತಿಯ ವಿಭಿನ್ನ ಆಯಾಮಗಳನ್ನು ಚಿತ್ರಿಸಿರುವ ಚಂದ್ರಹಾಸ ಅವರ 'ಪ್ರೀತಿ ಇರಲಿ' ಕವನ ಸಂಕಲನವನ್ನು ಕೊಂಡು ಓದುವ ಪ್ರೀತಿ ಇರಲಿ ಎಂದು ಪ್ರೊ.ಎನ್.ಜಿ. ಪಟವರ್ಧನ್ ಆಶಿಸಿದರು.
ಅವರು ಇತ್ತೀಚೆಗೆ ಉಜಿರೆ ಧ.ಮಂ. ಸೆಮಿನಾರ್ ಹಾಲ್‌ನಲ್ಲಿ ಶ್ರೀ.ಧ.ಮಂ. ಕಾಲೇಜಿನ ಕನ್ನಡ ಸಂಘದ ಆಶ್ರಯಲ್ಲಿ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಚಂದ್ರಹಾಸ ಬಳೆಂಜ ಅವರ ಚೊಚ್ಚಲ ಕವನ ಸಂಕಲನ ಪ್ರೀತಿ ಇರಲಿ ಬಿಡುಗಡೆ ಮಾಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ಟಿ. ಕೃಷ್ಣಮೂರ್ತಿ, ಸಭೆಯಲ್ಲಿ ಚಂದ್ರಹಾಸರ ಹೆತ್ತವರಾದ ಸುಶೀಲಾ ಮತ್ತು ಶ್ರೀಧರ ಪೂಜಾರಿ ದಂಪತಿ ಉಪಸ್ಥಿತರಿದ್ದದ್ದನ್ನು ಕಂಡು, ಈ ರೀತಿ ಯಾವುದೇ ವಿದ್ಯಾರ್ಥಿಗಳ ಕೃತಿ ಬಿಡುಗಡೆಯಾಗುವಾಗ ಹೆತ್ತವರಿದ್ದರೆ ಅದೇ ಶ್ರೀರಕ್ಷೆ ಎಂದರು. ಕೃತಿಗೆ ಬೆನ್ನುಡಿ ಬರೆದಿರುವ ಪ್ರಾಧ್ಯಾಪಕ ಕವಿ ದಿವಾ ಕೊಕ್ಕಡ, ಈ ಕೃತಿ ಜೀವನ ಪ್ರೀತಿಯ ಮೌಲ್ಯವನ್ನು ಎತ್ತಿ ಹಿಡಿದಿದೆ ಎಂದರು. ಕನ್ನಡ ವಿಭಾಗದ ಮುಖ್ಯಸ್ಥ, ಕೃತಿಗೆ ಮುನ್ನುಡಿ ಬರೆದಿರುವ ಡಾ.ಬಿ.ಪಿ. ಸಂಪತ್ ಕುಮಾರ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.