ಕೇಂದ್ರ ತಂಡ ಅಧ್ಯಯನಕ್ಕೆ ಅಲ್ಲ ಪ್ರವಾಸಕ್ಕೆ ಬಂದಂತಿದೆ: ನಳಿನ್
ಮೂಲ್ಕಿ: ಅತಿವೃಷ್ಟಿಯಿಂದಾದ ಹಾನಿಯ ಬಗ್ಗೆ ಸಮೀಕ್ಷೆ ನಡೆಸಲು ಜಿಲ್ಲೆಗೆ ಆಗಮಿಸಿದ ಕೇಂದ್ರದ ಅಧ್ಯಯನ ತಂಡವು ಅಧ್ಯಯನ ನಡೆಸುವ ಬದಲು ಪ್ರವಾಸಕ್ಕೆ ಬಂದ ಹಾಗೆ ಬಂದು ಐಷರಾಮಿಯಾಗಿ ತಿಂದುಂಡು ಹೋಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ದೂರಿದರು.
ಕಿನ್ನಿಗೋಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ತಂಡ ಮಳೆ ಹಾನಿ ಪರಿಶೀಲನೆಗೆ ಬರುತ್ತಿರುವ ಬಗ್ಗೆ ಸಂಸದನಾದ ತನಗೆ ಕೂಡ ಮಾಹಿತಿ ನೀಡಿಲ್ಲ. ರೈತರ ಕೊಳೆ ರೋಗದ ಬಗ್ಗೆ, ರಸ್ತೆ ಹಾನಿ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಜಿಲ್ಲೆಯ ಶಾಸಕರು, ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಹೇಳಿದರು. ಕೇಂದ್ರದ ಆರ್ಥಿಕ ನೀತಿಯ ವೈಫಲ್ಯದಿಂದಾಗಿ ಬೆಲೆಯೆರಿಕೆಯಾಗಿದೆ. ಕೇಂದ್ರದ ಯುಪಿಎ ಭ್ರಷ್ಟಚಾರದ ಹಗರಣದಲ್ಲಿ ಮುಳುಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ರಕ್ಷಣಾ ವ್ಯವಸ್ಥೆ ವಿಫಲಗೊಂಡಿದೆ. ಗೋವು ಕಳ್ಳತನ, ಅತ್ಯಾಚಾರ, ದರೋಡೆ ಮುಂತಾದ ಪ್ರಕರಣಗಳು ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ದ್ವೇಷದ ವಾತಾವರಣ ನಿರ್ಮಾಣವಾಗಿದ್ದು, ಅಭಿವೃದ್ಧಿ ಕುಂಠಿತಗೊಂಡಿದೆ. ಸಚಿವರು ಸುಳ್ಳು ಭರವಸೆ ನೀಡುತ್ತಿದ್ದು, ಆಡಳಿತದಲ್ಲಿ ಚುರುಕು ಮುಟ್ಟಿಸುವ ಕಾರ್ಯ ಮುಖ್ಯಮಂತ್ರಿಯವರಿಂದ ಆಗಬೇಕಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

