ದಕ್ಷಿಣ ಕನ್ನಡ

3 ತಿಂಗಳಲ್ಲಿ ಪರೀಕ್ಷೆ ಮಾಡಿದರೆ ಓದುವವನಿಗೆ ತ್ರಾಸು!

Published On :

ಮಂಗಳೂರು: ಸಂಪುಟದಲ್ಲಿರುವ ಸಚಿವರ ಪರೀಕ್ಷೆ, ಮೌಲ್ಯಮಾಪನ ನಡೆಸುವುದು ಜನರ ಹಕ್ಕು. ರಾಜ್ಯದ ಜನರು ಪ್ರತಿ ದಿನ ಪರೀಕ್ಷೆ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರು  ಮೂರು ತಿಂಗಳಿಗೊಮ್ಮೆ ಸಚಿವರ ರೇಟಿಂಗ್ ಪರೀಕ್ಷೆ ನಡೆಸಿದರೆ ಓದುವವನಿಗೆ ತ್ರಾಸ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
 ಆದರೆ ಪರೀಕ್ಷೆ ಮಾಡುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತಷ್ಟು ಕ್ರಿಯಾಶೀಲವಾಗುತ್ತದೆ ಎಂದರು.
56 ಲಕ್ಷ ಶೌಚಾಲಯ: ಚುನಾವಣೆ ಪ್ರಣಾಳಿಕೆಯಲ್ಲಿದ್ದ ಅರ್ಧದಷ್ಟು ಭರವಸೆಗಳನ್ನು 4 ತಿಂಗಳ ಒಳಗೆ ಪೂರೈಸಿದ್ದೇವೆ. ರಾಜ್ಯದಲ್ಲಿ 56 ಲಕ್ಷ ಶೌಚಾಲಯ ನಿರ್ಮಿಸಲು ಗುರಿ ಇದೆ. ಈಗಾಗಲೇ 1 ಲಕ್ಷ ಶೌಚಾಲಯ ನಿರ್ಮಾಣ ಹಂತದಲ್ಲಿದೆ. ಹಿಂದಿನ ಬಿಜೆಪಿ ಸರ್ಕಾರ ಗ್ರಾಮ ಸಭೆಗಳನ್ನು ನಡೆಸದೆ ಪಂಚಾಯ್ತಿ ವ್ಯವಸ್ಥೆಯನ್ನೇ ಹಾಳು ಮಾಡಲು ಯತ್ನಿಸಿತ್ತು. ಈಗ ಅದೆಲ್ಲ ಸರಿಪಡಿಸುತ್ತಿದ್ದೇವೆ ಎಂದರು.
 ಆಶ್ರಯ ಯೋಜನೆ ಫಲಾನುಭವಿಗಳಿಗೆ ಸಮಸ್ಯೆ ಮತ್ತು ಫಾರ್ಮ್ 9, 11 ಸಮಸ್ಯೆಗೆ ಶೀಘ್ರ ಪರಿಹಾರ ನೀಡಲಾಗುವುದು ಎಂದರು.
ನಂಬಲು ಸಾಧ್ಯವಿಲ್ಲ: ಅನ್ನಭಾಗ್ಯ ಯೋಜನೆ ವಿರುದ್ಧ ಮಾತನಾಡಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು, ರಾಜಿನಾಮೆ ಸಲ್ಲಿಸುವಂತೆ ಒತ್ತಡ ಹೇರಿದ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲ್, 'ಒಬ್ಬ ಹಿರಿಯ ಕಾಂಗ್ರೆಸಿಗ ಈ ರೀತಿ ಹೇಳಿಕೆ ನೀಡುತ್ತಾರೆ ಎಂದು ನನಗೆ ನಂಬಲು ಸಾಧ್ಯವಿಲ್ಲ' ಎಂದರು.
ಮೊದಲ ಪ್ರಶ್ನೆ: ಎತ್ತಿನಹೊಳೆ, ನೇತ್ರಾವತಿ ನದಿ ತಿರುವು ಯೋಜನೆಯಿಂದ ಈ ಭಾಗದ ಕೃಷಿಕರು, ನಗರ ಪ್ರದೇಶದವರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಟೀಲ್, ಇಂಥ ಪ್ರಶ್ನೆ ನನಗೆ ಮೊದಲ ಬಾರಿಗೆ ಬಂದಿದೆ. ಈ ಬಗ್ಗೆ ಅಧ್ಯಯನ ನಡೆಸುತ್ತೇನೆ, ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದರು.
 ಈ ಸಂದರ್ಭ ಅರಣ್ಯ ಸಚಿವ ಬಿ.ರಮಾನಾಥ ರೈ ಸ್ಪಷ್ಟನೆ ನೀಡಿ, ನದಿ ತಿರುವು ಯೋಜನೆಯಿಂದ ಜಿಲ್ಲೆಯ ಭೌಗೋಳಿಕ ಪರಿಸರಕ್ಕೆ ಆಗುವ ಧಕ್ಕೆ ಬಗ್ಗೆ ಸಮಗ್ರ ಅಧ್ಯಯನ ನಡೆಸುವ ಬಗ್ಗೆ ಸರ್ಕಾರಕ್ಕೆ ಕೋರಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಮೊಯ್ದಿನ್ ಬಾವ, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಅಧ್ಯಕ್ಷ ಇಬ್ರಾಹಿ ಕೋಡಿಜಾಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಗಟ್ಟಿ, ಉಡುಪಿ ಜಿಲ್ಲಾಧ್ಯಕ್ಷ ಎಂ.ಎ.ಗಫೂರ್, ಸುರೇಶ್ ಬಲ್ಲಾಳ್, ಬದ್ರುದ್ದೀನ್, ಪದ್ಮನಾಭ ನರಿಂಗಾನ, ಶಶಿಧರ ಹೆಗ್ಡೆ, ಸದಾಶಿವ ಉಳ್ಳಾಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.