ಧರ್ಮಸ್ಥಳದಲ್ಲಿ ಇಂದಿನಿಂದ ರಾಮಕಥೆ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಗಳವಾರದಿಂದ ಶ್ರೀರಾಮ ಕಥಾ ನಿರೂಪಣೆ ಪ್ರಾರಂಭವಾಗಲಿದೆ. ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ರಾಮನ ಆದರ್ಶಗಳನ್ನು ವಿವರಿಸಲಿದ್ದಾರೆ.
ಶ್ರೀಗಳು ಸೋಮವಾರ ಸಂಜೆ ಕ್ಷೇತ್ರವನ್ನು ಪ್ರವೇಶಿದ್ದು ಅವರನ್ನು ಮುಖ್ಯ ಪ್ರವೇಶ ದ್ವಾರದಿಂದ ಬೀಡಿನವರೆಗೆ 1954ರ ಮಾಡೆಲ್ ಡಾಡ್ಜ್ ಕಾರಿನಲ್ಲಿ ಸ್ವಾಮೀಜಿಯನ್ನು ಹೆಗ್ಗಡೆಯವರ ಜೊತೆ ಮೆರವಣಿಗೆಯಲ್ಲಿ ಕರೆತರಲಾಯಿತು. ಬಳಿಕ ಬೀಡಿನಲ್ಲಿ ಪಾದಪೂಜೆ ನಡೆಯಿತು. ಶ್ರೀ ಸನ್ನಿಧಿ ಅತಿಥಿಹಗೃಹದಲ್ಲಿ ಶ್ರೀಗಳು ಒಂದು ವಾರ ಮೊಕ್ಕಾಂ ಇರುವರು.
ಕ್ಷೇತ್ರದಲ್ಲಿ 15ನೇ ವರ್ಷದ ಭಜನಾ ತರಬೇತಿ ಕಮ್ಮಟವೂ ಆದಿತ್ಯವಾರ ಪ್ರಾರಂಭಗೊಂಡಿದ್ದು ಶಿಬಿರಾರ್ಥಿಗಳಿಗೆ ಮತ್ತು ನಾಡಿನ ಎಲ್ಲಾ ಆಸಕ್ತ ಜನರಿಗೆ ಶ್ರೀರಾಮ ಕಥೆಯ ಪ್ರವಚನ ಕೇಳಿಸಬೇಕು ಎಂಬ ಉದ್ದೇಶದಿಂದ ಶ್ರೀ ರಾಮ ಕಥಾ ನಿರೂಪಣೆಯನ್ನು ಸಂಯೋಜಿಸಲಾಗಿದೆ. ಕ್ಷೇತ್ರದಲ್ಲಿ 3 ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಶ್ರೀ ರಾಘವೇಶ್ವರ ಸ್ವಾಮೀಜಿ ಉದ್ಘಾಟಿಸಿ ಆಶೀರ್ವದಿಸಿದ್ದರು ಎಂದು ಈ ಸಂದರ್ಭ ನೆನಪಿಸಿಕೊಳ್ಳಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

