ದಕ್ಷಿಣ ಕನ್ನಡ

ನಳಿನ್ ದಾಖಲೆಗಳು ನಂಬಲರ್ಹವಲ್ಲ: ರೈ

Published On :

ಮಂಗಳೂರು: ಸಂಸದ ಮಾತನಾಡಿದ್ದಾರೆ ಎಂದು ಬಿಜೆಪಿಯವರೇ ತೋರಿಸಿರುವ ದಾಖಲೆಗಳು ನಂಬಲರ್ಹವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಲೇವಡಿ ಮಾಡಿದರು. ಸಂಸದ ನಳಿನ್ ಕುಮಾರ್ ಕಟೀಲ್ ಲೋಕಸಭೆಯಲ್ಲಿ ಮಾತನಾಡಿದ್ದರೆ ಮಾಧ್ಯಮಗಳಲ್ಲಿ ಪ್ರಸಾರ ಆಗಲೇಬೇಕಿತ್ತು. ಮಾಧ್ಯಮಗಳಲ್ಲಿ ಪ್ರಸಾರವಾಗದ ಹಿನ್ನೆಲೆಯಲ್ಲಿ ನಾನು ಸವಾಲು ಹಾಕಿದ್ದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಂಸದರ ನಿಧಿ ಬಳಕೆ ಸಾಧನೆಯೇ ಅಲ್ಲ. ನಿಧಿ ಬಳಕೆ ಬಿಟ್ಟರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದರ ಸಾಧನೆ ದೊಡ್ಡ ಶೂನ್ಯ ಎಂದರು.
 ಬಿಜೆಪಿಗರು ಸಮಾಜದಲ್ಲಿ ವಿಷಬೀಜ ಬಿತ್ತಿ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುತ್ತಿದ್ದಾರೆ. ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅಮಾಯಕಿ. ಕೋಡಿಕೆರೆಯ ಕ್ರಿಮಿನಲ್‌ಗಳ ಗ್ಯಾಂಗ್ ಬೆದರಿಕೆ ಒಡ್ಡಿದೆ, ಅವರನ್ನು ಜೈಲಿಗೆ ಅಟ್ಟಬೇಕು. ಆದರೆ ಗೂಂಡಾಗಳನ್ನು ಬಂಧಿಸುವ ವಿರುದ್ಧ ಕೆಲವರು ಸಮರ್ಥನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಗೆಲ್ಲುವುದು ಸಮೀಕ್ಷೆಯಿಂದ ತಿಳಿದು ಬಂದಿದ್ದು, ಇದರಿಂದ ಹತಾಶರಾಗಿ ಅಪಪ್ರಚಾರ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.  ರಾಜ ವ್ಯಾಪಾರಿ ಆದರೆ ಪ್ರಜೆ ಬಿಕಾರಿ ಆಗ್ತಾರೆ ಎಂಬ ಮಾತಿದೆ. ತಾನೇನು ಬೀದಿಯಿಂದ ಬಂದಿಲ್ಲ. ಒಳ್ಳೆಯ ಮನೆತನದಿಂದ ಬಂದಿದ್ದೇನೆ. ಮಾಜಿ ಸಚಿವರಂತೆ ತಾನು ಕಲ್ಲು, ಮರಳು, ಮಣ್ಣು ವ್ಯಾಪಾರ ನಡೆಸುತ್ತಿಲ್ಲ. ತಾನು ತಂದೆಯ ಸ್ವಂತ ಜಾಗದಲ್ಲಿ ಮನೆ ಕಟ್ಟಿದ್ದೇನೆ. ಮಾಜಿ ಸಚಿವರು ತಾನು ಎಲ್ಲಿದ್ದವರು ರಾಜಕೀಯಕ್ಕೆ ಬಂದಿರುವುದು ಎಂಬುದನ್ನು ತಿಳಿದುಕೊಳ್ಳಲಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.