ಮಹಿಳೆಯರ ರಕ್ಷಣೆ ಅಗತ್ಯ: ನಟಿ ಶ್ರುತಿ
ಸುಬ್ರಹ್ಮಣ್ಯ: ಮಹಿಳೆಯರ ರಕ್ಷಣೆ ಮತ್ತು ಅವರ ಹಿತ ಕಾಪಾಡುವುದು ಇಂದಿನ ಅಗತ್ಯವಾಗಿದೆ. ಆದ್ದರಿಂದ ಮಹಿಳೆಯರ ಆಶೋತ್ತರಗಳನ್ನು ಈಡೇರಿಸುವ ಕಾರ್ಯ ಆಗಬೇಕಿದೆ ಎಂದು ಬಿಜೆಪಿ ನಾಯಕಿ, ಚಿತ್ರನಟಿ ಶ್ರುತಿ ಹೇಳಿದರು.
ಅವರು ಪಡ್ಪಿನಂಗಡಿಯ ಶಿವಗೌರಿ ಕಲಾ ಮಂದಿರದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಮಹಿಳಾ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಮಹಿಳೆಯರ ಸಮಾನತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ವ್ಯಕ್ತಿಯನ್ನು ಬೆಂಬಲಿಸಬೇಕು ಎಂದು ಸರ್ವರಿಗೂ ತಿಳಿಸುವ ಕಾರ್ಯವು ಮಹಿಳಾ ಕಾರ್ಯಕರ್ತೆಯರಿಂದ ಆಗಬೇಕು. ಭಾರತದಲ್ಲಿ ಅಭಿವೃದ್ಧಿ ಶಖೆಯು ಮೊಳಗಲು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರೇ ಸೂಕ್ತ ಎಂಬ ಸತ್ಯವನ್ನು ಪ್ರತಿ ಕಾರ್ಯಕರ್ತೆಯು ಮನದಟ್ಟುಮಾಡಿಕೊಳ್ಳಬೇಕು ಎಂದು ತಿಳಿಸಿದರು. ನೆಮ್ಮದಿಯ ಜೀವನಕ್ಕೆ ಬದಲಾವಣೆ ಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸಲು ಹಾಗೂ ಮಹಿಳೆಯರ ರಕ್ಷಣೆಗೆ ಬಿಜೆಪಿಗೆ ಮತ ನೀಡಿ. ದೇಶದ ಭದ್ರತೆ ಹಾಗೂ ನಮ್ಮ ಸಂಸ್ಕೃತಿಯ ಪಾಲನೆಗೆ ಮೋದಿಯವರ ನಾಯಕತ್ವ ಅಗತ್ಯ. ಆದುದರಿಂದ ಅವರನ್ನು ಬೆಂಬಲಿಸಿ. ಪಕ್ಷದ ಗೆಲವಿಗೆ ಮಹಿಳಾ ಕಾರ್ಯಕರ್ತರ ಶ್ರಮವು ಅತ್ಯಗತ್ಯವಾಗಿದ್ದು, ಎಲ್ಲರೂ ಹೆಚ್ಚಿನ ಆಸಕ್ತಿ ಮತ್ತು ಪರಿಶ್ರಮದಿಂದ ಕಾರ್ಯಪ್ರವೃತ್ತರಾಗಬೇಕು ಎಂದರು. ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಮಾಜಿ ಉಪಾಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ಸಮಾವೇಶ ಉದ್ಘಾಟಿಸಿದರು.
ಶಾಸಕ ಎಸ್. ಅಂಗಾರ, ಬಿಜೆಪಿ ಮಹಿಳಾ ಮೋರ್ಚಾದ ಸಂಘಟನ ಕಾರ್ಯದರ್ಶಿ ಗೀತಾ ಧನಂಜಯ್, ತಾ.ಪಂ. ಅಧ್ಯಕ್ಷೆ ಗುಣವತಿ ಕೊಲ್ಲಂತ್ತಡ್ಕ, ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ, ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿ ಪುಲಸ್ಯಾ ರೈ, ಸುಳ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಚಿತ್ರ ಶಶಿಧರ್, ನಾಯಕಿಯರಾದ ಭಾಗ್ಯ ಪ್ರಸನ್ನ, ಪುಷ್ಪಲತಾ ಗಟ್ಟಿ, ಸರೋಜಿನಿ ಜಯಪ್ರಕಾಶ್, ಪ್ರಮೀಳಾ ಜನಾರ್ದನ, ಶೋಭಾ ನಲ್ಲೂರಾಯ, ಪುಷ್ಪಾವತಿ ಬಾಳಿಲ, ಕಲ್ಪನಾ ಬೊಳುಬೈಲು, ಸಾವಿತ್ರಿ ಶಿವರಾಂ, ಭಾಗೀರಥಿ ಮುರುಳ್ಯ, ಪೂರ್ಣಿಮಾ ಪ್ರಕಾಶ್, ನಾಯಕರಾದ ಹರೀಶ್ ಕಂಜಿಪಿಲಿ, ಮುಳಿಯ ಕೇಶವ ಭಟ್, ಎ.ವಿ. ತೀರ್ಥರಾಮ, ರಾಕೇಶ್ ರೈ ಕೆಡೆಂಜಿ ಇದ್ದರು. ಸುಭಾಷಿಣಿ ಶಿವರಾಂ ಪ್ರಾರ್ಥಿಸಿದರು. ಚಿತ್ರಾ ಶಶಿಧರ್ ಸ್ವಾಗತಿಸಿದರು. ಪುಲಸ್ಯಾ ರೈ ಪ್ರಸ್ತಾಪಿಸಿದರು. ಮಹಿಳಾ ಮೋರ್ಚಾದ ಕಾರ್ಯದರ್ಶಿ ಜಾನಕಿ ವಂದಿಸಿದರು. ಶೋಭಾ ನಲ್ಲೂರಾಯ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

