ಪ್ರೇಯಸಿಯ ಚಿನ್ನ ಕದ್ದು ಮಿಸ್ಡ್ ಕಾಲ್ ಪ್ರೇಮಿ ಪರಾರಿ!
ಬಂಟ್ವಾಳ: ಮೊಬೈಲ್ ಮಿಸ್ಡ್ಕಾಲ್ ಏನೇನು ಅವಾಂತರಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ. ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ಯುವತಿಯೊಬ್ಬಳಿಗೆ ಅಪರಿಚಿತ ಯುವಕನಿಂದ ಬಂದ ಮಿಸ್ಡ್ಕಾಲ್ ಪರಿಚಯಕ್ಕೆ ತಿರುಗಿ, ಆತ ಮನೆಗೂ ಆಗಮಿಸಿ ಆಕೆಯ ಚಿನ್ನಾಭರಣ ಪಡೆದು ಪರಾರಿಯಾದ ಪ್ರಕರಣ ನಡೆದಿದೆ. ಯುವಕ ತನ್ನ ಹೆಸರನ್ನು ಸುಭಾಷ್ ಎಂದು ಹೇಳಿಕೊಂಡಿದ್ದು, ವಿಳಾಸವನ್ನು ಯುವತಿ ವಿಚಾರಿಸಿಲ್ಲ ಎನ್ನಲಾಗಿದೆ. ದೂರವಾಣಿ ಮೂಲಕವೇ ಯುವತಿಯ ಹೆಸರು, ವಿಳಾಸ ಪಡೆದು ಕೆಲವು ದಿನಗಳ ಹಿಂದೆ ಆಕೆಯ ಮನೆಗೆ ಬಂದಿದ್ದ. ಈ ಸಂದರ್ಭದಲ್ಲಿ ಸುಭಾಷ್ ಆಕೆಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಬಳಿಕ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಕಿವಿಯಲ್ಲಿದ್ದ ಚಿನ್ನದ ಬೆಂಡೋಲೆ ಪಡೆದು ಅದನ್ನು ಕಲ್ಲಡ್ಕದ ಸಹಕಾರಿ ಬ್ಯಾಂಕ್ವೊಂದರಲ್ಲಿ ಅಡವಿಟ್ಟು ಪರಾರಿಯಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

