ದಕ್ಷಿಣ ಕನ್ನಡ

ಕಡಂದಲೆ ಗಣಿಗಾರಿಕೆ ವಿರುದ್ಧ ಕ್ರಮ: ಕೇಮಾರುಶ್ರೀ

Published On :

ಮಂಗಳೂರು: ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಕಡಂದಲೆ ಮುರ್ತುಗುಡ್ಡೆಯಲ್ಲಿ ಪೋಬ್ ಸನ್ಸ್ ಕಂಪನಿ ನಡೆಸುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶವಿಠಲದಾಸ ಸ್ವಾಮೀಜಿ, ಸಂಬಂಧಿತರು ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದಿದ್ದಾರೆ.
ಕಳೆದ 15 ವರ್ಷದಿಂದ ಕೇರಳ ಮೂಲದ ಕಂಪನಿ ಗಣಿಗಾರಿಕೆ ನಡೆಸುತ್ತಿದೆ. ಸಾರ್ವಜನಿಕ ಹಿತಾಸಕ್ತಿ ಮರೆತು 25 ಎಕರೆಯಷ್ಟು ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಎಕರೆಗಟ್ಟಲೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದೆ. ಈ ಕಂಪನಿ ಕೃತ್ಯದ ಹಿಂದೆ ರಾಜಕೀಯ ಷಡ್ಯಂತರದ ಸಂಶಯವಿದ್ದು, ಜಿಲ್ಲಾಡಳಿತ, ಭೂ ಗಣಿವಿಜ್ಞಾನ ಇಲಾಖೆ, ಅರಣ್ಯ, ಕಂದಾಯ ಇಲಾಖೆಗಳು ಜಂಟಿ ಸರ್ವೇ ನಡೆಸಬೇಕು. ಕಂಪನಿ ಒತ್ತುವರಿ ಮಾಡಿಜ ಜಾಗ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಶಾಂಭವಿ ನದಿ ಹೋರಾಟ ಸಮಿತಿ ಮಾದರಿಯಲ್ಲಿ ಪ್ರತ್ಯೇಕ ಹೋರಾಟ ಸಮಿತಿ ರಚಿಸಿ ಉಗ್ರ ಹೋರಾಟ ನಡೆಸಲಾಗುವುದು ಅಲ್ಲದೆ ಕಾನೂನು ರೀತಿಯ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.
ಈ ಗಣಿಗಾರಿಕೆಯಿಂದ ಕೃಷಿ ನಾಶವಾಗಿದ್ದು, ಅಂತರ್ಜಲಕ್ಕೆ ತೊಂದರೆಯಾಗಿದೆ. ನೂರಾರು ಮರಗಳು ಆಹುತಿಯಾಗಿದ್ದು, ಶಾಂಭವಿ ನದಿಯೂ ಕಲುಷಿತಗೊಂಡಿದೆ. ಬಡವರಿಗೆ ಜಾಗ ನೀಡಲು ಪಂಚಾಯ್ತಿಗೆ ಮನವಿ ಮಾಡಿದರೆ ಜಾಗದ ಕೊರತೆ ತೋರಿಸುವವರು ಕಂಪನಿಗೆ ಹೇಗೆ ಸರ್ಕಾರಿ ಜಾಗ ನೀಡಿದರು ಎಂದು ಸ್ವಾಮೀಜಿ ಪ್ರಶ್ನಿಸಿದರು.
ಅರಣ್ಯ ನಾಶ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಸಚಿವರು ಹೇಳಿದ್ದು, ಇದು ಕಡಂದಲೆಯಿಂದಲೇ ಜಾರಿಯಾಗಲಿ. ಗಣಿಗಾರಿಕೆಯಿಂದ ಈ ಪ್ರದೇಶದಲ್ಲಿ ರೈತರಿಗೂ ಸಂಕಷ್ಟ ಬಂದೊದಗಿದೆ ಎಂದು ಹೋರಾಟಗಾರರ ಮುಖಂಡ ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.