ಕಾಯಂ ಶಿಕ್ಷಕರಿಗೆ ತಾತ್ಕಾಲಿಕ ಹುದ್ದೆ ಮುಂದುವರಿಕೆ
ಮಂಗಳೂರು: ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಮುಂದಿನ ವರ್ಷಕ್ಕೆ ತಾತ್ಕಾಲಿಕವಾಗಿ ವಿಸ್ತರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದ್ದು, ಇದರಿಂದ ಸುಮಾರು ಆರು ಸಾವಿರಕ್ಕೂ ಅಧಿಕ ಮಂದಿ ಶಿಕ್ಷಕರು ನಿಟ್ಟುಸಿರು ಬಿಡುವಂತಾಗಿದೆ.
ಶಿಕ್ಷಕರು ಕಾಯಂ ಆದರೂ ಅವರ ಹುದ್ದೆ ಕಾಯಂ ಆಗದಿರುವ ಬಗ್ಗೆ ಸೆ.13ರಂದು 'ಸರ್ಕಾರಿ ನೌಕರರಿಗೆ ಇಲ್ಲ ಖಾತರಿ' ಶಿರೋನಾಮೆಯಡಿ 'ಕನ್ನಡಪ್ರಭ'ದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಮಾರ್ಚ್ನಲ್ಲಿ ಈ ಶಿಕ್ಷಕರ ಹುದ್ದೆಯನ್ನು ಮುಂದಿನ ವರ್ಷಕ್ಕೆ ಮುಂದುವರಿಸುವುದು ವರ್ಷಂಪ್ರತಿ ನಡೆಯುವ ಪ್ರಕ್ರಿಯೆ. ಆದರೆ ಈ ವರ್ಷ ಈ ಪ್ರಕ್ರಿಯೆ ಸಕಾಲದಲ್ಲಿ ನಡೆಯದೆ ಜುಲೈನಿಂದ ವೇತನ ಸ್ಥಗಿತಗೊಂಡಿರುವ ಬಗ್ಗೆ ಪತ್ರಿಕೆ ಗಮನ ಸೆಳೆದಿತ್ತು. ಇದೀಗ ಸೆ.13ರಂದೇ ಮುಂದಿನ ಮಾರ್ಚ್ 31ರ ವರೆಗೆ ತಾತ್ಕಾಲಿಕ ಹುದ್ದೆ ಮುಂದುವರಿಸಿದ ಆದೇಶವನ್ನು(ಸಂಖ್ಯೆ: ಇಡಿ 130 ಯೋಯೋಕ, 13-9-2013) ಶಿಕ್ಷಣ ಇಲಾಖಾ ಅಧೀನ ಕಾರ್ಯದರ್ಶಿ ಐ.ಎಫ್. ಮಾಗಿ ನಡಾವಳಿ ಹೊರಡಿಸಿದ್ದಾರೆ.
ಮೂಲ್ಕಿ: ಅ.5ರಿಂದ ಶರನ್ನವರಾತ್ರಿ
ಮೂಲ್ಕಿ: ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘ ಆಶ್ರಯದಲ್ಲಿ ಶರನ್ನವರಾತ್ರಿ ಮಹೋತ್ಸವ ಅ.5ರಿಂದ 13ರವರೆಗೆ ಜರುಗಲಿದೆ. ಅ.5ರಂದು ಬೆಳಗ್ಗೆ ನವರಾತ್ರಿ ಉತ್ಸವದ ಉದ್ಘಾಟನೆಯನ್ನು ಚಿತ್ರಾಪು ಮೂಕಾಂಬಿಕಾ ಮಂದಿರದ ಕೇಶಾವನಂದ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. 13ರವರೆಗೆ ಪ್ರತಿದಿನ ಸಂಜೆ ಭಜನೆ ಮತ್ತು ಪೂಜೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

